HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ತುಳುನಾಡ ಜೋಕ್ಲೆ ಪರ್ಬ-2018 ಬದಿಯಡ್ಕದಲ್ಲಿ
    ಬದಿಯಡ್ಕ: ವಾಂತಿಚ್ಚಾಲು ಜಿ.ಕೆ.ಚಾರಿಟೇಬಲ್ ಟ್ರಸ್ಟ್ ಆಯೋಜಿಸುವ ತುಳುನಾಡ ಜೋಕ್ಲೆ ಪರ್ಬ-2018 ಕಾರ್ಯಕ್ರಮವು ಅ. 21 ಭಾನುವಾರ ಬದಿಯಡ್ಕ ಪೆರಡಾಲ ಶ್ರೀ ಉದನೇಶ್ವರ ಸಭಾಭವನದಲ್ಲಿ ನಡೆಯಲಿರುವುದು. 6 ತಿಂಗಳಿನಿಂದ 16 ವರ್ಷದ ತನಕದ ಮಕ್ಕಳ ಮುಗ್ದತೆಯ ಮನೋಲ್ಲಾಸದ ಕಲರವದ ಜೊತೆಗೆ ಪ್ರತಿಭಾನ್ವಿತ ಪುಟಾಣಿಗಳ ಉಜ್ವಲ ಭವಿಷ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಿದ ಈ ಮಕ್ಕಳ ಮಹೋತ್ಸವದಲ್ಲಿ ಮಕ್ಕಳಿಗಾಗಿಯೇ ವಿವಿಧ ಸ್ಪಧರ್ೆಗಳು, ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ನಿಮರ್ಾಣವಾಗಲಿದೆ. ಇದೇ ಮೊದಲ ಬಾರಿಗೆ ಕಾಸರಗೋಡು ಜಿಲ್ಲೆಗೆ ಆಗಮಿಸುವ ಕನರ್ಾಟಕದ ಪರಿಸರ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ| ಸಾಲುಮರದ ತಿಮ್ಮಕ್ಕ ಅವರು ಉದ್ಘಾಟನೆಗೈಯುವ ಕಾರ್ಯಕ್ರಮದಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪುಟಾಣಿ ಸಾಧಕರೇ ಅತಿಥಿಗಳಾಗಿ ಭಾಗವಹಿಸುವರು. ಒಡಿಯೂರು ಸಾಧ್ವಿ ಮಾತಾನಂದಮಯಿಯವರು ಬಹುಮಾನ ವಿತರಣೆಗೈಯಲಿದ್ದು, ಸಮಾಜದ ನಾನಾ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು.
   ಕಾರ್ಯಕ್ರಮದಲ್ಲಿ ತುಳುನಾಡ ಸಂಸ್ಕೃತಿ, ಜಾನಪದಗಳಿಗೆ ಸಂಬಂಧಿಸಿದ ವಿವಿಧ ಸ್ಪಧರ್ೆಗಳು ನಡೆಯಲಿದ್ದು, 6 ತಿಂಗಳಿನಿಂದ 1 ವರ್ಷದ ಮಕ್ಕಳಿಗೆ ಮುದ್ದುಕಂದಮ್ಮನ ನೈಜತೆಯ ಚಟುವಟಿಕೆಯ ಪ್ರಾಧಾನ್ಯತೆ ಕಲ್ಪಿಸುವ ಜೋಕ್ಲಾಟಿಕೆ ಸ್ಪಧರ್ೆ, 1ವರ್ಷದಿಂದ 3 ವರ್ಷದ ಮಕ್ಕಳಿಗೆ ಯಾವುದೇ ವೇಷವನ್ನು ತೊಟ್ಟು ಹಾವ ಭಾವ ಮತ್ತು ವೇಷಕ್ಕೆ ಪ್ರಾಧಾನ್ಯತೆ ಕಲ್ಪಿಸುವ `ಸಿರಿ ಪುರು ಬಾಲೆ' ಸ್ಪಧರ್ೆ, 3ವರ್ಷದಿಂದ 5 ವರ್ಷ ಮಕ್ಕಳಿಗೆ ತುಳುನಾಡಿನ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಪ್ರದಶರ್ಿಸುವ `ತುತ್ತೈತ ತೂಪರಿಕೆ', 1ನೇ ತರಗತಿಯಿಂದ 4ನೇ ತರಗತಿಯ ಮಕ್ಕಳಿಗೆ ಪದ್ಯಹೇಳುವ ಸ್ಪಧರ್ೆ, 5 ರಿಂದ 7ನೇ ತರಗತಿಯ ಮಕ್ಕಳಿಗೆ ಅಜ್ಜಿಕಥೆ ಹೇಳುವುದು, 8ರಿಂದ 10ನೇ ತರಗತಿಯ ಮಕ್ಕಳಿಗೆ ಕವಿತಾ ವಾಚನ, 1ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಚಿತ್ರಬಿಡಿಸುವ ಸ್ಪಧರ್ೆಯನ್ನೂ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಪ್ರತಿಭಾವಂತರಾಗಿದ್ದು, ಸ್ಪಧರ್ೆಯಲ್ಲಿ, ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸುವುದಾದರೆ ವೇದಿಕೆ ಮುಕ್ತವಾಗಿದ್ದು ಸೆ.10ರ ಮೊದಲು 9495324996 ನಂಬರಿಗೆ ಕರೆಮಾಡಬಹುದು. ಅಥವಾ ವಾಟ್ಸಪ್ ಮುಖಾಂತರ 9995015288 ಸಂಖ್ಯೆಗೆ ತಿಳಿಸಬೇಕಾಗಿ ಟ್ರಸ್ಟ್ ಅಧ್ಯಕ್ಷರಾದ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries