ಭೂಮಿಯ ಪ್ರತಿಯೊಂದು ಜೀವಿಗೂ ಬದುಕಲು ಸಮಾನ ಹಕ್ಕು ಇದೆ: ಶಿವಕುಮಾರ್
ವಿವೇಕಾನಂದ ಶಿಶು ಮಂದಿರದಲ್ಲಿ ರಕ್ಷಾ ಬಂಧನ
ಪೆರ್ಲ:ರಕ್ಷಾ ಬಂಧನದ ಪೌರಾಣಿಕ ಹಿನ್ನೆಲೆ, ಧಾಮರ್ಿಕ, ಸಾಂಪ್ರದಾಯ ಏನೇ ಇದ್ದರೂ, ಇದು ಭಾವನೆಗಳನ್ನು ಪರಸ್ಪರ ಬೆಸೆಯುವ ಹಬ್ಬವಾಗಿ ಮಹತ್ವ ಪಡೆದಿದೆ. ಸಂಬಂಧಗಳ ಬೆಳವಣಿಗೆ ಮಾತ್ರವಲ್ಲದೆ ಆಂತರಿಕ ಬಾಂಧವ್ಯ ದೃಢವಾಗಲಿ, ರಕ್ಷಣೆಯಾಗಲಿ ಎಂಬುದೇ ರಕ್ಷಾ ಬಂಧನ ಆಚರಣೆಯ ಉದ್ದೇಶ ಎಂದು ನಾಲಂದ ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಕೆ.ಶಿವಕುಮಾರ್ ಹೇಳಿದರು.
ಪೆರ್ಲ ನಾಲಂದಾ ಮಹಾ ವಿದ್ಯಾಲಯದ ವಿವೇಕಾನಂದ ಶಿಶು ಮಂದಿರದಲ್ಲಿ ರಕ್ಷಾ ಬಂಧನ ಆಚರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದು ಸಂಸ್ಕೃತಿಯಲ್ಲಿ ಆಚರಿಸುವ ಹಬ್ಬವಾದರೂ ಧರ್ಮ-ಜಾತಿ, ವ್ಯಕ್ತಿಗೆ ಸೀಮಿತವಾಗಿರದೆ ಭೂಮಿಯಲ್ಲಿ ವಾಸವಾಗಿರುವ ಪ್ರತಿಯೊಂದು ಜೀವಿಗೂ ಬದುಕಲು ಅವಕಾಶವಿದೆ. ಯುದ್ಧ ಕಾಲದಲ್ಲಿ, ಆಪತ್ತು ಬಂದಾಗ ರಾಣಿಯರು ಇತರ ರಾಜ್ಯಗಳ ರಾಜರುಗಳಿಗೆ ರಕ್ಷಣೆ ಕೇಳಿ ರಾಖಿ ಕಟ್ಟಿರುವುದನ್ನು ಇತಿಹಾಸ ಹೇಳುತ್ತದೆ. ಒಗ್ಗಟ್ಟಿನಲ್ಲಿದ್ದರೆ ಏನು ಬೇಕಾದರೂ ಸಾಧಿಸಬಹುದಾಗಿದ್ದು, ಎಲ್ಲರೂ ಒಂದೇ ಎಂಬ ಭಾವನೆಯಿಂದ, ಮಿತೃತ್ವದಿಂದ ಬಾಳಬೇಕೆನ್ನುವ ಸಂದೇಶವನ್ನು ರಕ್ಷಾಬಂಧನ ಸಾರುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಶಿಶುಮಂದಿರ ಸಮಿತಿ ಉಪಾಧ್ಯಕ್ಷ ರಮೇಶ್ ಬೆದ್ರಂಪಳ್ಳ ಮಾತನಾಡಿ ರಕ್ಷಾಬಂಧನದ ಐತಿಹ್ಯದ ಬಗ್ಗೆ ವಿವರಿಸಿದರು. ಕೆ.ವಿ.ಪ್ರಭಾವತಿ ಅತಿಥಿಯಾಗಿ ಉಪಸ್ಥಿತರಿದ್ದರು.ಮಾತೃ ಮಂಡಳಿ ಅಧ್ಯಕ್ಷೆ ಶ್ಯಾಮಲಾ ಆರ್.ಭಟ್ ಪತ್ತಡ್ಕ ಪ್ರಾಥರ್ಿಸಿದರು. ಶಿಶುಮಂದಿರ ಸಮಿತಿ ಕೋಶಾಧಿಕಾರಿ ನಳಿನಿ ಸೈಪಂಗಲ್ಲು ಸ್ವಾಗತಿಸಿದರು. ಶಾಂತಿ ಮಂತ್ರದೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯದ ಬಳಿಕ ಮಕ್ಕಳು, ಮಾತೆಯರು, ಹಿರಿಯರು ರಕ್ಷಾ ಬಂಧನ ಕಾರ್ಯದಲ್ಲಿ ಪಾಲ್ಗೊಂಡರು. ಶಿಕ್ಷಕಿಯರಾದ ಲಾವಣ್ಯ, ಹೇಮಾ ಸಹಕರಿಸಿದರು.