ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ
ಕಾಸರಗೋಡು: ಚತುಷ್ಚಷ್ಟಿ ಕಲೆಗಳು ರಾಷ್ಟ್ರದ ಸಂಸ್ಕೃತಿಯ ದ್ಯೋತಕಗಳಾಗಿವೆ. ಅವುಗಳಲ್ಲಿ ಗಮಕ ಕಲೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಹಿಂದೆ ರಾಜಾಶ್ರಯದಲ್ಲಿ ಬೆಳೆದು ಬಂದ ಗಮಕ ಕಲೆಯ ಉದ್ದೀಪನಕ್ಕೆ ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡ ಘಟಕವು ಶ್ರಮಿಸುತ್ತಿರುವುದು ಗಮನಾರ್ಹ ಈ ನಿಟ್ಟಿನಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹವಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಕಂಗಿಲ ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಅವರು ಕಾಸರಗೋಡಿನ ಹವ್ಯಕ ಭವನದಲ್ಲಿ ಕನರ್ಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರಗಿದ ಗಮಕ ಶ್ರಾವಣದ ಮೂರನೇ ಸರಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯೇತಡ್ಕ ವೈ.ವಿ.ರಮೇಶ ಭಟ್ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಪರಿಷತ್ತಿನ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಗಮಕ ಕಲೆಯ ಪ್ರಚಾರಕ್ಕೆ ಸರ್ವರ ಸಲಹೆ ಹಾಗೂ ಸಹಾಯಗಳ ಅಗತ್ಯದ ಬಗ್ಗೆ ತಿಳಿಸಿದರು. ಕವಿ, ಸಾಹಿತಿ ವಿ.ಬಿ.ಕುಳಮರ್ವ ಅವರು ಪ್ರಸ್ತಾವನೆಯೊಂದಿಗೆ ಗಮಕ ಶ್ರಾವಣದ ಮಹತ್ವವನ್ನು ತಿಳಿಸುತ್ತಾ ಗಮಕ ಪರಿಷತ್ತು ನಡೆದು ಬಂದ ದಾರಿಯನ್ನು ವಿಷದ ಪಡಿಸಿದರು.
ಉದಯೋನ್ಮುಖ ಪ್ರತಿಭೆಗಳಾದ ನಾಯರ್ಪಳ್ಳ ಸಹೋದರಿಯರೆಂದೇ ಖ್ಯಾತರಾದ `ಗಮಕ ಕಲಾಧರೆ' ಶ್ರದ್ಧಾ ಭಟ್ ಮತ್ತು ಮೇಧಾ ಭಟ್ ಅವರು ವಿದ್ವಾನ್ ಎನ್.ತಿಮ್ಮಣ್ಣ ಭಟ್ ಅವರು ಹಿಂದಿಯಿಂದ ಹಳಗನ್ನಡಕ್ಕೆ ಭಾಷಾಂತರಿಸಿದ `ಶ್ರೀ ರಾಮಚರಿತ ಮಾನಸ' ಮಹಾಕಾವ್ಯದಿಂದಾಯ್ದ `ಸುಗ್ರೀವ ಸಖ್ಯ' ಎಂಬ ಭಾಗವನ್ನು ಸುಶ್ರಾವ್ಯವಾಗಿ ವಾಚನ ಹಾಗೂ ವ್ಯಾಖ್ಯಾನಗೈದರು.
ಹಿರಿಯರಾದ ಡಾ.ಕಂಗಿಲ ಕೃಷ್ಣ ಭಟ್ ಮತ್ತು ತೆಕ್ಕೇಕೆರೆ ಶಂಕರನಾರಾಯಣ ಭಟ್ ಕಲಾವಿದರನ್ನು ಶಾಲು ಹೊದೆಸಿ ಫಲಪುಷ್ಪಗಳನ್ನು ನೀಡಿ ಹರಸಿದರು. ಗಮಕಿ ಪಿ.ವಿ.ಶಿವರಾಮ ಚಿತ್ತಾರಿ ಅವರು ವಂದಿಸಿದರು. ಇದೇ ಸಂದರ್ಭದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಕಾಸರಗೋಡು ವಲಯದ ವತಿಯಿಂದ ವೇ.ಮೂ.ತುಪ್ಪೆಕಲ್ಲು ಸುಬ್ರಹ್ಮಣ್ಯ ಭಟ್ ಮತ್ತು ಬಳಗದವರು `ಶ್ರೀ ಸೂಕ್ತ ಹವನ ಮತ್ತು ಶ್ರೀ ವರ ಮಹಾಲಕ್ಷ್ಮೀ ಪೂಜೆ' ಗಳನ್ನು ಶಾಸ್ತ್ರೋಕ್ತವಾಗಿ ಸಂಪನ್ನಗೊಳಿಸಿದರು. ಮಾತೆಯರು ಕುಂಕುಮಾರ್ಚನೆ ಮತ್ತು ಭಜನಾ ಸೇವೆಗಳನ್ನು ನಡೆಸಿ ಕೊಟ್ಟರು.
ಸಮಾರಂಭದಲ್ಲಿ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ದಶಮಾನೋತ್ಸವದ ಅಂಗವಾಗಿ ನಡೆಸಲುದ್ದೇಶಿದ್ದ ಎರಡು ದಿನಗಳ `ಗಮಕ ಕಲಾ ತರಬೇತಿ ಶಿಬಿರ'ವನ್ನು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದು ಪರಿಷತ್ತಿನ ಪದಾಧಿಕಾರಿಗಳು ಘೋಷಿಸಿದ್ದಾರೆ