HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಯುವಾಬ್ರಿಗೇಡ್ ಸಾರಥ್ಯದಲ್ಲಿ ದಿಗ್ವಿಜಯ ರಥಯಾತ್ರೆ
   ಕುಂಬಳೆ: ಸ್ವಾಮಿ ವಿವೇಕಾನಂದರ  ಚಿಕಾಗೋ ಭಾಷಣದ 125 ವರ್ಷ  ಹಾಗೂ ಸಹೋದರಿ ಭಗಿನಿ ನಿವೇದಿತಾ ಅವರ 150ನೇ ಜನ್ಮದಿನ ವರ್ಷ ಆಚರಣೆ ಪ್ರಯುಕ್ತ ಯುವಾಬ್ರಿಗೇಡ್ ಸಾರಥ್ಯದಲ್ಲಿ  ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಕನರ್ಾಟಕದ ರಾಜಧಾನಿ ಬೆಂಗಳೂರಿನಿಂದ ಹೊರಟು ಇಡೀ ಕನರ್ಾಟಕದಾಧ್ಯಂತ ಸಂಚರಿಸಿ, ಸೆ. 22 ರಿಂದ  ದಕ್ಷಿಣಕನ್ನಡ ಜಿಲ್ಲೆಯ ವಿವಿಧೆಡೆ ಸ್ವಾಗತಗೊಂಡು ಸಾರ್ವಜನಿಕ ಕಾರ್ಯಕ್ರಮ,ಮೆರವಣಿಗೆ,ಸಾಂಸ್ಕೃತಿಕ, ಭಜನಾ ತಂಡಗಳೊಂದಿಗೆ  ಹಲವು ಭಾಗಗಳ ಮೂಲಕ ಸಂಚರಿಸಿ, ಕಾಸರಗೋಡು ಜಿಲ್ಲೆಗೆ ಸೆ.27 ರಂದು ಆಗಮಿಸಲಿದೆ
   ಹೂವಿನ ಅಲಂಕಾರದೊಂದಿಗೆ ಸ್ವಾಮಿ ವಿವೇಕಾನಂದರ ಮೂತರ್ಿ ಹಾಗೂ ಭಗಿನಿ ಸಹೋದರಿ ನಿವೇದಿತಾ ಅವರ ಮೂತರ್ಿ ರಥದಲ್ಲಿದ್ದು ರಥ ಸಾಗುವ ದಾರಿಯಲ್ಲಿ ಹಲವು ಸಂಘ-ಸಂಸ್ಥೆ ಗಳ ಪುಪ್ಪಾರ್ಚನೆ ಹಾಗೂ ಶಾಲಾ ಕಾಲೇಜುಗಳಲ್ಲಿ ಸ್ವಾಗತಿಸುವ ಮೂಲಕ ಸ್ವಾಮಿ ವಿವೇಕಾನಂದರ ರಥವನ್ನು ಸ್ವಾಗತಿಸಲಾಗುತ್ತದೆ.
   ರಾಷ್ಟ್ರ ಚಿಂತನೆಯನ್ನೊಳಗೊಂಡು ದೇಶ ಮೊದಲು, ಎಂಬ ಭಾವನೆಯಿಂದ ಕೆಲಸ ಮಾಡುತ್ತಿರುವ ಸಂಸ್ಥೆ, ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ. ಯುವಕರ ಸ್ಪೂತರ್ಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ಈ ವರ್ಷ 125 ನೇ ವರ್ಷ.ಮಾರ್ಗರೇಟ್ ಎಲಿಜಬೆತ್ ನೋಬೆಲ್ ಭಾರತಕ್ಕೆ ಬಂದು ಸ್ವಾಮಿ ವಿವೇಕಾನಂದರಿಂದ ನಿವೇದಿತಾ ಎಂಬ ಹೆಸರು ಪಡೆದು ತನ್ನ ಸಂಪೂರ್ಣ ಜೀವನವನ್ನು ತಾಯ್ನಾಡಿನ ಸೇವೆಗೆ ಮೀಸಲಾಗಿಸಿ, ವಿಶೇಷವಾಗಿ ಭಾರತೀಯ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದವರು. ಅವರ 150 ನೇ ಜನ್ಮವಷರ್ಾಚರಣೆ. ಆದ್ದರಿಂದ ಸ್ವಾಮಿ ವಿವೇಕಾನಂದರು ಹಾಗೂ ಸೋದರಿ ನಿವೇದಿತಾರ  ಚಿಂತನೆಗಳನ್ನು ಪ್ರಸರಿಸುವ ನಿಟ್ಟಿನಲ್ಲಿ ದಿಗ್ವಿಜಯ ರಥ ಯಾತ್ರೆಯು ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ.
  ದಿಗ್ವಿಜಯ ರಥವು ಮಂಗಳೂರಿನಿಂದ ಹೆದ್ದಾರಿ ಮೂಲಕ ಮಂಜೇಶ್ವರ ,ತಲಪಾಡಿ, ಉಪ್ಪಳ,ಕುಂಬಳೆ ಮಾರ್ಗವಾಗಿ ಬದಿಯಡ್ಕ ಪೆರ್ಲ ಮೂಲಕ ವಿಟ್ಲ ಮಾರ್ಗವಾಗಿ ರಥ ಮುಂದುವರಿಯಲಿದೆ.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries