HEALTH TIPS

No title

                 ಪ್ರಳಯ ಸಂತ್ರಸ್ತರಿಗೆ ಹರಿದು ಬರುತ್ತಿರುವ ನೆರವಿನ ಹಸ್ತ ಸಮರಸ ಚಿತ್ರ ಸುದ್ದಿ:
                 ಮೀಯಪದವು ಶಾಲೆಯಿಂದ ನೆರವಿನ ಹಸ್ತ
   ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ವತಿಯಿಂದ ಕೇರಳದ ಕೆಲವು ಭಾಗಗಳಲ್ಲಿ ಬಂದ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಸಹಾಯವನ್ನು ಒದಗಿಸುವ ಉದ್ದೇಶದಿಂದ ಶಾಲಾ ವತಿಯಿಂದ ಆಹಾರ, ನೀರು, ಔಷಧ, ಬಟ್ಟೆಬರೆಗಳನ್ನು ಸಂಗ್ರಹಿಸಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಡಾ.ಜಯಪ್ರಕಾಶ ನಾರಾಯಣ, ಪ್ರಾಂಶುಪಾಲರಾದ  ರಮೇಶ್ ಕೆ.ಎನ್, ಮುಖ್ಯೋಪಾಧ್ಯಾಯರಾದ ಎಸ್.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸಾರ್ವಜನಿಕರು, ಅಧ್ಯಾಪಕರು, ವಿದ್ಯಾಥರ್ಿಗಳು ತಮ್ಮ ಕೈಲಾದ ಸಹಾಯವನ್ನು ನೀಡಿದರು.
 
...................................................................................................................................................................................................................................................................
          ಮಹಾಪ್ರಳಯ : ದುರಂತ ಬಾಧಿತರಿಗೆ ಬಿಜೆಪಿ ಸಹಾಯ ಹಸ್ತ
    ಕಾಸರಗೋಡು: ಅನಿರೀಕ್ಷಿತವಾಗಿ ಬಂದೆರಗಿದ ಮಹಾ ಪ್ರಳಯದಲ್ಲಿ ಸಂಕಷ್ಟ ಅನುಭವಿಸುವ ಕೇರಳದ ಜನತೆಗೆ ಬಿಜೆಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಸಹಾಯ ನೀಡಲಾಗುತ್ತಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು, ನೇತಾರರು ಸೇರಿ ದುರಂತಕ್ಕೀಡಾದವರಿಗೆ ಬಟ್ಟೆ ಬರೆಗಳು, ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಕಾಸರಗೋಡಿನ ಬಟ್ಟೆ ಬರೆ ಅಂಗಡಿ ಮಾಲಕ ದಿವಾಕರ ಪ್ರಭು ಅವರಿಂದ ಬಟ್ಟೆ ಬರೆ ಸ್ವೀಕರಿಸಿ ನೆರವೇರಿಸಿದರು. ಜಿಲ್ಲಾ ಉಪಾಧ್ಯಕ್ಷೆ ಸವಿತಾ, ಕೋಶಾಧಿಕಾರಿ ಜಿ.ಚಂದ್ರನ್, ಹಿಂದುಳಿದ ಜಾತಿ ವಿಭಾಗ (ಒಬಿಸಿ) ಮೋಚರ್ಾ ಜಿಲ್ಲಾ ಅಧ್ಯಕ್ಷ ಎನ್.ಸತೀಶ್, ಯುವಮೋಚರ್ಾ ರಾಜ್ಯ ಕಾರ್ಯದಶರ್ಿ ಎ.ಪಿ.ಹರೀಶ್ ಕುಮಾರ್, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ, ಕೌನ್ಸಿಲರ್ಗಳಾದ ದುಗ್ಗಪ್ಪ, ಕೆ.ಜಿ.ಮನೋಹರನ್, ರವಿ ಕರಂದಕ್ಕಾಡ್, ಟೌನ್ ಕಮಿಟಿ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಯುವಮೋಚರ್ಾದ ಧನಂಜಯ ಮಧೂರು ಮೊದಲಾದವರಿದ್ದರು.
................................................................................................................................................................................................................................................................
              ನೊಂದವರಿಗೆ ಸಹಾಯಹಸ್ತ
   ಕಾಸರಗೋಡು: ಪ್ರಕೃತಿ ವಿಕೋಪಕ್ಕೆ ತತ್ತರಿಸಿದ ಜನತೆಗೆ ಸಹಾಯ ನೀಡಲು ಕಾಸರಗೋಡು ಸೇವಾ ಸಹಕಾರಿ ಬ್ಯಾಂಕಿನ  ನೌಕರರು, ನಿದರ್ೇಶಕರು ಹಾಗೂ ಬ್ಯಾಂಕ್ನ ಫಂಡ್ನಿಂದ ಸ್ವೀಕರಿಸಿದ 5 ಲಕ್ಷ ರೂ. ಯನ್ನು ಬ್ಯಾಂಕ್ನ ಅಧ್ಯಕ್ಷರಾದ ಎಸ್.ಜೆ.ಪ್ರಸಾದ್ ಅವರು ಸಹಕಾರಿ ಉಪ ನಿಬಂಧಕರಾದ ಕೆ.ಮುರಳೀಧರನ್ ಹಾಗೂ ಕೆ.ಜಯಚಂದ್ರನ್ ಅವರಿಗೆ ಹಸ್ತಾಂತರಿಸಿದರು.
   ಬ್ಯಾಂಕ್ ಹಾಲ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಪಿ.ದಾಮೋದರನ್ ಅಧ್ಯಕ್ಷತೆ ವಹಿಸಿದರು. ಸಹಕಾರಿ ನಿಬಂಧಕರಾದ ಕೆ.ಮುರಳೀಧರನ್, ಪಿ.ಜಯಚಂದ್ರನ್, ಕಾರ್ಯದಶರ್ಿ ಸುಮತಿ,  ಕೆ.ಬಾಲಚಂದ್ರನ್, ಬೈಜುರಾಜ್ ಮೊದಲಾದವರು ಮಾತನಾಡಿದರು. ಎಂ.ಅಶೋಕ್ ರೈ ಸ್ವಾಗತಿಸಿದರು. ಪಿ.ಜಾನಕಿ ವಂದಿಸಿದರು.
..................................................................................................................................................................................................................................................................
              ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸಹಾಯ ಹಸ್ತ
   ಮಧೂರು: ಕೇರಳದ ನೆರೆ ಪೀಡಿತ ಪ್ರದೇಶದ ಜನರ ಸಹಾಯಕ್ಕಾಗಿ ಮಧೂರು ಸಹಕಾರಿ ಬ್ಯಾಂಕ್ನ ವತಿಯಿಂದ 1 ಲಕ್ಷ ರೂ. ಸಹಾಯ ಹಸ್ತವನ್ನು ನೀಡಲಾಯಿತು.
ಬ್ಯಾಂಕ್ನ ಅಧ್ಯಕ್ಷರಾದ ಕೆ.ನಾರಾಯಣಯ್ಯ ಅವರು ಒಂದು ಲಕ್ಷ ರೂ. ಚೆಕ್ನ್ನು ಕಾಸರಗೋಡು ವಲಯದ ಸಹಕಾರಿ ಸಹಾಯಕ ನೊಂದಾವಣಾಧಿಕಾರಿ ಜಯಚಂದ್ರನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ನ ಉಪಾಧ್ಯಕ್ಷರಾದ ಮಾಲಿಂಗ ನಾಕ್, ಕಾರ್ಯದಶರ್ಿ ಎ.ನಾರಾಯಣ ಮೂಲ್ಯ, ನಿದರ್ೇಶಕರಾದ ಶಾರದಾ ಎಸ್.ಎನ್.ಭಟ್, ದುಗರ್ಾಪರಮೇಶ್ವರಿ, ರವಿಶಂಕರ ಹಾಗೂ ಬ್ಯಾಂಕ್ನ ನೌಕರ ವೃಂದದವರು ಉಪಸ್ಥಿತರಿದ್ದರು. ಚೆಕ್ ಸ್ವೀಕರಿಸಿದ ಜಯಚಂದ್ರನ್ ಅವರು ಮಾತನಾಡಿ ಸಹಾಯಹಸ್ತ ನೀಡಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸಿ ಊರಿನ ಎಲ್ಲಾ ಸಹಕಾರಿ ಬಂಧುಗಳೂ ಪರಿಹಾರ ನಿಧಿಗೆ ಕೈಲಾದ ಸಹಾಯ ನೀಡಿ ಸಹಕರಿಸಬೇಕೆಂದು ಕರೆ ನೀಡಿದರು.
 
...................................................................................................................................................................................................................................................................
               ಪ್ರಳಯ ಪೀಡಿತರಿಗೆ ಬಸ್ ಮಾಲಕ ಸಂಘದಿಂದ ಸಹಾಯ ಹಸ್ತಕ್ಕೆ ದಿನದ ಗಳಿಕಾ ಮೊತ್ತ ನೀಡಲು ತೀಮರ್ಾನ
    ಕಾಸರಗೋಡು: ಕೇರಳ ಈ ವರೆಗೆ ಕಂಡರಿಯದ ಮಹಾಪ್ರಳಯದಿಂದ ದುರಿತ ಎದುರಿಸುತ್ತಿರುವ ಸಂತ್ರಸ್ತರಿಗೆ ಸಹಾಯ ಹಸ್ತವಾಗಿ ಖಾಸಗಿ ಬಸ್ ಮಾಲಕರೂ ಮುಂದಾಗಿದ್ದಾರೆ. ಇದರಂತೆ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿರುವ ಎಲ್ಲಾ ಖಾಸಗಿ ಬಸ್ಗಳು ಆ.30 ರ ಗಳಿಕೆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟಸರ್್ ಫೆಡರೇಶನ್ ಕಾಸರಗೋಡು ಜಿಲ್ಲಾ ಸಮಿತಿ ತೀಮರ್ಾನಿಸಿದೆ.
   ಎಲ್ಲಾ ಖಾಸಗಿ ಬಸ್ ನೌಕರರು ತಮ್ಮ ಅಂದಿನ ವೇತನ ಪಡೆಯದಿರುವ ತೀಮರ್ಾನ ಕೈಗೊಂಡಿದ್ದಾರೆ. ವಿದ್ಯಾಥರ್ಿಗಳೂ ಸೇರಿದಂತೆ ಉಚಿತವಾಗಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರೂ ಅಂದು ಪೂರ್ಣ ದರ ನೀಡಿ ಸಹಕರಿಸುವಂತೆ ವಿನಂತಿಸಿದ್ದಾರೆ.
...................................................................................................................................................................................................................................................................

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries