ಮೊಸರು ಕುಡಿಕೆ ಉತ್ಸವ ಮತ್ತು ಯಕ್ಷಗಾನ ಬಯಲಾಟ
ಬದಿಯಡ್ಕ: ಕುಂಟಾಲುಮೂಲೆ ಶ್ರೀ ಹನುಮಾನ್ ಫ್ರೆಂಡ್ಸ್ ಕ್ಲಬ್ ವಾಂತಿಚ್ಚಾಲು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 17 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಸ್ಪಧರ್ೆಗಳು ಹಾಗೂ ಯಕ್ಷಗಾನ ಬಯಲಾಟ ಜರಗಲಿದೆ.
ಬೆಳಿಗ್ಗೆ ಚಿರಂಜೀವಿ ಮಿತ್ರ ವೃಂದ ಕುಂಟಾಲುಮೂಲೆ ಇವರಿಂದ ಭಜನಾ ಕಾರ್ಯಕ್ರಮ, ಬಳಿಕ ಆಟೋಟ ಸ್ಪಧರ್ೆಗಳು ನಡೆಯಲಿದೆ. ಕಾರ್ಯಕ್ರಮವನ್ನು ಅಧ್ಯಾಪಕ ಕೃಷ್ಣಪ್ರಸಾದ್ ಬನಾರಿ ಉದ್ಘಾಟಿಸುವರು. ಕಾರ್ಯಕ್ರಮದಂಗವಾಗಿ ಯುವಕರಿಗೆ ಜಾರುಕಂಬ, ಮಹಿಳೆಯರಿಗೆ ಲಿಂಬೆ ಚಮಚ ಓಟ, ಸೂಜಿ ನೂಲು, ಬಾಲಕ ಬಾಲಕಿಯರಿಗೆ ಸಂಗೀತ ಕುಚರ್ಿ, ಬಾಲ್ ಪಾಸಿಂಗ್, ಲಿಂಬೆ ಚಮಚ ಓಟ, ಪುಟಾಣಿ ಮಕ್ಕಳಿಗೆ ಕೃಷ್ಣ ವೇಷ, ಕೃಷ್ಣನ ಭಾವ ಚಿತ್ರಕ್ಕೆ ತಿಲಕ ಇಡುವುದು, ಬಕೆಟ್ಗೆ ಚೆಂಡು ಎಸೆಯುವುದು ಮೊದಲಾದ ಸ್ಪಧರ್ೆಗಳು ನಡೆಯಲಿದೆ.
ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಾಪಕಿ ವಾಣಿಶ್ರೀ ವಹಿಸುವರು. ಕವಿಯತ್ರಿ ಅಕ್ಷತಾ ರಾಜ್ ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಯುವ ನ್ಯಾಯವಾದಿ ಸಹನಾ ಕುಂದರ್ ಸೂಡ ದಾಮರ್ಿಕ ಭಾಷಣ ಮಾಡುವರು. ಯುವ ಯಕ್ಷಗಾನ ಪ್ರತಿಭೆಗಳಾದ ವಿದ್ಯಾ ಕೆ.ಎಂ. ಅವರನ್ನು ಅಭಿನಂದಿಸಲಾಗುವುದು. ಜಲಜಾಕ್ಷಿ ಮಾಡತ್ತಡ್ಕ, ಬಹುಮಾನ ವಿತರಿಸುವರು. ಸಂಜೆ 6 ರಿಂದ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಅವರಿಂದ `ಪುಣ್ಣಮೆದ ಪೊಣ್ಣು' ಎಂಬ ಯಕ್ಷಗಾನ ಬಯಲಾಟ ಜರಗಲಿದೆ.