HEALTH TIPS

No title

                 ಬಾಕಿಮಾರು ಗದ್ದೆಯಲ್ಲಿ  ಕೆಸರಿನ ಕಲರವ, ಕುಣಿದು ಕುಪ್ಪಳಿಸಿದ ಸ್ಪಧರ್ಾಳುಗಳು
          ಬಡವ ಬಲ್ಲಿದ ಬೇಧ ಮರೆತು ಒಂದಾಗಿ ಬಾಳೋಣ: ಆಶಾ ದಿಲೀಪ್ ರೈ ಸುಳ್ಯಮೆ
    ಮಂಜೇಶ್ವರ: ಬಂಟರ ಸಂಘ ವಕರ್ಾಡಿ ವಲಯ ಮತ್ತು  ಗ್ರಾಮ ಸಮಿತಿಗಳ ಆಶ್ರಯದಲ್ಲಿ  ಪ್ರಕೃತಿ  ರಮಣೀಯ ಸುಂದರ ತಾಣವಾದ ವಕರ್ಾಡಿ ಪಾವಳದ ಬಾಕಿಮಾರು ಕೆಸರುಗದ್ದೆಯಲ್ಲಿ  ಕೆಸರ್ಡೊಂಜಿ ದಿನ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ನಡೆಯಿತು.
   ಬಂಟರ ಧರ್ಮ ಚಾವಡಿಯಲ್ಲಿ  ಗಣಪತಿ ಸ್ತುತಿಯೊಂದಿಗೆ ಸಮಾರಂಭವು ಆರಂಭಗೊಂಡಿತು. ಬಂಟರ ಸಂಘದ ವಕರ್ಾಡಿ ವಲಯದ ಗೌರವಾಧ್ಯಕ್ಷ  ಶಂಕರಮೋಹನ ಪೂಂಜ ಅಡೇಕಳ ದೀಪಬೆಳಗಿಸಿ ಸಮಾರಂಭವನ್ನು  ಉದ್ಘಾಟಿಸಿ, ಗ್ರಾಮೀಣ ಆಟ ಕ್ರೀಡೆಗಳಿಂದ ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಯುತ್ತದೆ ಎಂದು ಶುಭಕೋರಿದರು.
    ಬಂಟ ಮಹಿಳಾ ಸಂಘದ ಅಧ್ಯಕ್ಷೆ  ಆಶಾ ದಿಲೀಪ್ ರೈ ಸುಳ್ಯಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಡವ ಶ್ರೀಮಂತ ಎಂಬ ಬೇಧ ಭಾವ ಎಂದಿಗೂ ತರವಲ್ಲ. ಕಿರೀಟ ಧರಿಸಿದ ರಾಜನಾದರೂ, ಮುಂಡಾಸು ಇಲ್ಲದ ಸೇವಕನಾದರೂ ಸತ್ತಾಗ ಇಬ್ಬರನ್ನೂ  ಉರಿಸುವುದು ಕಟ್ಟಿಗೆ. ಈ ಕಟ್ಟಿಗೆಯು ಮರವಾಗಿದ್ದರೂ ನಾಡಿಗೆ ಪ್ರಯೋಜನವಿದೆ. ಅಲ್ಲದೆ ಮರ ಸತ್ತ ನಂತರವೂ ಉಪಯೋಗಕ್ಕೆ ಬರುತ್ತದೆ ಎಂದು ವಿಶ್ಲೇಷಿಸಿದರು.
   ಮಾನವನು ತನ್ನ ಜೀವಿತದಲ್ಲಿ  ಸಾಧನೆ ಹಾಗೂ ಸಮಾನತೆಯನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು. ಸಂಘಟನೆಯಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ತತ್ವವನ್ನು  ಮೈಗೂಡಿಸಿಕೊಂಡಾಗ ಸಮಾಜದಲ್ಲಿ  ದಿವ್ಯ ತೇಜಸ್ಸೊಂದು ಬೆಳಗುತ್ತದೆ ಎಂದು ನುಡಿದರು. ಮನುಷ್ಯ ಸತ್ತಾಗ ಉಪಯೋಗಶೂನ್ಯ ಹಾಗೂ ಆತಂಕವಾಗುವುದು ಸಹಜ ಎಂಬುದನ್ನು  ಮನಮುಟ್ಟುವಂತೆ ಉದಾಹರಣೆಗಳೊಂದಿಗೆ ವಿವರಿಸಿದರು. 
  ಧರ್ಮ ಚಾವಡಿಯಲ್ಲಿ  ಮುಖ್ಯ ಅತಿಥಿಗಳಾಗಿ ವಿವಿಧ ರಂಗಗಳ ಗಣ್ಯರಾದ ಸಂತೋಷ್ ಶೆಟ್ಟಿ  ಬಾಕ್ರಬೈಲು, ಶೈಲೇಂದ್ರ ಭರತ್ ನಾಯ್ಕ್, ಸುಭಾಶ್ಚಂದ್ರ ಅಡಪ ಕಲ್ಲೂರುಬೀಡು, ಗೋಪಾಲ ಶೆಟ್ಟಿ  ಅರಿಬೈಲು, ಶೇಖರ ಶೆಟ್ಟಿ  ಕೊಡ್ಲಮೊಗರು, ವಿಶ್ವನಾಥ ರೈ ಅಡ್ಕ, ಸುಲೋಚನಾ ಸಿ.ಶೆಟ್ಟಿ , ಬಿ.ತ್ಯಾಂಪಣ್ಣ  ರೈ, ನಾರಾಯಣ ಶೆಟ್ಟಿ  ಉದ್ದ  ಪಾವೂರು, ರಾಮಣ್ಣ  ಶೆಟ್ಟಿ ಆಲಬೆಗುತ್ತು , ಬಂಟರ ಸಂಘದ ಅಧ್ಯಕ್ಷ  ದೇವಪ್ಪ  ಶೆಟ್ಟಿ  ಚಾವಡಿಬೈಲುಗುತ್ತು, ವಸಂತರಾಜ್ ಶೆಟ್ಟಿ  ಕಣಿಯೂರು, ಬಾಲಕೃಷ್ಣ ಶೆಟ್ಟಿ ಪಾವಳಗುತ್ತು, ಜಯಂತ ಶೆಟ್ಟಿ  ಪಾವಳ ಮೊದಲಾದವರು ಶಭಹಾರೈಸಿದರು.
    ಕನರ್ಾಟಕ ತುಳು ಅಕಾಡೆಮಿ ಸದಸ್ಯೆ ವಿಜಯಾ ಶೆಟ್ಟಿ  ಸಾಲೆತ್ತೂರು ಅವರು ತುಳು ಪಾಡ್ದನದೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆದ್ವಿಕಾ ಶೆಟ್ಟಿ  ಕ್ರೀಡಾ ಜ್ಯೋತಿಯನ್ನು  ಕ್ರೀಡಾಳುಗಳಿಗೆ ನೀಡುವ ಮೂಲಕ ಕೆಸರಿನ ಆಟಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕೆಸರಿನ ಗದ್ದೆಯಲ್ಲಿ  ತುಳುನಾಡಿನ ಹಲವು ರೀತಿಯ ಆಟಗಳು, ಕ್ರೀಡೆಗಳು, ನೃತ್ಯಗಳು ನಡೆದವು. ವಿವಿಧ ಸ್ಪಧರ್ೆಗಳಲ್ಲಿ  ವಿಜೇತರಾದವರಿಗೆ ಬಹುಮಾನಗಳನ್ನು  ವಿತರಿಸಲಾಯಿತು. ರಶ್ಮಿತಾ ಆರ್.ಶೆಟ್ಟಿ  ಪಾವಳಗುತ್ತು  ಪ್ರಾರ್ಥನೆ ಹಾಡಿದರು. ಕಿರಣ್ಕುಮಾರ್ ಕುಮರ್ಾನು ಸ್ವಾಗತಿಸಿ, ಪ್ರಭಾವತಿ ಶೆಟ್ಟಿ  ಪಾವಳಗುತ್ತು  ವಂದಿಸಿದರು. ದೇವಿಪ್ರಸಾದ್ ಶೆಟ್ಟಿ  ಬೆಜ್ಜ  ಕಾರ್ಯಕ್ರಮ ನಿರೂಪಿಸಿದರು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries