HEALTH TIPS

No title

                  ಸೃಜನಶೀಲತೆಯನ್ನು ಗುರುತಿಸಿ ಮುನ್ನಡೆಸಬೇಕು-ಶಂಕರ ರೈ ಮಾಸ್ತರ್
   ಮಂಜೇಶ್ವರ: ರಾಜ್ಯ ಲೈಬ್ರರಿ ಕೌನ್ಸಿಲ್ ಬಾಲವೇದಿಕೆಯ ಸದಸ್ಯರಿಗಾಗಿ ಏರ್ಪಡಿಸುವ ಬಾಲೋತ್ಸವ ಕಾರ್ಯಕ್ರಮವು ವಿದ್ಯಾಥರ್ಿಗಳಲ್ಲಿ ಸೃಜನಾತ್ಮಕತೆಯನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಕೇರಳ ಸರಕಾರದ ಭಾರತ್ ಭವನ್ ಕೇಂದ್ರದ ಕಾರ್ಯಕಾರೀ ಸಮಿತಿ ಸದಸ್ಯ ಶಂಕರ ರೈ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಮೀಯಪದವು ವಿದ್ಯಾವರ್ಧಕ ಹಳೆ ವಿದ್ಯಾಥರ್ಿ ಸಂಘ ಗ್ರಂಥಾಲಯದಲ್ಲಿ ಭಾನುವಾರ ಆಯೋಜಿಸಿದ ತಾಲೂಕು ಮಟ್ಟದ ಬಾಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಲೈಬ್ರರಿ ಕೌನ್ಸಿಲ್ ತನ್ನ ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಕಲ್ಯಾಣ ರಾಜ್ಯ ನಿಮರ್ಾಣದಲ್ಲಿ ಪ್ರಧಾನ ಪಾತ್ರವಹಿಸುತ್ತಿದೆ ಎಂದು ಶ್ಲಾಘಿಸಿದ ಅವರು, ಯುವ ಸಮೂಹವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಆಧುನಿಕ ತಂತ್ರಜ್ಞಾನಗಳೊಂದಿಗೆ ಪರಂಪರೆಯ ಮರು ಓದಿಗೆ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ವಿದ್ಯಾಥರ್ಿಗಳ ಸೃಜನಶೀಲತೆಯನ್ನು ಗುರುತಿಸಿ ಮುನ್ನಡೆಸುವಲ್ಲಿ ಇಂದು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನೂ ಬಳಸಿ ಭದ್ರ ಭವಿಷ್ಯ ನಿಮರ್ಾಣದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆನೀಡಿದರು. 
    ಮೀಂಜ ಗ್ರಾಮ ಪಂಚಾಯತಿ ನಅಧ್ಯಕ್ಷೆ ಶಂಶಾದ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಯು.ಶ್ಯಾಮ್ ಭಟ್, ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್, ಎಂ.ಶ್ರೀಧರ ರಾವ್, ಗೋಪಾಲಕೃಷ್ಣ ಪಜ್ವ, ಲವಾನಂದ ಎಲಿಯಾಣ, ಯೋಗೀಶ್ ಕಲ್ಯಾಣತ್ತಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಅಹಮ್ಮದ್ ಹುಸೈನ್ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಕುಮಾರಿ ಟೀಚರ್ ವಂದಿಸಿದರು. ಬಳಿಕ ವಿದ್ಯಾಥರ್ಿಗಳಿಗೆ ವಿವಿಧ ಸ್ಪಧರ್ೆಗಳು ನಡೆದವು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries