ಏಷ್ಯನ್ ಗೇಮ್ಸ್: ಜಾವಲಿನ್ ಥ್ರೋದಲ್ಲಿ ಭಾರತದ ನೀರಜ್ ಚೋಪ್ರಾಗೆ ಚಿನ್ನ!
ಜಕಾತರ್ಾ: ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ ಜಾವೆಲಿನ್ ಥ್ರೊದಲ್ಲಿ ಭಾರತದ ನೀರಜ್ ಚೋಪ್ರ ಸೋಮವಾರ ಐತಿಹಾಸಿಕ ಚಿನ್ನದ ಪದಕ ಗಳಿಸಿದ್ದಾರೆ.
ಮೊದಲ ಎಸೆತದಲ್ಲಿ 83.46 ಅಂಕ ಗಳಿಸಿದ್ದ ಚೋಪ್ರಾ ಮೂರನೇ ಎಸೆತದಲ್ಲಿ 88.06 ಅಂಕದೊಂದಿಗೆ ಚಿನ್ನಕ್ಕೆ ಗುರಿ ಇಟ್ಟರು.
ಚೀನಾದ ಕಿಝೆನ್ ಲಿಯು 82.22 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ ಪಾಕಿಸ್ತಾನದ ಅರ್ಷದ್ ನದೀಮ್ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಏಷಿಯನ್ ಗೇಮ್ಸ್ ಇತಿಹಾಸದಲ್ಲಿ ಜಾವೆಲಿನ್ ಥ್ರೊದ ವಿಭಾಗದಲ್ಲಿ ಇದು ಭಾರತಕ್ಕೆ ಸಂದ ಪ್ರಥಮ ಚಿನ್ನದ ಪದಕವಾಗಿದೆ.
ಪ್ರಸಕ್ತ ಸಾಲಿನಲ್ಲಿ ಶಾಟ್ ಪೂಟ್ ನಲ್ಲಿ ತಾಜಿಂದರ್ ಸಿಂಗ್ ಚಿನ್ನ ಗಳಿಸಿದ ಬಳಿಕ ಅಥ್ಲೆಟಿಕ್ಸ್ ನಲ್ಲಿ ಇದು ಭಾರತದ ಪಾಲಿನ ಎರಡನೇ ಚಿನ್ನದ ಪದಕವಾಗಿದೆ.