ಶ್ರೀಕ್ಷೇತ್ರ ಕುತ್ಯಾಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ
ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಸೆ.2 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದಂಗವಾಗಿ ಬೆಳಿಗ್ಗೆ 8.30 ರಿಂದ ಖ್ಯಾತ ಸ್ಯಾಕ್ಸೋಫೋನ್ ವಾದಕ ಉದಯ ಕುಮಾರ್ ಕಾಸರಗೋಡು ಅವರಿಂದ ಸ್ಯಾಕ್ಸೋಫೋನ್ ವಾದನ, 9.15 ರಿಂದ ಶಾಲಾ ಕಾಲೇಜು ವಿಭಾಗದ ಮಕ್ಕಳಿಗಾಗಿ ನಡೆಯಲಿರುವ ವಿವಿಧ ಸ್ಪಧರ್ೆಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಪತಿ ಅಡಿಗ ಉದ್ಘಾಟಿಸುವರು. ಬಳಿಕ ಮಕ್ಕಳಿಗಾಗಿ ಭಗವದ್ಗೀತೆ ಕಂಠಪಾಠ, ಭಕ್ತಿಗಾನ, ಚಿತ್ರ ರಚನೆ ಹಾಗೂ ಸಂಜೆ ಮುದ್ದು ಕೃಷ್ಣ ವೇಷ ಸ್ಪಧರ್ೆ ಹಾಗೂ ಛದ್ಮ ವೇಷ ಸ್ಪಧರ್ೆಗಳು ನಡೆಯಲಿದೆ.
ಸಂಜೆ ಕೂಡ್ಲು ರಾಮದಾಸ ನಗರದ ಗೋಪಾಲಕೃಷ್ಣ ಪ್ರೌಢ ಶಾಲೆಯಿಂದ ಮುದ್ದು ಕೃಷ್ಣ - ರಾಧೆಯರ ವೇಷಗಳೊಂದಿಗೆ ಆಕರ್ಷಕ ಮೆರವಣಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ. ಸಂಜೆ ನಡೆಯುವ ಧಾಮರ್ಿಕ ಸಭೆಯಲ್ಲಿ ದೇವಸ್ಥಾನದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡುವರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸುವರು. ಮಧೂರು ಗ್ರಾಮ ಪಂಚಾಯತ್ ಸದಸ್ಯರಾದ ಕೆ.ವೆಂಕಟ್ರಮಣ ಅಡಿಗ, ಕೆ.ಶ್ರೀಧರ ಕೂಡ್ಲು ಅತಿಥಿಗಳಾಗಿ ಭಾಗವಹಿಸುವರು. ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ, ರಾತ್ರಿ ಚಂದ್ರೋದಯಕ್ಕೆ ದೇವರಿಗೆ ಅಗ್ರ್ಯ ಪ್ರದಾನ, ಮಹಾಪೂಜೆ ನಡೆಯಲಿದೆ.