11ರಂದು ಮುಳ್ಳೇರಿಯಾದಲ್ಲಿ ಐದನೆಯ ಯಕ್ಷನುಡಿ ಸರಣಿ, ಕನ್ನಡ ಜಾಗೃತಿ ಉಪನ್ಯಾಸ
ಮುಳ್ಳೇರಿಯ: ನೆಲದ ಮೂಲಬಾಷೆ ಮತ್ತು ಸಂಸ್ಕೃತಿಯ ಮೇಲೆ ಬೀಳುತ್ತಿರುವ ವಜ್ರಾಘಾತವನ್ನು ತಡೆಹಿಡಿಯುವ ಕೈಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ. ಒಂದೊಂದರಂತೆ ಆಘಾತಗಳು ಬಂದು, ಆತ್ಮಸಾಕ್ಷಿಗೆ ಒಪ್ಪುವಂತೆ ದುಡಿಯುವ ಮನಸ್ಸುಗಳನ್ನು ಮುದುಡಿಸುತ್ತವೆ. ಆದರೂ ಎಲ್ಲಾ ಪ್ರತಿರೋಧಗಳ ನಡುವೆಯೂ ಕಾಸರಗೋಡಿನ ಮಣ್ಣಿನ ಕಂಪನ್ನು, ನೆಲದ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕಾರ್ಯ ಕೆಲವೊಮ್ಮೆ ಸದ್ದು ಮಾಡುತ್ತಾ, ಕೆಲವೊಮ್ಮೆ ಸದಿಲ್ಲದ್ದೆ ನಡೆಯುತ್ತಿವೆ. ಹಲವು ಬಗೆಯ ಕನ್ನಡ ಪರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಿರಿಚಂದನ ಕನ್ನಡಯುವ ಬಳಗವು ಯಕ್ಷ ನುಡಿಸರಣಿ ಮನೆ ಮನೆ ಅಭಿಯಾನದ ಮೂಲಕ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ನಡೆಸುತ್ತಿದ್ದು, ಈ ಕಾರ್ಯ ಬಹುಮಂದಿಯ ಪ್ರಶಂಸೆಗೂ ಕಾರಣವಾಗಿದೆ. ಈಗಾಗಲೇ ನಾಲ್ಕು ನುಡಿ ಸರಣಿ ಮನೆಮನೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದ ಬಳಗದ ಹಿಂದೆ ಇಲ್ಲಿನ ಸಹೃದಯರ ಸಹಕಾರವಿದೆ. ಸಿರಿ ಚಂದನ ಕನ್ನಡ ಯುವ ಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಐದನೇ ಕಾರ್ಯಕ್ರಮವು ಮುಳ್ಳೇರಿಯಾ ಸಮೀಪದ ಕೆ.ಎಂ.ಗೋಪಾಲಕೃಷ್ಣ ಭಟ್ ಅವರ ಮನೆ `ಭಾಗ್ಯಶ್ರೀ'ಯಲ್ಲಿ ಆಗಸ್ಟ್ 11ರಂದು ಅಪರಾಹ್ನ 1 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ವಿಮರ್ಶಕ ರಾಧಾಕೃಷ್ಣ ಕೆ,ಉಳಿಯತ್ತಡ್ಕ ಅವರು ಉದ್ಘಾಟಿಸುವರು. ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರದ ಸಹಾಯಕ ಪ್ರಾಧ್ಯಾಪಕಿ ಲಕ್ಷೀ ಕೆ. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಿರಿಚಂದನ ಕನ್ನಡ ಯುವ ಬಳಗದ ಸದಸ್ಯೆ, ಎಂ.ಫಿಲ್. ವಿದ್ಯಾಥರ್ಿನಿ ಸಂಧ್ಯಾ ಎ.ಕಲ್ಲಕಟ್ಟ ಕನ್ನಡ ಜಾಗೃತಿ ಉಪನ್ಯಾಸ ನೀಡುವರು. ಬಳಗದ ಉಪಾಧ್ಯಕ್ಷ ಪ್ರಶಾಂತ್ ಹೊಳ್ಳ ಎನ್. ಅಧ್ಯಕ್ಷತೆ ವಹಿಸುವರು. ಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತವಿಕವಾಗಿ ಮಾತನಾಡುವರು.
ಬಳಿಕ ಯಕ್ಷಗಾನದ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರ ಮಾರ್ಗದರ್ಶನದಲ್ಲಿ ಸಿರಿ ಚಂದನ ಕನ್ನಡ ಯುವ ಬಳಗದ ಸದಸ್ಯರಿಂದ ವೀರ ಸೌಮಿತ್ರಿ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ ಪೆರ್ಲ, ಚೆಂಡೆ ಮತ್ತು ಮದ್ದಳೆಯಲ್ಲಿ ಶ್ರೀಸ್ಕಂದ ದಿವಾಣ ಮತ್ತು ಅನೂಪ್ ಸ್ವರ್ಗ ಸಹಕರಿಸುವರು. ಮುಮ್ಮೇಳದಲ್ಲಿ ಇಂದ್ರಜಿತುವಾಗಿ ದಿವಾಕರ ಬಲ್ಲಾಳ ಎ.ಬಿ, ಲಕ್ಷ್ಮಣ ನಾಗಿ ನವೀನ ಕುಂಟಾರು, ರಾವಣನಾಗಿ ಮನೋಜ್ ಎಡನೀರು, ಹನುಮಂತನಾಗಿ ಮಣಿಕಂಠ ಪಾಂಡಿಬಯಲು, ಶ್ರೀರಾಮನಾಗಿ ಶ್ರದ್ಧಾ ನಾಯರ್ಪಳ್ಳ, ಜಾಂಬವಂತನಾಗಿ ಕಾತರ್ಿಕ್ ಪಡ್ರೆ, ಮಾಯಾ ಸೀತೆಯಾಗಿ ಸುನಿತಾ ಮಯ್ಯ, ಹಾಗೂ ವಿಭೀಷಣನಾಗಿ ವೃಂದಾ ಬಳ್ಳಮೂಲೆ ಪಾತ್ರ ನಿರ್ವಹಿಸುವರು.
ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್, ಸದಸ್ಯ ಬಾಲಕೃಷ್ಣ ಬೆಳಿಂಜ, ಗಾಯಕ ಕಿಶೋರ್ ಪೆರ್ಲ, ಕೆ.ಎಂ ಗೋಪಾಲಕೃಷ್ಣ ಭಟ್, ಡಾ.ನರೇಶ್ ಮುಳ್ಳೇರಿಯ, ಸೌಮ್ಯಾ ಮಯ್ಯ ಮುಳ್ಳೇರಿಯಾ, ನುಡಿ ಸರಣಿ5ರ ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಮುಳ್ಳೇರಿಯ ಮುಂತಾದವರು ಉಪಸ್ಥಿತರಿರುವರು.