ನಿವೇದಿತಾಗೆ ಸಹಾಯಧನ ಹಸ್ತಾಂತರ
ಬದಿಯಡ್ಕ: ಜನರ ತುತರ್ು ಸಹಾಯಕ್ಕಾಗಿ ರೂಪೀಕೃತಗೊಂಡ ನಿವೇದಿತಾ ಸೇವಾ ಮಿಶನ್ ನೀಚರ್ಾಲು ಇವರ ನೇತೃತ್ವದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುದುಕೋಳಿ ರಾಮನಾಯ್ಕರ ಸಹಾಯಕ್ಕಾಗಿ ಆರಂಭಿಸಿದ ಧನಸಂಗ್ರಹ ಅಭಿಯಾನಕ್ಕೆ ಬದಿಯಡ್ಕ ತಿಮ್ಮಪ್ಪ ಚೆಟ್ಟಿಯಾರ್ರ ಮಗ ವಿದೇಶದಲ್ಲಿ ಉದ್ಯೋಗದಲ್ಲಿರುವ ಕಮಲಾಕ್ಷ ಅವರು ತಮ್ಮ ಪತ್ನಿ ಮೃಣಾಲಿನಿಯವರ ಮೂಲಕ ರೂಪಾಯಿ 20,000ದ ಚೆಕ್ ಅನ್ನು ಸಹಾಯಧನವಾಗಿ ನೀಡಿದರು. ಸೇವಾ ಮಿಶನ್ನ ಕೋಶಾಧಿಕಾರಿ ಪುದುಕೋಳಿ ಶ್ರೀಕೃಷ್ಣ ಭಟ್ ಚೆಕ್ ಅನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಹರಿಪ್ರಸಾದ್ ಪೆರ್ವ, ಗಣೇಶ ಕೃಷ್ಣ ಅಳಕ್ಕೆ ಜೊತೆಗಿದ್ದರು.
ಸೆ.10ರಂದು ಕಿಡ್ನಿವೈಫಲ್ಯದಿಂದ ಬಳಲುತ್ತಿರುವ ರಾಮನಾಯ್ಕರ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಯಾವುದೇ ಆದಾಯವಿಲ್ಲದ ಕುಟುಂಬಕ್ಕೆ ಸಹಾಯಕ್ಕಾಗಿ ನಿವೇದಿತಾ ಸೇವಾಮಿಶನ್ ಸದಸ್ಯರು ಸ್ಪಂದಿಸಿದ್ದರು.
ಏನಂತಾರೆ:
ಪತ್ರಿಕೆಯಲ್ಲಿ ರಾಮನಾಯ್ಕರ ದುಸ್ತಿತಿಯ ಬಗ್ಗೆ ಪ್ರಕಟವಾದ ವರದಿಗೆ ಸ್ಪಂದಿಸಿ ಕಮಲಾಕ್ಷ ಅವರು ದೂರವಾಣಿ ಮುಖಾಂತರ ತಿಳಿಸಿ ಧನಸಂಗ್ರಹ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವುದಲ್ಲದೆ ರೂ. 20,000ವನ್ನು ನೀಡಿ ಸಹಕರಿಸುತ್ತಾರೆ.
- ಶ್ರೀಕೃಷ್ಣ ಭಟ್ ಪುದುಕೋಳಿ, ಕೋಶಾಧಿಕಾರಿ, ನಿವೇದಿತಾ ಸೇವಾಮಿಶನ್.