HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಕುಟುಂಬಶ್ರೀಯಿಂದ ವಿಶೇಷ ಮಕ್ಕಳಿಗಾಗಿ ಜಿಲ್ಲೆಯಲ್ಲಿ 12 ಬಡ್ಸ್ ಶಾಲೆಗಳು
    ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ವಿಶೇಷ ಮಕ್ಕಳಿಗಾಗಿ ಜಿಲ್ಲೆಯಲ್ಲಿ 12 ಬಡ್ಸ್ ಶಾಲೆಗಳನ್ನು ಆರಂಭಿಸಲಾಗುವುದು. ಜಿಲ್ಲೆಯ ಎಂಡೋ ಪೀಡಿತ 11 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಒಂದು ನಗರಸಭೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ಮೇಲ್ನೋಟ ವಹಿಸುವ ಬಡ್ಸ್ ಶಾಲೆಗಳು ಶೀಘ್ರ ಆರಂಭಗೊಳ್ಳಲಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕಾಯರ್ಾಚರಿಸುವ ಬಡ್ಸ್ ಶಾಲೆಗಳ ಸಂಖ್ಯೆ 21ಕ್ಕೇರಿದೆ. ಚೆರ್ವತ್ತೂರು, ಮಂಗಲ್ಪಾಡಿ, ಕುಂಬ್ಡಾಜೆ, ಬೇಡಡ್ಕ, ಚೆಂಗಳ, ಉದುಮ, ಚೆಮ್ನಾಡು, ಕಿನಾನ್ನೂರು-ಕರಿಂದಳಂ, ಅಜನೂರು, ಪಡನ್ನಾ, ತೃಕ್ಕರಿಪುರ ಗ್ರಾಪಂಗಳಲ್ಲಿ ಮತ್ತು ಕಾಞಂಗಾಡು ನಗರಸಭೆಗಳಲ್ಲಿ ಪ್ರಾರಂಭಗೊಳ್ಳಲಿದೆ.
    ಪ್ರತಿ ಬಡ್ಸ್ ಶಾಲೆಗಳ ಮೂಲ ಸೌಕರ್ಯಕ್ಕಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ 25 ಲಕ್ಷ ರೂ. ಮಂಜೂರುಗೊಳಿಸಲಾಗಿದೆ. ಮೊದಲ ಹಂತದಲ್ಲಿ 12.5 ಲಕ್ಷ ರೂ. ಪ್ರಾಜೆಕ್ಟ್ ವರದಿ ನೀಡಿದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡಲಾಗುವುದು. ರಾಜ್ಯ ಸರಕಾರದ ಇ-ಲಾಂಫ್ಸ್ ಪ್ರಕಾರ ಹಣ ಮಂಜೂರುಗೊಳಿಸಲಾಗುವುದು. ಬಡ್ಸ್ ಶಾಲೆಗಳು ಕಾಯರ್ಾಚರಿಸಬೇಕಾದ ಕಟ್ಟಡಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳೇ ಒದಗಿಸಬೇಕು. ಕಲಿಕೋಪಕರಣಗಳು, ಪೀಠೋಪಕರಣಗಳು, ಟೆಲಿವಿಷನ್, ಪ್ರಾಜೆಕ್ಟರ್ಗಳನ್ನು ಖರೀದಿಸಬಹುದು.
  ವಿದ್ಯಾಥರ್ಿ ಸೌಹಾರ್ದ ರ್ಯಾಂಪ್ ಸಹಿತ ಸುರಕ್ಷಾ ಉಪಕರಣಗಳನ್ನು ಸಜ್ಜುಗೊಳಿಸಬೇಕು. ಮೊದಲ ಹಂತದ ಯೋಜನೆಗಳನ್ನು ಪೂರ್ಣಗೊಳಿಸಿದರೆ ಮಾತ್ರ ಬಾಕಿ ಮೊತ್ತವನ್ನು ಮಂಜೂರುಗೊಳಿಸಲಾಗುವುದು. ಶಿಕ್ಷಕರು, ಸಹಾಯಕಿ, ಇತರ ಸಿಬ್ಬಂದಿಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳೇ ಸಂಬಳ ನೀಡಬೇಕು. ಶಾಲೆಗಳಿಗಿರುವ ಶಿಕ್ಷಕರ ಪ್ಯಾನಲ್ ಜಿಲ್ಲಾ ಮಿಷನ್ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುವುದು. ಮುಂದಿನ ಯೋಜನೆಯಂತೆ ವಿಶೇಷ ವಿದ್ಯಾಥರ್ಿಗಳ ತಾಯಿಯಂದಿರಿಗೆ ಉದ್ಯೋಗ ತರಬೇತಿ ಕೇಂದ್ರಗಳನ್ನು ಶಾಲೆಯೊಂದಿಗೆ ಹೊಂದಿಕೊಂಡು ತೆರೆಯಲಾಗುವುದು.
   ಇದೀಗ ಎಣ್ಮಕಜೆ ಹಾಗೂ ನೀಲೇಶ್ವರಗಳಲ್ಲಿರುವ ಮಾದರಿ ಬಡ್ಸ್ ಗಳಂತೆ ಇಲ್ಲಿಯೂ ಸ್ನೇಹ ತಣಲ್ ಎಂಬ ಉದ್ಯೋಗ ತರಬೇತಿ ಕೇಂದ್ರ ಆರಂಭಗೊಳ್ಳುವುದರೊಂದಿಗೆ ಎಂಡೋಸಲ್ಫಾನ್ ಸಹಿತ ಸಂತ್ರಸ್ತರಾದ ಮಕ್ಕಳ ಹೆತ್ತವರಿಗೆ ಸ್ವ ಉದ್ಯೋಗದ ಮೂಲಕ ಆದಾಯ ಗಳಿಸಲು ಸಾಧ್ಯವಾಗುವುದು. ಇದೀಗ ಶಾಲೆಗಳ ಸಂಖ್ಯೆ ಹೆಚ್ಚಾದಂತೆ ಎಲ್ಲ ವಿಶೇಷ ಮಕ್ಕಳನ್ನೂ ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುವುದು.
     .........................
   ಕುಟುಂಬಶ್ರೀ ಮಿಷನ್ ಸಹಾಯದೊಂದಿಗೆ ಆರಂಭಗೊಳ್ಳುವ ಬಡ್ಸ್ ಶಾಲೆಗಳ ಪಾಲನೆಯನ್ನು ಸ್ಥಳೀಯಾಡಳಿತ ಸಂಸ್ಥೆಗಳೇ ನಿರ್ವಹಿಸಬೇಕು. ಆರಂಭಿಕ ಹಂತದಲ್ಲಿ ನೀಡುವ ಮೊತ್ತವನ್ನು ವಿನಿಯೋಗಿಸಿದ ಬಳಿಕವಷ್ಟೇ ಉಳಿದ ಮೊತ್ತ ಮಂಜೂರುಗೊಳಿಸಲಾಗುವುದು.
            ಟಿ.ಟಿ. ಸುರೇಂದ್ರನ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries