ಬಿಜೆಪಿಗೆ ತಾರಾಬಲ ನಿರೀಕ್ಷೆ
ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್, ಮೋಹನ್ ಲಾಲ್ ಕಣಕ್ಕೆ?
ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಸಿನಿಮಾ, ಕ್ರಿಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳ 70 ಕ್ಕೂ ಹೆಚ್ಚು ವೃತ್ತಿಪರರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ಸಿನಿಮಾ ನಟರಾದ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಮೊಹನ್ ಲಾಲ್ , ಮಾಧುರಿ ದೀಕ್ಷಿತ್. ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಅವರನ್ನು ಚುನಾವಣಾ ಅಖಾಡಕ್ಕಿಳಿಸಲು ಬಿಜೆಪಿ ಚಿಂತನೆ ಆರಂಭಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸಿನಿಮಾ, ಕಲೆ, ಸಂಸ್ಕೃತಿ , ಕ್ರೀಡಾ, ಮಾಧ್ಯಮ, ಆರೋಗ್ಯ ಮತ್ತಿತರ ಕ್ಷೇತ್ರಗಳ ಹೆಚ್ಚಿನ ಸಂಖ್ಯೆಯ ವೃತ್ತಿಪರರ ಕಡೆ ದೃಷ್ಟಿ ಹಾಯಿಸಲಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಪ್ರತಿಭೆ ತೋರಿಸಿರುವ ಇವರೆಲ್ಲಾರೂ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ರಾಜಕಾರಣಕ್ಕೆ ವಿಭಿನ್ನ ದೃಷ್ಠಿಕೋನ ಒದಗಿಸಲಿದ್ದಾರೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಕ್ಷಯ್ ಕುಮಾರ್ ಅವರನ್ನು ನವದೆಹಲಿ ಲೋಕಸಭಾ ಕ್ಷೇತ್ರದಿಂದ ಸನ್ನಿ ಡಿಯೋಲ್ ಗುರುದಾಸ್ ಪುರ, ಮಾಧುರಿ ದೀಕ್ಷಿತ್ ಮತ್ತು ಮೋಹನ್ ಲಾಲ್ ಅವರನ್ನು ಕ್ರಮವಾಗಿ ಮುಂಬೈ ಹಾಗೂ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಜಕಾರಣಕ್ಕೆ ಹೆಚ್ಚಿನ ಸಂಖ್ಯೆಯ ವೃತ್ತಿಪರರು ಬರಬೇಕೆಂಬುದು ಪ್ರಧಾನಿ ನರೇಂದ್ರಮೋದಿ ಅವರ ಅಭಿಲಾಷೆಯಾಗಿದ್ದು, ಕೆಲವು ಕಡೆಗಳಲ್ಲಿ ಆಡಳಿತಾ ವಿರೋಧಿ ಅಲೆ ಇರುವ ಕಡೆಗಳಲ್ಲಿ ಇವರಿಗೆ ಅವಕಾಶ ನೀಡಲು ಯೋಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.