HEALTH TIPS

No title

                 ಸತ್ಯಸಾಯಿ ಜಿಲ್ಲಾ  ಸೇವಾ ಸಮಿತಿಗಳ ತ್ರೈಮಾಸಿಕ ಸಭೆ, ಕೈಪಿಡಿ ಬಿಡುಗಡೆ
    ಕುಂಬಳೆ: ಮನುಷ್ಯ ಸೇವಾ ಗುಣವನ್ನು ಬೆಳೆಸಿಕೊಂಡಲ್ಲಿ ಬದುಕು ನೆಮ್ಮದಿಯನ್ನು  ಕಾಣುತ್ತದೆ. ನಿಸ್ವಾರ್ಥ ಸೇವೆ ಮಾಡುವವನಲ್ಲಿ  ಪ್ರೇಮವೂ ಅಡಗಿರುತ್ತದೆ. ಶ್ರೀ ಸತ್ಯಸಾಯಿ ಬಾಬಾ ಅವರ ಸಂದೇಶವನ್ನು  ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸರಳ ಜೀವನದತ್ತ  ಮುಖ ಮಾಡಬೇಕು. ಇತರರ ಶ್ರೇಯೋಭಿವೃದ್ಧಿಗೆ ಪ್ರಯತ್ನ  ನಡೆಸಬೇಕು ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾಧ್ಯಕ್ಷ  ಶಿವರಾಮ ಕಜೆ ಅಭಿಪ್ರಾಯಪಟ್ಟರು.
   ಕಾಸರಗೋಡು ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ತ್ರೈಮಾಸಿಕ ಸಭೆಯನ್ನು ಉಪ್ಪಳ ಶ್ರೀ ಸಾಯಿ ಮಂದಿರದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
   ಮುಖ್ಯ ಅತಿಥಿಗಳಾಗಿ ಶಿರಿಯ ಶ್ರೀ ಸಾಯಿ ಸಮಿತಿಯ ನಿಕಟಪೂರ್ವ ಸಂಚಾಲಕ, ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ, ಜಿಲ್ಲಾ ಯುವ ಸಂಚಾಲಕ ಕೃಷ್ಣ ಪ್ರಸಾದ್ ಕಾಟುಕುಕ್ಕೆ, ರಾಧಾಕೃಷ್ಣ  ಹೊಳ್ಳ ಅಳಿಕೆ, ಜಿಲ್ಲಾ  ಬಾಲವಿಕಾಸ ಸಂಯೋಜಕಿ ಪ್ರೇಮಲತಾ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ  ಉಪಾಧ್ಯಕ್ಷ  ರಾಮಚಂದ್ರ ಐಲ, ಜಿಲ್ಲಾ  ಮಹಿಳಾ ಯುವ ಸಂಚಾಲಕಿ, ಪತ್ರಕತರ್ೆ ಸಾಯಿಭದ್ರಾ ರೈ ಎ. ಶಿರಿಯ ಉಪಸ್ಥಿತರಿದ್ದರು.
   ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಪದಾಧಿಕಾರಿಗಳ ಸಂಪೂರ್ಣ ವಿವರಗಳನ್ನೊಳಗೊಂಡ ಕೈಪಿಡಿಯನ್ನು  ಬಿಡುಗಡೆಗೊಳಿಸಲಾಯಿತು. ಬಳಿಕ ಇತ್ತೀಚೆಗೆ ನಿಧನ ಹೊಂದಿದ ಮಧೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಮಾಧವ ಹೊಳ್ಳ ಮಧೂರು ಅವರಿಗೆ ಶ್ರದ್ಧಾಂಜಲಿಯನ್ನು  ಸಲ್ಲಿಸಿ, ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು  ಅಪರ್ಿಸಲಾಯಿತು.
   ತ್ರೈಮಾಸಿಕ ಸಭೆಯಂಗವಾಗಿ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳಾದ ಬಾಯಾರು, ಉಪ್ಪಳ, ಶಿರಿಯ, ಕಾಟುಕುಕ್ಕೆ, ಕಾಸರಗೋಡು ಹಾಗೂ ಮಧೂರು ಸಮಿತಿಗಳ ಸಂಚಾಲಕರು ತಮ್ಮ  ಸೇವಾ ಚಟುವಟಿಕೆಗಳ ಸಂಪೂರ್ಣ ಮಾಹಿತಿ ನೀಡಿದರು. ವಿದ್ಯಾಜ್ಯೋತಿ ಯೋಜನೆಯಡಿ ಜಿಲ್ಲಾ  ಸಾಯಿ ಸಂಸ್ಥೆಗಳು ದತ್ತು ತೆಗೆದುಕೊಂಡ ಕುಂಬಳೆ ಸಮೀಪದ ಕುಂಟಂಗೇರಡ್ಕ ಜಿಡಬ್ಲ್ಯುಎಲ್ಪಿ ಶಾಲೆಯ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುವುದಾಗಿ ತೀಮರ್ಾನಿಸಲಾಯಿತು.
   ಉಪ್ಪಳ ಸಾಯಿ ಸಮಿತಿಯ ಸಂಚಾಲಕ ಶಿವಾನಂದ ಐಲ ಸ್ವಾಗತಿಸಿ, ರಾಮಚಂದ್ರ ಐಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಾಮಸಂಕಿರ್ತನೆ ಹಾಗೂ ಮಂಗಳಾರತಿಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries