ಪಡ್ರೆ ಶಾಲೆಯಲ್ಲಿ ವಿಜ್ಞಾನೋತ್ಸವ
ಪೆರ್ಲ: ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಗೋಳಶಾಸ್ತ್ರದ ಕುರಿತು ಆಸಕ್ತಿ ಮೂಡಿಸಲು ಬುಧವಾರ ವಿಜ್ಞಾನೋತ್ಸವ ಆಚರಿಸಲಾಯಿತು.
ಹಿರಿಯ ಶಿಕ್ಷಕಿ ನಾಗರತ್ನ ಸರ್ಪಂಗಳ ಚಾಲನೆ ನೀಡಿ ಮಾತನಾಡಿ, ಅತ್ಯಂತ ಹಿಂದುಳಿದ ರಾಷ್ಟ್ರವಾಗಿದ್ದ ಭಾರತ ಇಂದು ಖಗೋಳ ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯದ್ಭುತ ಸಾಧನೆ ಮಾಡಿ ಇಡೀ ವಿಶ್ವವೇ ತನ್ನತ್ತ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಆತಂಕ,ಅಭದ್ರತೆಗಳನ್ನು ಹೊಡೆದು ಹಾಕಿ, ವಿಶ್ವದಲ್ಲೇ ಅಗ್ರಮಾನ್ಯ ಶಕ್ತಿಯಾಗುವತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇರಿಸುತ್ತಿದೆ .ಅತ್ಯಂತ ವೇಗವಾಗಿ ಜಾಗತಿಕ ಆಥರ್ಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ.
ವಿಜ್ಞಾನ ಭಾರತ ನಿಮರ್ಾಣವಾದಲ್ಲಿ ಅಜ್ಞಾನ, ಮೂಢನಂಬಿಕೆ ಹೋಗಲಾಡಿಸಲು ಸಾಧ್ಯ. ವಿದ್ಯಾಥರ್ಿಗಳು ಸ್ವಯಂಪ್ರೇರಿತರಾಗಿ ಉತ್ಸಾಹದೊಂದಿಗೆ ಖಗೋಳ ಶಾಸ್ತ್ರ, ಪೂರಕ ವಿಷಯಗಳ ಅಧ್ಯಯನ ನಡೆಸಬೇಕು ಎಂದರು.
ವಿದ್ಯಾಥರ್ಿಗಳು ರೋಕೆಟ್ ಉಡಾವಣೆಯ ಪ್ರಾತ್ಯಕ್ಷಿಕೆ ನೀಡಿದರು. ಖಗೋಳ ವಿಜ್ಞಾನದ ಕುರಿತು ವಿಡಿಯೋ ಪ್ರದರ್ಶನ, ರಸಪ್ರಶ್ನೆ ಏರ್ಪಡಿಸಲಾಯಿತು. ಶಾಲಾ ವಿಜ್ಞಾನ ಅಧ್ಯಾಪಕ ಶೀನಪ್ಪ ಬಿ. ನೇತೃತ್ವ ವಹಿಸಿದರು.