ಮಂಗಳೂರಿನಲ್ಲಿ ಕಹಳೆಯೂದಿದ ಕಾಸರಗೋಡು ಕನ್ನಡಿಗರ ಹೋರಾಟ
ಗಡಿನಾಡ ಹಿತ ಕಾಪಾಡಲು ಆಗ್ರಹಿಸಿ ಆ.18ಕ್ಕೆ ವಿಧಾನಸೌಧ ಎದುರು ಪ್ರತಿಭಟನೆ
ಮಂಗಳೂರು: ಗಡಿನಾಡಿನ ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕು ಹಾಗೂ ಜಿಲ್ಲೆಯಲ್ಲಿ ಕನ್ನಡಿಗರ ಹಿತ ಕಾಪಾಡಬೇಕೆಂದು ಆಗ್ರಹಿಸಿ ಆ. 18ರಂದು ಬೆಳಗ್ಗೆ ಬೆಂಗಳೂರಿನ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಭಾಸ್ಕರ ಕಾಸರಗೋಡು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾಸರಗೋಡಿನಲ್ಲಿ ಕನ್ನಡ ಹಿತಕಾಪಾಡಲು ಹೋರಾಟ ಸಮಿತಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ಸಂವಿಧಾನ ಬದ್ದ ಕೆಲವು ಸವಲತ್ತುಗಳಿದ್ದರೂ ಕೇರಳ ಸರಕಾರ ಅದನ್ನು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕನರ್ಾಟಕ ಸರಕಾರವನ್ನು ಎಚ್ಚರಿಸುವ ದೃಷ್ಟಿಯಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆ. 18. ರಂದು ವಿಧಾನಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಕಾಸರಗೋಡು ಪ್ರದೇಶವನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಕೇಂದ್ರ ಹಾಗೂ ಕೇರಳ ಸರಕಾರ ಮಾನ್ಯತೆ ನೀಡಿದೆ. ಆದರೆ ಕನ್ನಡಿಗರಿಗೆ ನೀಡಬೇಕಾದ ಸವಲತ್ತುಗಳನ್ನು ನೀಡಲು ಮಾತ್ರ ಕೇರಳ ಸರಕಾರ ಒಪ್ಪಿಕೊಳ್ಳುತ್ತಿಲ್ಲ. ಕನ್ನಡಿಗರಿಗೆ ಇಲ್ಲಿ ಘೋರ ಅನ್ಯಾಯ ಮಾಡಲಾಗುತ್ತಿದೆ. ಇದರ ವಿರುದ್ಧ ನಾವೆಲ್ಲ ಪ್ರತಿಭಟನೆ ನಡೆಸಬೇಕು ಎಂದರು.
ಕಾಸರಗೋಡಿನಲ್ಲಿ ಕನ್ನಡಕ್ಕೆ ಸಂವಿಧಾನದ ಬದ್ದ ಪ್ರತ್ಯೇಕ ಮಾನ್ಯತೆಯಿದೆ. ಕಾಸರಗೋಡು ಪ್ರದೇಶದಲ್ಲಿ ಸರಕಾರಿ ಸುತ್ತೋಲೆಗಳನ್ನು ಕನ್ನಡದಲ್ಲೇ ನೀಡಬೇಕು. ಕನ್ನಡ ಶಾಲೆಗಳಿಗೆ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಿಸಬೇಕು. ಅಂಗಡಿಗಳಲ್ಲಿ ಕನ್ನಡದಲ್ಲೇ ನಾಮಫಲಕ ಹಾಕಬೇಕು. ಆದರೆ ಇದು ಯಾವುದೂ ಇಲ್ಲಿ ಜಾರಿಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕನ್ನಡಿಗರ ಹೋರಾಟಕ್ಕೆ ಕನರ್ಾಟಕ ಸರಕಾರ ಬೆಂಬಲ ನೀಡಬೇಕು. ನಮ್ಮ ಧ್ವನಿ ಕೇವಲ ಬೆಂಗಳೂರು, ತಿರುವನಂತಪುರ ತಲುಪಿದರೆ ಸಾಲದು. ಅದು ದಿಲ್ಲಿಯನ್ನೂ ಮುಟ್ಟಬೇಕು ಎಂದು ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಕಾಸರಗೋಡು ಜಿಪಂ ಸದಸ್ಯ ಹಷರ್ಾದ್ ವಕರ್ಾಡಿ ಮಾತನಾಡಿ, ಕಾಸರಗೋಡು ಕನರ್ಾಟಕದ್ದೇ ಭಾಗ. ಕನ್ನಡ ಭಾಷೆ ಕಲಿಸಲು ಮಲಯಾಳಿ ಶಿಕ್ಷಕರನ್ನು ನೇಮಿಸುವುದು ಸರಿಯಲ್ಲ. ಕನ್ನಡಿಗರ ಅಸ್ತಿತ್ವದ ಹೋರಾಟಕ್ಕೆ ಕನರ್ಾಟಕದ ಬೆಂಬಲ ಬೇಕು. ಇಲ್ಲಿ ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತುಗಳು ಜನರಿಗೆ ಸಿಗಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ 100ಕ್ಕಿಂತಲೂ ಮಿಕ್ಕಿದ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.