HEALTH TIPS

No title

                 ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಆಧ್ಯಾಪಕ ಸಂಘ, ಕುಂಬಳೆ ಉಪಜಿಲ್ಲಾ ಘಟಕದ ಮಹಾಸಭೆ
    ಬದಿಯಡ್ಕ: ಕಾಸರಗೋಡು ಕನ್ನಡದ ನೆಲ. ಆದರೆ ಪ್ರಸ್ತುತ ಕಾಸರಗೋಡಿನ ಕನ್ನಡದ ಸ್ಥಿತಿಯನ್ನು ಕಂಡು ಮರುಕಪಡುವ ಕಾಲ ನಮ್ಮೆಲ್ಲರದ್ದಾಗಿದೆ. ಕನ್ನಡವನ್ನು ಬೆಳೆಸುವ ಬದಲು, ಉಳಿಸಲು ನಿರಂತರ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿರುವುದು ಖೇದಕರ.  ಈ ನಿಟ್ಟಿನಲ್ಲಿ ಕನ್ನಡದ ಹೆಸರಿನಲ್ಲಿ ಅನ್ನ ಪಡೆಯುವ ಅಧ್ಯಾಪಕರು, ಪ್ರಾಧ್ಯಾಪಕರು ಹಾಗೂ ಕನ್ನಡಾಭಿಮಾನಿಗಳು ಕನ್ನಡದ ಉಳಿವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕಾಗಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ ಉಪನ್ಯಾಸಕ ರಾಮ ಭಟ್ ಸಿ.ಯಚ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರಡಾಲ ನವಜೀವನ ಫ್ರೌಢಶಾಲೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಆಧ್ಯಾಪಕ ಸಂಘ, ಕುಂಬಳೆ ಉಪಜಿಲ್ಲಾ ಘಟಕದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಕುಂಬಳೆ ಉಪಜಿಲ್ಲಾ ಘಟಕದ  ಪ್ರಭಾವತಿ ಕೆದಿಲಾಯ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಕೇರಳದಲ್ಲಿ ಸಂಭವಿಸಿದ ದುರಂತದಲ್ಲಿ ಮಡಿದವರಿಗಾಗಿ ಮೌನಪ್ರಾರ್ಥನೆ ಸಲಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ, ಕನ್ನಡ ಹೋರಾಟ ಸಮಿತಿಯ ಮಹಾಲಿಂಗೇಶ್ವರ ಭಟ್ ಎಂ.ವಿ, ಕೇಂದ್ರ ಸಮಿತಿ ಅಧ್ಯಕ್ಷ  ರವೀಂದ್ರನಾಥ್, ನವಜೀವನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಮತ್ತಿತರು ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಜಿಲ್ಲಾ ಘಟಕದ ಕಾರ್ಯದಶರ್ಿ ಪ್ರಶಾಂತ್ ಕುಮಾರ್ ಶೇಣಿ ಸ್ವಾಗತಿಸಿ, ಕೋಶಾಧಿಕಾರಿ ಕಮಲಾಕ್ಷ ನಾಯಕ್ ನಲ್ಕ ವಂದಿಸಿದರು. ಶ್ರೀಧರ ಕೆ ಶೇಣಿ ನಿರೂಪಿಸಿದರು.
   ಬಳಿಕ ನಡೆದ ಪ್ರತಿನಿಧಿ ಸಮಾವೇಶದಲ್ಲಿ ಕನ್ನಡ ಶಾಲೆಗಳ ಕುರಿತು, ಪಠ್ಯಪುಸ್ತಕ ವಿತರಣೆ, ಸರಕಾರದಿಂದ ನಡೆಯುವ ಹಲವು ಶೈಕ್ಷಣಿಕ ಕಾರ್ಯಕ್ರಮಗಳು ಕನ್ನಡದ ವಿದ್ಯಾಥರ್ಿಗಳಿಗೆ ಸಮಾನ ರೀತಿಯಲ್ಲಿ, ಏಕಕಾಲದಲ್ಲಿ, ಕೊರತೆಯಾಗದಂತೆ ಸಿಗುವ ಬಗ್ಗೆ, ಕನ್ನಡದ ವಿದ್ಯಾಥರ್ಿಗಳಿಗೆ ಕನ್ನಡದ ಅಧ್ಯಾಪಕರನ್ನೇ ನೇಮಿಸುವ ಬಗ್ಗೆ, ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಚಚರ್ಿಸಲಾಯಿತು.
   2018-19 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶೇಣಿ ಶಾಲೆಯ ಶ್ರೀಧರ ಕೆ, ಕಾರ್ಯದಶರ್ಿಗಳಾಗಿ  ಪುಷ್ಪರಾಜ್ ಪಣಿಯೆ ಹಾಗೂ ಕೋಶಾಧಿಕಾರಿಯಾಗಿ ಯಕ್ಷಿತಾ ಬೇಂಗಪದವು ಆಯ್ಕೆಯಾದರು.
    ಶರತ್ ಕುಮಾರ್ ಕುಂಟಿಕಾನ ಸ್ವಾಗತಿಸಿ, ಶ್ರೀ ಪುಷ್ಪರಾಜ್ ಪಣಿಯೆ ವಂದಿಸಿದರು. ಶರತ್ ಕುಮಾರ್ ಆರ್ ಆದೂರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ ಕನ್ನಡಾಭಿಮಾನಿ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries