HEALTH TIPS

No title

                           ಆನೆಗುಂದಿಶ್ರೀ ಜನ್ಮ ವರ್ಧಂತ್ಯುತ್ಸವ ಆ.8 ರಂದು
                  ಆಸ್ಥಾನ ವಿದ್ವಾಂಸ ಪದವಿ ಮತ್ತು ಸಾಹಿತ್ಯ ಸರಸ್ವತೀ ಸಮ್ಮಾನ್ ಪ್ರದಾನ
    ಕುಂಬಳೆ: ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಜನ್ಮವರ್ಧಂತ್ಯುತ್ಸವು ಆಗಸ್ಟ್ 8ರಂದು ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಠದಲ್ಲಿ ನಡೆಯಲಿದೆ.
   ಅಂದು  ಪೂವರ್ಾಹ್ನ 6ರಿಂದ ಶ್ರೀ ಗಣೇಶ ಅಥರ್ವಶಿರ್ಷ ಹೋಮ, ಪೂರ್ಣಮಾನ ನವಗ್ರಹ ಹೋಮ, ಶತರುದ್ರ ಯಾಗ, ಮಹಾಮೃತ್ಯುಂಜಯ ಹೋಮ, ಶ್ರೀ ಧನ್ವಂತರೀ ಹೋಮ, ಶ್ರೀ ಮಹಾ ಸರಸ್ವತೀ ಯಜ್ಞ, ಜಗದ್ಗುರುಗಳವರ ತುಲಾಭಾರ ಸೇವೆ ನಡೆಯಲಿದೆ. ಬಳಿಕ  ಶ್ರೀ ಸರಸ್ವತೀ ಸಭಾ ಭವನದಲ್ಲಿ  11ಕ್ಕೆ ನಡೆಯುವ ಧರ್ಮಸಂಸತ್ತಿನಲ್ಲಿ  ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿರುವರು. ಸಮಾರಂಭದಲ್ಲಿ  ಮಹಾಸಂಸ್ಥಾನದ  ವಾಸ್ತು  ಮತ್ತು ಜ್ಯೋತಿಷ್ಯ ವಿಭಾಗದ ಆಸ್ಥಾನ ವಿದ್ವಾನ್ ಪದವಿಯನ್ನು  ಅಂತರಾಷ್ಟ್ರೀಯ ವಾಸ್ತುತಜ್ಞ ಜ್ಯೋತಿಷ್ಯ ವಿದ್ವಾನ್ ಪಡೀಲು ಉಮೇಶ್ ಆಚಾರ್ಯ ಇವರಿಗೆ ಪ್ರದಾನ ಮಾಡಲಾಗುವುದು.  ಮಹಾಸಂಸ್ಥಾನದ ವತಿಯಿಂದ  ವಿಶೇಷ ಗೌರವ ಅಭಿನಂದನೆ  ಪುರಸ್ಕಾರದೊಂದಿಗೆ ಹಾಗೂ  ಸಾಹಿತ್ಯ ಸರಸ್ವತೀ ಸಮ್ಮಾನ್ ಪ್ರಶಸ್ತಿ ಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಇವರಿಗೆ ಪ್ರದಾನ ಮಾಡಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಚಾತುಮರ್ಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ  ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ ಇವರು ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಶ್ರೀಕಾಳಿಕಾಂಬಾ ಕಂಠೇಶ್ವರ ದೇವಸ್ಥಾನದ ಪದಾಧಿಕಾರಿಗಳಾದ  ನಂದಗೋಪಾಲ್ ಆಚಾರ್ಯ, ಚಿಕ್ಕಣ್ಣಾಚಾರ್,  ಯೋಗೀಶ್ ಆಚಾರ್ಯ, ನಾಗರಾಜ ಆಚಾರ್ಯ, ಕಾಂತರಾಜ ವಿಶ್ವಕರ್ಮ,  ಕೆ.ಎನ್ ಶ್ರೀನಿವಾಸ ವಿಶ್ವಕರ್ಮ, ಸುಳ್ಯ ಕೇಶವ ವೇದ ಪಾಠ ಶಾಲೆಯ ವೇದಮೂತರ್ಿ ಬ್ರಹ್ಮಶ್ರೀ ನಾಗರಾಜ ಭಟ್, ವೇದಮೂತರ್ಿ ಬ್ರಹ್ಮಶ್ರೀ ಶಿವಶಂಕರ ಭಟ್ ಕಿಳಿಂಗಾರು, ಸಮಾಜ ಸೇವಕ ಗಣೇಶ್ ವಿಶ್ವಕರ್ಮ ಬೆಂಗಳೂರು, ಉದ್ಯಮಿ  ಸುರೇಶ್ ಶೆಟ್ಟಿ ಗುಮರ್ೆ  ಭಾಗವಹಿಸುವರು. ಆನೆಗುಂದಿ ಪಂಚ ಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ  ಹರಿಶ್ಚಂದ್ರ ಆಚಾರ್ಯ ಬೆಂಗಳೂರು, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ  ಯು.ಕೆ.ಎಸ್ ಸೀತಾರಾಮ ಆಚಾರ್ಯ,  ಆನೆಗುಂದಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ  ಕೇಶವ ಆಚಾರ್ಯ, ಟಿ. ಸುಧಾಕರ ಆಚಾರ್ಯ ತ್ರಾಸಿ, ಚಾತುಮರ್ಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ  ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಹಾಗೂ ಕಾಸರಗೋಡು, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಸಮಾಜದ ದೇವಸ್ಥಾನಗಳ ಆಡಳಿತ ಮೊಕ್ತೇಸರರುಗಳು, ವಲಯಸಮಿತಿ ಮುಖಂಡರುಗಳು ಹಾಗೂ ಆಹ್ವಾನಿತ ಪ್ರಮುಖರು ಉಪಸ್ಥಿತರಿರುವರು. ಸಮಾರಂಭದ ಯಶಸ್ವಿಗಾಗಿ ಸಮಸ್ತ ಶಿಷ್ಯವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಹಾಸಂಸ್ಥಾನದ ಪ್ರಕಟಣೆ ತಿಳಿಸಿದೆ.
                  ಆನೆಗುಂದಿಶ್ರೀ ಚಾತುಮರ್ಾಸ್ಯ: ವೈದಿಕ ಸಮಾವೇಶ ಆ.7ಕ್ಕೆ
                     ವಿಚಾರಗೋಷ್ಠಿ- ಸಂವಾದ- ಸನ್ಮಾನ ಕಾರ್ಯಕ್ರಮ
    ಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಚಾತುಮರ್ಾಸ್ಯವು ಜು.27ರಿಂದ ಆರಂಭಗೊಂಡಿದ್ದು ಇದರ ಅಂಗವಾಗಿ ಆಗಸ್ಟ್ 7 ರಂದು  ವೈದಿಕ ಸಮಾವೇಶವು ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಠದಲ್ಲಿ ನಡೆಯಲಿದೆ. ಅಪರಾಹ್ನ 2.30ಕ್ಕೆ ನಡೆಯುವ ಸಮಾವೇಶದಲ್ಲಿ ಆನೆಗುಂದಿಶ್ರೀಗಳವರು ಆಶೀರ್ವಚನ ನೀಡಲಿದ್ದು ಹಿರಿಯ ವೈದಿಕ ವಿದ್ವಾಂಸ ಕಟಪಾಡಿಯ ವೇದಮೂತರ್ಿ ಬ್ರಹ್ಮಶ್ರೀ ಶ್ರೀಧರ ಶಮರ್ಾ ಅಧ್ಯಕ್ಷತೆ ವಹಿಸುವರು. ಸಮಾಜ- ವೈದಿಕರು- ಮಹಾಸಂಸ್ಥಾನ ಎಂಬ ವಿಷಯದಲ್ಲಿ  ವೇದಮೂತರ್ಿ ಬ್ರಹ್ಮಶ್ರೀ ವೇಲಾಪುರಿ ವಿಶ್ವನಾಥ ಶಮರ್ಾ ಹಾಗೂ ಚಾತುಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಸುಂದರ ಆಚಾರ್ಯ ಮಂಗಳೂರು ಅವರು ಉಪನ್ಯಾಸ ನೀಡುವರು. ಮಹಾಸಂಸ್ಥಾನದ ವ್ಯಾಪ್ತಿಯ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಹಾಗೂ ತಂತ್ರಿವರ್ಯರು,ವಿದ್ವಾನ್ ಶಂಕರ ಆಚಾರ್ಯ ಕಡ್ಲಾಸ್ಕರ್ ಪಂಡಿತ್, ಚಾತುಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ  ಪಿ.ವಿ. ಗಂಗಾಧರ ಆಚಾರ್ಯ, ಉಡುಪಿ, ಚಾತುಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ   ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ.ಕೇಶವ ಆಚಾರ್ಯ ಮಂಗಳೂರು, ನಿಕಟ ಪೂರ್ವ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಉಪಾಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಸಮಾವೇಶಕ್ಕೆ ನೇತೃತ್ವ ನೀಡುವರು. ಇದೇ ವೇಳೆ ಸಮಾಜದ ಹಿರಿಯ ಪುರೋಹಿತ  ವೀರರಾಘವ ಶಮರ್ಾ ಬಳ್ಳಾರಿ,  ಬ್ರಹ್ಮಶ್ರೀ  ನಾರಾಯಣ ಪುರೋಹಿತ್ ಸುರತ್ಕಲ್, ಬ್ರಹ್ಮಶ್ರೀ  ನಾರಾಯಣ ಪುರೋಹಿತ್ ಬೈಲೂರು, ಬ್ರಹ್ಮಶ್ರೀ  ಕೃಷ್ಣ ಮೂತರ್ಿ ಪುರೋಹಿತ್ ಕೊಪ್ಪ, ಬ್ರಹ್ಮಶ್ರೀ  ಗಂಗಾಧರ  ಪುರೋಹಿತ್ ನೂಜಾಡಿ, ಬ್ರಹ್ಮಶ್ರೀ ರಾಮಚಂದ್ರ ಪುರೋಹಿತ್  ಪುತ್ತೂರು,ಬ್ರಹ್ಮಶ್ರೀ  ಮೋಹನ ಪುರೋಹಿತ್ ಹಲಸಿನಕಟ್ಟೆ,ಬ್ರಹ್ಮಶ್ರೀ  ಶ್ರೀನಿವಾಸ ಪುರೋಹಿತ್, ಬಂಗ್ರಮಂಜೇಶ್ವರ, ಬ್ರಹ್ಮಶ್ರೀ  ಕುಸುಮಾಕರ ಪುರೋಹಿತ್ ಮಂಗಳೂರು,ಬ್ರಹ್ಮಶ್ರೀ  ವೆಂಕಟೇಶ  ಪುರೋಹಿತ್ ಉಬ್ಬೂರು, ಬ್ರಹ್ಮಶ್ರೀ  ಹರಿಶ್ಚಂದ್ರ  ಪುರೋಹಿತ್  ಮಂಜೇಶ್ವರ ಕಾಸರಗೋಡು, ದಿ. ವ್ಯಾಸರಾಯ ಪುರೋಹಿ
ತ್  ಸ್ಮರಣಾರ್ಥ ಮನೆಯವರನ್ನು  ಅವರ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಗುವುದು. ಸಮಾರಂಭದ ಯಶಸ್ವಿಗಾಗಿ  ಎಲ್ಲಾ ವೈದಿಕರು, ಸಮಸ್ತ ಶಿಷ್ಯವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಹಾಸಂಸ್ಥಾನದ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries