ತ್ಯಾಗ ಮತ್ತು ಬಲಿದಾನದ ಸಂದೇಶ ನೀಡುವ ಬಕ್ರೀದ್ ಆಚರಣೆ
ಕುಂಬಳೆ: ನಾಡಿನಾದ್ಯಂತ ಮುಸ್ಲಿಂ ಬಂಧುಗಳು ತ್ಯಾಗ ಮತ್ತು ಬಲಿದಾನದ ಸಂದೇಶವನ್ನು ಸಾರುವ ಬಕ್ರೀದ್ ಹಬ್ಬವನ್ನು ಬುಧವಾರ ಆಚರಿಸಿದರು.
ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು, ಸುಗಂಧ ಬೀರುವ ಅತ್ತರ್ ಸಿಂಪಡಿಸಿ ಮಕ್ಕಳು ಸಹಿತ ಗಂಡಸರು ಹತ್ತಿರದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮನೆ ಮನೆಗಳಲ್ಲಿ ವಿಶೇಷ ತಿಂಡಿ ತಿನಸುಗಳನ್ನು ಸಿದ್ಧಪಡಿಸಿ ಅತಿಥಿಗಳನ್ನು ಮತ್ತು ಸಂಬಂಧಿಕರನ್ನು ಸ್ವಾಗತಿಸಿ ಉಣಬಡಿಸಿ ಸಂಭ್ರಮ ಪಟ್ಟರು.
ಕೇರಳದಲ್ಲಿ ಸಂಭವಿಸಿದ ಎಂದೆಂದೂ ಕಾಣದ ನೆರೆಯ ಹಿನ್ನೆಲೆಯಲ್ಲಿ ಜನತೆಯ ರಕ್ಷಣೆಗಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೆಲವೆಡೆಗಳಲ್ಲಿ ಬಕ್ರೀದ್ ಹಬ್ಬವನ್ನು ನೆರೆಯಲ್ಲಿ ತತ್ತರಿಸಿರುವ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಆಚರಿಸಿದರು.
ಮುಸಲ್ಮಾನರು ಮತ್ತು ಮುಸ್ಲಿಂ ಸಂಘಟನೆಗಳು ಕೇರಳ ಮತ್ತು ಕೊಡಗಿನ ನೆರೆ ಸಂತ್ರಸ್ತರಿಗೆ ಆಥರ್ಿಕ ಸಹಾಯ ಮಾಡುವ ಮೂಲಕ ಹಬ್ಬದ ಸಂದೇಶವಾದ ದಾನ, ತ್ಯಾಗದ ಪರಿಕಲ್ಪನೆಗೆ ಹೊಸ ಅರ್ಥ ನೀಡಿದರು. ಮುಸ್ಲಿಂ ಧಾಮರ್ಿಕ ವಿದ್ವಾಂಸರೂ ಇದೇ ಕರೆ ನೀಡಿದ್ದರು. ವೈಯಕ್ತಿಕವಾಗಿಯೂ ಜನರು ಸಹಾಯ, ಸಹಕಾರದ ನಿಧರ್ಾರ ಕೈಗೊಂಡದ್ದರಿಂದ ಮಿಡಿಯುವ, ಸ್ಪಂದಿಸುವ ಗುಣಗಳನ್ನು ಸಾಕಾರಗೊಳಿಸಿತು.