ಭಾರೀ ಮಳೆ-ನೆರೆ- ಕಾಡಾನೆ ಹಾವಳಿ ಅತಿಯಾಗುವ ಭೀತಿ
ಮುಳ್ಳೇರಿಯ: ಮಡಿಕೇರಿ, ಕೊಡಗು ಮೊದಲಾದ ಪ್ರದೇಶಗಳಲ್ಲಿ ನೆರೆ ಮತ್ತು ಭೂಕುಸಿತದ ಕಾರಣ ಇದಕ್ಕೆ ಸಮೀಪದ ಅರಣ್ಯ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಭೀತಿ ಹೆಚ್ಚಾಗಿದೆ.
ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಪಾಂಡಿ ಅರಣ್ಯ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದು, ಮೂರು ಆನೆಗಳು ಕೃಷಿ ಪ್ರದೇಶಗಳಿಗೆ ನುಗ್ಗಿ ಧಾಳಿ ಮಾಡುತ್ತಿರುದುಬ ಆತಂಕಕ್ಕೆ ಕಾರಣವಾಗಿದೆ. ಇದರ ಹೊರತಾಗಿ ಪುಲಿಪ್ಪರಂಬದಲ್ಲಿರುವ ಸೌರ ಬೇಲಿಯನ್ನು ದಾಟಿ ಮತ್ತೊಂದು ಆನೆಗಳ ಹಿಂಡು ಒಳನುಗ್ಗಿವೆ. 10ಕ್ಕಿಂತಲೂ ಮಿಕ್ಕಿರುವವೆಂಬ ಸಂಶಯವಿರುವ ಆನೆಗಳ ಹಿಂಡು ನುಗ್ಗಿ ಬರುವ ಸಾಧ್ಯತೆ ಇದೆ ಎಂದು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದಾರೆ. ಸೌರ ಬೇಲಿಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ತ್ ಪ್ರಸಾರ ಕಡಿಮೆಯಾಗಿರುವ ಕಾರಣ ಆನೆಗಳು ನಿರಾತಂಕವಾಗಿ ನಾಡೊಳಗೆ ಕೃಷಿ ತೋಟಗಳತ್ತ ನುಗ್ಗುತ್ತಿವೆ.
ಕೊಡಗು ಪ್ರದೇಶಗಳ ಅರಣ್ಯದಿಂದ ಮೂಲಕ ಗಡಿ ಗ್ರಾಮ ದೇಲಂಪಾಡಿ ಪಂಚಾಯಿತಿಯ ವಿವಿಧ ಪ್ರದೇಶಗಳಿಗೆ ಆನೆಗಳ ಹಿಂಡು ನುಗ್ಗುತ್ತವೆ. ಈ ವರ್ಷ ಕೊಡಗು ಜಿಲ್ಲೆಯ ಭೀಕರ ಮಳೆಯ ಪರಿಣಾಮವಾಗಿ ಉಂಟಾದ ಅತಂತ್ರತೆ ಆನೆಗಳನ್ನು ಕಾಸರಗೋಡು ಗಡಿಭಾಗದ ದೇಲಂಪಾಡಿ, ಕಾರಡ್ಕ, ಕುತ್ತಿಕೋಲ್ ಗ್ರಾ.ಪಂ.ಗಳತ್ತ ಧಾಳಿ ನಡೆಸುವ ಭೀತಿ ಎದುರಾಗಿದೆ. ಪಾಂಡಿ ಪ್ರದೇಶದಲ್ಲಿ ಸೇರಿರುವ ಆನೆಗಳು ನಂದಕುಮಾರ್ ಅವರ ತೆಂಗು ಮೊದಲಾದ ಕೃಷಿಯನ್ನು ಮಂಗಳವಾರ ರಾತ್ರಿ ಪುಡಿಗೈದಿವೆ.