ಉಜ್ವಲ ಯೋಜನೆಯ ಅನಿಲ ಜಾಡಿ ವಿತರಣೆ
ಬದಿಯಡ್ಕ : ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಬಡಜನತೆಗೆ ನೀಡುವ ಉಚಿತ ಅಡುಗೆ ಅನಿಲ ಜಾಡಿ ವಿತರಣೆಯನ್ನು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಸೋಮವಾರ ಉದ್ಘಾಟಿಸಿದರು.
ಕುಂಬ್ಡಾಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಮವ್ವಾರು ದೀನ್ ದಯಾಳ್ ಸಭಾಭವನದಲ್ಲಿ ಸೋಮವಾರ ಅಪರಾಹ್ನ ನಡೆದ ಸಮಾರಂಭದಲ್ಲಿ ಅವರು ಅರ್ಹಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಹಲವಾರು ಜನೋಪಯೋಗಿ ಯೋಜನೆಗಳನ್ನು ಅಳವಡಿಸಿಕೊಂಡು ಪ್ರಧಾನ ಸೇವಕ ಎಂಬ ಹೆಸರಿನಂತೆ ಬಡಜನತೆಯ ಬಾಳಲ್ಲಿ ಬೆಳಕನ್ನು ಕಾಣುವಲ್ಲಿ ನರೇಂದ್ರಮೋದಿಯವರು ನುಡಿದಂತೆ ನಡೆದಿದ್ದಾರೆ. ದೇಶದ ಜನತೆಯನ್ನು ಒಂದೇ ದೃಷ್ಟಿಯಿಂದ ಕಾಣುವಂತಹ ಭಾರತೀಯ ಜನತಾ ಪಕ್ಷದ ಆಡಳಿತದಿಂದ ದೇಶವು ಅಭಿವೃದ್ಧಿಯನ್ನು ಕಾಣುತ್ತಿದೆ. ಇನ್ನು ಮುಂದೆ ಬಡವರೂ ಅಡುಗೆಯನ್ನು ಮಾಡಲು ಕಷ್ಟಪಡಬೇಕಾಗಿಲ್ಲ. ಬಡವರಿಗೂ ಅಡುಗೆ ಅನಿಲ ಜಾಡಿ ಲಭಿಸಬೇಕೆಂಬ ಅಭಿಲಾಷೆ ಈಡೇರಿದೆ ಎಂದರು.
ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ಸುಧಾಮ ಗೋಸಾಡ, ಎಸ್.ಸಿ.ಎಸ್.ಟಿ. ಮೋಚರ್ಾ ಜಿಲ್ಲಾಉಪಾಧ್ಯಕ್ಷ ಸುಂದರ ಮವ್ವಾರು, ಕೃಷಿಕ ಮೋಚರ್ಾ ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ರೈ ಮಠದಮೂಲೆ, ಬಿಜೆಪಿ ದೇಲಂಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ರಾಜೇಶ್ ಮಾತನಾಡಿದರು. ಗ್ರಾಮಪಂಚಾಯತ್ ಸದಸ್ಯೆ ಯಶೋಧ ಅವರು ಮಾತನಾಡುತ್ತಾ ಕಾಲ ಬದಲಾದಂತೆ ಆಧುನಿಕತೆಗೆ ಮಹಿಳೆಯರು ಹೊಂದಿಕೊಳ್ಳಬೇಕೆಂಬ ನಿಧರ್ಾರದಿಂದ ಕೇಂದ್ರ ಸರಕಾರದ ಯೋಜನೆಯನ್ನು ಅರ್ಹಫಲಾನುಭವಿಗಳಿಗೆ ಲಭಿಸುವಂತೆ ಪ್ರಯತ್ನಿಸಲಾಗಿದೆ. ಬಡಜನತೆಗೆ ಇದು ಪ್ರಯೋಜನಪ್ರದವಾಗಲಿ ಎಂದು ಹೇಳಿದರು.
ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಪ್ರ.ಕಾರ್ಯದಶರ್ಿ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಗ್ರಾಮಪಂಚಾಯತ್ ಸದಸ್ಯ ಶಶಿಧರ ತೆಕ್ಕೆಮೂಲೆ ವಂದಿಸಿದರು. ಜನಪ್ರತಿನಿಧಿಗಳಾದ ಶೈಲಜಾ ಭಟ್, ನಳಿನಿ, ಶಾಂತಾ ಎಸ್. ಭಟ್, 13 ಜನ ಫಲಾನುಭವಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.