HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಕೊಂಡೆವೂರಲ್ಲಿ ವಿಶ್ವಜಿತ್ ಅತಿರಾತ್ರ ಸೋಮಯಾಗದ ಕರ್ಷಣಾ ಮುಹೂರ್ತ ಮತ್ತು ಚಪ್ಪರ ಮುಹೂರ್ತ
   ಉಪ್ಪಳ: ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವ ತಯಾರಿಯ ಅಂಗವಾಗಿ ಭಾನುವಾರ ಪೂವರ್ಾಹ್ನ 8.50 ಕ್ಕೆ ಚಪ್ಪರ ಮುಹೂರ್ತ ಮತ್ತು ಕರ್ಷಣಾ ಮುಹೂರ್ತ( ಯಾಗಶಾಲೆಯ ಭೂಮಿ ಉಳುಮೆ)ಯು  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ವೇದಮೂತರ್ಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ವಿದ್ಯುಕ್ತವಾಗಿ ನಡೆಯಿತು. ಬಳಿಕ ಅಶೋಕ್ ಅರಿಬೈಲು ಮತ್ತು ಲಕ್ಷ್ಮಣ ಅರಿಬೈಲುರವರು ಗದ್ದೆ ಉಳುಮೆಗೆ ಚಾಲನೆ ನೀಡಿದರು. ಸೇರಿದ ಗಣ್ಯರ ಉಪಸ್ಥಿತಿಯಲ್ಲಿ ಕಂಬವನ್ನು ನೆಡುವುದರ ಮೂಲಕ ಯಾಗಚಪ್ಪರಕ್ಕೆ ಚಾಲನೆ ನೀಡಲಾಯಿತು.
   ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಯಾಗದ ಪ್ರಧಾನ ಸಮಿತಿ, ಸ್ವಾಗತ ಸಮಿತಿ ಮತ್ತು ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳನ್ನು ಘೋಷಣೆ ಮಾಡಿ ಮಾತನಾಡಿ, ಈ ಮಹತ್ತರ ಯಾಗದಿಂದ ದೇಶ ಸುಭಿಕ್ಷವಾಗಬೇಕು ಎಂಬುದು ಉದ್ದೇಶವಾಗಿದೆ. ಇದರ ಯಶಸ್ಸಿಗೆ ಸರ್ವರೂ ಸಹಕರಿಸಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ. ಬಿ. ಪುರಾಣಿಕ್ ಮತ್ತು ಕ್ಯಾಪ್ಟನ್ ಗಣೇಶ್ ಕಾಣರ್ಿಕ್ ಸದಾಶಯದ ನುಡಿಗಳನ್ನು ವ್ಯಕ್ತಪಡಿಸಿದರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಡಾ. ಶ್ರೀಧರ ಭಟ್ ಉಪ್ಪಳ, ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರು, ಪುರುಷೋತ್ತಮ ಭಂಡಾರಿ ಅಡ್ಯಾರ್, ಸದಾನಂದ ನಾವರ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಸುಲೋಚನಾ ಭಟ್ ಮತ್ತು ಡಾ. ಆಶಾಜ್ಯೋತಿ ರೈ ಮಂಗಳೂರು ಉಪಸ್ಥಿತರಿದ್ದರು. ಮೋನಪ್ಪ ಭಂಡಾರಿ ಸ್ವಾಗತಿಸಿ, ಪುರುಷೋತ್ತಮ ಭಂಡಾರಿ ವಂದಿಸಿದರು. ಭಾಸ್ಕರ ಯು ಕೊಂಡೆವೂರು ನಿರೂಪಿಸಿದರು.
   ಈ ಸಂದರ್ಭದಲ್ಲಿ ಯಾಗದ ಪ್ರಧಾನ ಸಮಿತಿಯ ಪದಾಧಿಕಾರಿಗಳನ್ನು ಕೊಂಡೆವೂರು ಶ್ರೀಗಳು ಘೋಸಿದರು. ಗೌರವ ಮಾರ್ಗದರ್ಶನಕರಾಗಿ ಮಾಣಿಲ ಶ್ರೀಧಾಮದ  ಮೋಹನದಾಸ ಪರಮಹಂಸ ಸ್ವಾಮೀಜಿ, ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ ಕಟೀಲು, ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣ ಕಟೀಲು, ಬ್ರಹ್ಮಶ್ರೀ ಹರಿನಾರಾಯಣದಾಸ ಆಸ್ರಣ್ಣ ಕಟೀಲು, ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ್ ಗೋಕರ್ಣ, ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಅಗ್ನಿಹೋತ್ರಿ ಚೆರುಮುಕ್ ಬ್ರಹ್ಮಶ್ರೀ ವಲ್ಲಭನ್ ಅಕ್ಕಿತ್ತಿರಿಪ್ಪಾಡ್ ತ್ರಿಶ್ಶೂರ್, ವಿದ್ವಾನ್ ಸುಬ್ರಹ್ಮಣ್ಯ ಅವಧಾನಿ ಗುಂಡಿಬೈಲು ಉಡುಪಿ, ವಸಂತ ಭಟ್ ನೆಲ್ಲಿತೀರ್ಥ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಹರಿನಾರಾಯಣ ಮಯ್ಯ ಕುಂಬಳೆ, ಗೌರವಾಧ್ಯಕ್ಷರುಗಳಾಗಿ ಶ್ರೀಪಾದ ಯಸ್ಸೋ ನಾಯಕ್, ಮಾನ್ಯ ಆಯುಷ್ ಖಾತೆ ಸಚಿವರು, ಭಾರತ ಸರಕಾರ, ಸಂಸದ ನಳಿನ್ ಕುಮಾರ್ ಕಟೀಲು, ಗೌರವ ಕಾರ್ಯದಶರ್ಿಗಳಾಗಿ ಇ. ಮಹಾಬಲೇಶ್ವರ ಭಟ್, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಗೋಪಾಲ ಬಂದ್ಯೋಡು, ಅಧ್ಯಕ್ಷರು ಕುಸುಮೋದರ ಡಿ ಶೆಟ್ಟಿ ಮುಂಬಯಿ, ಕಾಯರ್ಾಧ್ಯಕ್ಷರುಗಳಾಗಿ ಕೆ. ಮೋನಪ್ಪ ಭಂಡಾರಿ ಮಂಗಳೂರು, ಡಾ. ಕೆ. ನಾರಾಯಣ್ ಬೆಂಗಳೂರು, ಡಾ. ಶ್ರೀಧರ ಭಟ್ ಉಪ್ಪಳ, ಪ್ರಧಾನ ಕಾರ್ಯದಶರ್ಿಗಳಾಗಿ ಸದಾನಂದ ನಾವರ ಮಂಗಳೂರು, ಪುರುಷೋತ್ತಮ ಭಂಡಾರಿ ಅಡ್ಯಾರ್, ರಾಮಚಂದ್ರ ಚೆರುಗೋಳಿ, ಕೋಶಾಧಿಕಾರಿಗಳಾಗಿ ಶಶಿಧರ ಶೆಟ್ಟಿ.ಗ್ರಾಮಚಾವಡಿ, ಯಾಗದ ಮಾತೃಸಮಿತಿಯ ಗೌರವಾಧ್ಯಕ್ಷರಾಗಿ ಸುಲೋಚನಾ ಭಟ್, ಗೌರವ ಕಾರ್ಯದಶರ್ಿಗಳಾಗಿ ಸುಧಾ ನಾರಾಯಣನ್, ರೂಪವಾಣಿ ಆರ್.ಭಟ್, ಸ್ವರ್ಣಲತಾ, ಅಧ್ಯಕ್ಷರನ್ನಾಗಿ  ಡಾ. ಆಶಾಜ್ಯೋತಿ ರೈ ಕಾಯರ್ಾಧ್ಯಕ್ಷರುಗಳಾಗಿ ಚೇತನಾ,  ಗೀತಾನಾರಾಯಣನ್,  ಸರೋಜಾ ಆರ್.ಬಲ್ಲಾಳ್, ಪದ್ಮಾ ಮೋಹನದಾಸ್, ವಾಣಿಶ್ರೀ ಸುರೇಶ್ ಆಚಾರ್ಯ, ಜಯಂತಿ ಟಿ. ಶೆಟ್ಟಿ ,ಪ್ರಧಾನ ಕಾರ್ಯದಶರ್ಿಗಳನ್ನಾಗಿ ಮೀರಾ ಆಳ್ವ  ಇವರುಗಳನ್ನು ನಿಯುಕ್ತಿಗೊಳಿಸಿದರು.


 











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries