ಪಶು ಆಹಾರ ವಿತರಣೆ
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿ ವತಿಯಿಂದ ಹೈನುಗಾರಿಕೆಯ ಉತ್ತೇಜನಕ್ಕಾಗಿ 2018-19ನೇ ಸಾಲಿನ ಪಶು ಆಹಾರ(ಹಿಂಡಿ) ವಿತರಣೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಫಲಾನುಭವಿಗಳಿಗೆ ನೀಡಿ ಉದ್ಘಾಟಿಸಿದರು. ಬದಿಯಡ್ಕ ಟೌನ್ ಕ್ಷೀರೋತ್ಪಾದಕ ಸಹಕಾರಿ ಸಂಘದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಐತ್ತಪ್ಪ ಶೆಟ್ಟಿ ಕಡಾರು ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರು ಹಾಗೂ 30 ಜನ ಫಲಾನುಭವಿಗಳು ಉಪಸ್ಥಿತರಿದ್ದರು. ಬದಿಯಡ್ಕ ಮೃಗಾಸ್ಪತ್ರೆಯ ಅಸಿಸ್ಟೆಂಟ್ ಸುಪ್ರಭ ಸ್ವಾಗತಿಸಿ, ಕ್ಷೀರೋತ್ಪಾದಕ ಸಹಕಾರಿ ಸಂಘದ ಕಾರ್ಯದಶರ್ಿ ಸುರೇಖ ವಂದಿಸಿದರು.