ಒಂದು ರಾಜ್ಯ, ಒಂದು ಮತ' ನೀತಿ ಕೈಬಿಟ್ಟ 'ಸುಪ್ರೀಂ', ಬಿಸಿಸಿಐ ಕರಡು ಸಂವಿಧಾನಕ್ಕೆ ಒಪ್ಪಿಗೆ
ನವದೆಹಲಿ: ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂ ಕೋಟರ್್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ತೀವ್ರ ಚಚರ್ೆಗೆ ಗ್ರಾಸವಾಗಿದ್ದ 'ಒಂದು ರಾಜ್ಯ ಒಂದು ಮತ' ನೀತಿಯನ್ನು ಸುಪ್ರೀಂ ಕೋಟರ್್ ಕೈ ಬಿಟ್ಟಿದ್ದು, ಮಹಾರಾಷ್ಟ್ರ, ಗುಜರಾತ್ ನ ಎಲ್ಲ ಮೂರು ಕ್ರಿಕೆಟ್ ಸಮಿತಿಗಳಿಗೆ ಪೂರ್ಣ ಸದಸ್ಯತ್ವವನ್ನು ಸವರ್ೋಚ್ಛ ನ್ಯಾಯಾಲಯ ಸಮ್ಮತಿ ನೀಡಿದೆ. ಆ ಮೂಲಕ ಒಂದು ರಾಜ್ಯ ಒಂದು ಮತ ಎಂಬ ಮಾನದಂಡವನ್ನು ಸುಪ್ರೀಂ ಕೋಟರ್್ ಕೈಬಿಟ್ಟಿದೆ.
ಅಲ್ಲದೆ, ರೈಲ್ವೇಸ್, ಸವರ್ೀಸ್ ಹಾಗೂ ವಿಶ್ವವಿದ್ಯಾನಿಲಯಗಳ ಕ್ರಿಕೆಟ್ ಸಂಸ್ಥೆಗಳಿಗೂ ಬಿಸಿಸಿಐನಲ್ಲಿ ಸುಪ್ರೀಂಕೋಟರ್್ ಪೂರ್ಣ ಸದಸ್ಯತ್ವ ನೀಡಿದೆ. ಈ ಹಿಂದೆ ಲೋಧಾ ಸಮಿತಿಯ ಶಿಫಾರಸಿನಂತೆ ಅವರೆಲ್ಲರ ಸದಸ್ಯತ್ವವನ್ನು ಕೋಟರ್್ ರದ್ದುಗೊಳಿಸಿತ್ತು. ಇನ್ನು, ಈ ನೂತನ ಸಂವಿಧಾನವನ್ನು ನಾಲ್ಕು ವಾರಗಳಲ್ಲಿ ನೋಂದಾಯಿಸಿಕೊಳ್ಳಿ ಎಂದು ಬಿಸಿಸಿಐಗೆ ತಿಳಿಸಿದೆ. ಜತೆಗೆ, ರಾಜ್ಯಗಳ ಹಾಗೂ ಇತರೆ ಸದಸ್ಯತ್ವ ಸಂಸ್ಥೆಗಳು ಬದಲಾದ ಸಂವಿಧಾನವನ್ನು 30 ದಿನಗಳಲ್ಲಿ ದಾಖಲಿಸಿಕೊಳ್ಳಿ ಎಂದೂ ಸುಪ್ರೀಂಕೋಟರ್್ ಸೂಚಿಸಿದೆ.
ಬಿಸಿಸಿಐನಲ್ಲಿ ಒಂದೇ ಹುದ್ದೆಯನ್ನು ಸತತ ಎರಡು ಬಾರಿ ಹೊಂದಿದ ಬಳಿಕ ಆ ಸದಸ್ಯನನ್ನು ಉಚ್ಛಾಟಿಸಲಾಗುವುದು ಎಂದು ಸುಪ್ರೀಂಕೋಟರ್್ ತಿಳಿಸಿದೆ. ಅಲ್ಲದೆ, ಈ ಸಂವಿಧಾನವನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ರಾಜ್ಯ ಕ್ರಿಕೆಟ್ ಸಂಘಗಳಿಗೆ ಸುಪ್ರೀಂಕೋಟರ್್ ಎಚ್ಚರಿಕೆ ನೀಡಿದೆ. ಹಾಗೆ, ಬಿಸಿಸಿಐ ಸಂವಿಧಾನವನ್ನು 30 ದಿನಗಳೊಳಗೆ ಅಳವಡಿಸಿಕೊಳ್ಳಿ ಎಂದು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗಳಿಗೆ ಸವರ್ೋಚ್ಛ ನ್ಯಾಯಾಲಯ ತಿಳಿಸಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಬಿಸಿಸಿಐ ಆಡಳಿತ ವ್ಯವಸ್ಥೆ ಕಲುಷಿತಗೊಂಡಿದ್ದು ಪಾರದರ್ಶಕ ಮತ್ತು ಸ್ವಚ್ಛ ಆಡಳಿತಕ್ಕೆ ಕೆಲವೊಂದು ರೂಪುರೇಷೆಗಳನ್ನು ಅಳವಡಿಸುವುದಲ್ಲದೆ, ಅದರ ಸಂವಿಧಾನವನ್ನು ಬದಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸವರ್ೋಚ್ಚ ನ್ಯಾಯಾಲಯ ಲೋಧಾ ನೇತೃತ್ವದ ಸಮಿತಿಯನ್ನು 2015ರ ಜನವರಿಯಲ್ಲಿ ನೇಮಿಸಿತ್ತು. ಅದರಂತೆ ಸಮಿತಿ ನೀಡಿದ್ದ ಬಹುಪಾಲು ಶಿಫಾರಸುಗಳನ್ನು ಬಿಸಿಸಿಐ ಮಾತ್ರವಲ್ಲದೆ, ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ಅಳವಡಿಸಿಕೊಳ್ಳಬೇಕೆಂದು 2016 ಜುಲೈ ನಲ್ಲಿ ತನ್ನ ತೀಪರ್ಿನಲ್ಲಿ ಸವರ್ೋಚ್ಚ ನ್ಯಾಯಾಲಯ ತಾಕೀತು ಮಾಡಿತ್ತು.