HEALTH TIPS

No title

             ಬುದ್ದಿ ಬರೋದು ಯಾವಾಗ- ವಿಕೋಪದ ಬೆನ್ನಲ್ಲಿ ವಿಕಲ್ಪ ಶುರು
    ತಿರುವನಂತಪುರ: ಶತಮಾನದಲ್ಲೇ ಅತ್ಯಂತ ಭೀಕರ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೇರಳದಲ್ಲಿ ರಕ್ಷಣಾ ಕಾಯರ್ಾಚರಣೆ ಬಹುತೇಕ ಮುಕ್ತಾಯಗೊಳ್ಳುತ್ತಿದ್ದಂತೆ ರಾಜಕೀಯ ಸಮರ ಆರಂಭವಾಗಿದೆ.
   ಈ 'ಮಾನವ ನಿಮರ್ಿತ ದುರಂತಕ್ಕೆ' ರಾಜ್ಯ ಸರಕಾರವೇ ಹೊಣೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಆರೋಪಿಸಿವೆ. ಎಡರಂಗ ನೇತೃತ್ವದ ಸರಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ವಾಗ್ದಾಳಿ ನಡೆಸಿದ್ದು, ರಾಜ್ಯದ 40ಕ್ಕೂ ಹೆಚ್ಚು ಅಣೆಕಟ್ಟೆಗಳ ಗೇಟುಗಳನ್ನು ಏಕಕಾಲಕ್ಕೆ ತೆರೆದು ಬಿಡಲು ಕಾರಣವಾದ ಸನ್ನಿವೇಶಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.
    'ಪಂಪಾ ನದಿಗೆ 9, ಇಡುಕ್ಕಿ ಮತ್ತು ಎನರ್ಾಕುಲಂ ಜಿಲ್ಲೆಗಳಲ್ಲಿ ಪೆರಿಯಾರ್ ನದಿಗೆ 11 ಅಣೆಕಟ್ಟೆಗಳು, ತ್ರಿಶೂರ್ನಲ್ಲಿ ಚಾಲಕ್ಕುಡಿ ನದಿಗೆ 6 ಅಣೆಕಟ್ಟೆಗಳಿದ್ದು ಇವುಗಳ ಗೇಟುಗಳನ್ನು ಏಕಕಾಲಕ್ಕೆ ತೆರೆದರೆ ಎಷ್ಟು ಭೂಪ್ರದೇಶ ಮುಳುಗಡೆಯಾಗಬಹುದು ಎಂಬ ಅರಿವೇ ರಾಜ್ಯ ಸರಕಾರಕ್ಕಿರಲಿಲ್ಲವೇ ಎಂದು ಚೆನ್ನಿತ್ತಲ ಆರೋಪಿಸಿದರು.
   ಪ್ರಸ್ತುತ ವರ್ಷ ಮಳೆ ಪ್ರಮಾಣ ಶೇ 41.44 ಹೆಚ್ಚಾಗಿದ್ದರೂ ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ಮಳೆಯಿಂದಲ್ಲ, 44 ಅಣೆಕಟ್ಟೆಗಳ ಗೇಟುಗಳನ್ನು ಮುನ್ಸೂಚನೆ ನೀಡದೆ ಒಮ್ಮೆಲೇ ತೆರೆದು ಬಿಟ್ಟಿದ್ದರಿಂದ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರಿಂದ ಇದೊಂದು ಮಾನವ ನಿಮರ್ಿತ ದುರಂತ ಎಂದು ಚೆನ್ನಿತ್ತಲ ಬಣ್ಣಿಸಿದ್ದಾರೆ.
   ಸರಕಾರಕ್ಕೆ ದೃಷ್ಟಿ ಹೀನತೆ!
  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರದ ದೂರದೃಷ್ಟಿಯ ಕೊರತೆಯೇ ಈ ದುರಂತಕ್ಕೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೆ ಟೀಕಿಸಿದ್ದಾರೆ. ಆದರೆ ರಾಜ್ಯ ವಿದ್ಯುತ್ ಪ್ರಸರಣ ಬೋಡರ್್ ಆರೋಪಗಳನ್ನು ನಿರಾಕರಿಸಿದ್ದು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ನೀಡಿದ ಬಳಿಕವೇ ಅಣೆಕಟ್ಟೆಗಳ ಗೇಟುಗಳನ್ನು ತೆರೆಯಲಾಗಿದೆ ಎಂದು ಮಂಡಳಿ ಅಧ್ಯಕ್ಷ ಕೆ.ಪಿ ಶ್ರೀಧರನ್ ನಾಯರ್ ಹೇಳಿದ್ದಾರೆ.
   ಕಲೆಕ್ಟರಿಗೆ ವಾಟ್ಸ್ಪ್:
   ವಯನಾಡಿನ ಅಣೆಕಟ್ಟು ನೀರನ್ನು ಬಿಡುವ ಮೊದಲು ಜಿಲ್ಲಾಧಿಕಾರಿಗಳಿಗೆ ಯಾವುದೇ ಸುಚನೆ-ಒಪ್ಪಿಗೆ ಪಡೆಯಲಿಲ್ಲ ಎಂಬ ದೂರನ್ನು ಚೆನ್ನಿತ್ತಲ ಉಲ್ಲೇಖಿಸಿದ್ದು, ಇದನ್ನು ತಳ್ಳಿಹಾಕಿರುವ ವಿದ್ಯುತ್ ಇಲಾಖೆ ಜಿಲ್ಲಾಧಿಕಾರಿಗಳಿಗೆ ವಾಟ್ಸ್ಫ್ ಸಂದೇಶ ನೀಡಲಾಗಿತ್ತೆಂಬ ಬಾಲಿಶ ಉತ್ತರ ನೀಡುವ ಮೂಲಕ ನಗೆಪಾಟಲಿಗೀಡಾದ ಪ್ರಸಂಗವೂ ಬುಧವಾರ ನಡೆದಿದ್ದು, ಒಟ್ಟು ರಾಜಕೀಯ ಮೇಲಾಟ, ಅಧಿಕಾರಿಗಳ ದರ್ಪ, ಹೊಂದಾಣಿಕೆ ರಹಿತ ಆಡಳಿತ ವ್ಯವಸ್ಥೆ ಜನಸಾಮಾನ್ಯರನ್ನು ಕಂಗೆಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries