ಕೊಂಡೆವೂರಿನಲ್ಲಿ ಕರ್ಷಣಾ ಮುಹೂರ್ತ, ಚಪ್ಪರ ಮುಹೂರ್ತ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019 ಫೆಬ್ರವರಿ 18ರಿಂದ 24ರ ತನಕ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಸಿದ್ಧತೆಯಾಗಿ 'ಚಪ್ಪರ ಮುಹೂರ್ತ, ಕರ್ಷಣಾ ಮುಹೂರ್ತ (ಯಾಗ ಭೂಮಿ ಉಳುವುದು) ಮತ್ತು ದ್ರಾವಣ ಮುಹೂರ್ತ (ಸೋಮಲತೆಯಿಂದ ರಸ ತೆಗೆಯುವ ಶಿಲಾ ಪಾತ್ರೆ) ಕಾರ್ಯಕ್ರಮಗಳು ಸೆ.23 ರಂದು ಭಾನುವಾರ ಬೆಳಿಗ್ಗೆ 8.50 ಕ್ಕೆ ಶ್ರೀ ಆಶ್ರಮ ಪರಿಸರದಲ್ಲಿ ಜರಗಲಿದೆ. ಬೆಳಿಗ್ಗೆ 10.ಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಯಾಗದ ಪ್ರಧಾನ ಸಮಿತಿಯ ಜವಾಬ್ದಾರಿಗಳನ್ನು ಘೋಷಣೆ ಮಾಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.