ಸತತ ಕುಸಿತದ ಬಳಿಕ ಚೇತರಿಸಿಕೊಂಡ ಸೆನ್ಸೆಕ್ಸ್, ರುಪಾಯಿ ಮೌಲ್ಯ ಕೂಡ ಏರಿಕೆ!
ಮುಂಬೈ: ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಚೇತರಿಕೆ ಕಂಡಿದ್ದು, ಸೆನ್ಸೆಕ್ಸ್ ಶುಕ್ರವಾರ 300 ಅಂಕಗಳ ಏರಿಕೆ ಕಂಡಿದೆ. ಅಂತೆಯೇ ಡಾಲರ್ ಎದುರು ರುಪಾಯಿಮೌಲ್ಯ ಕೂಡ ಚೇತರಿಸಿಕೊಂಡಿದೆ.
ವಾರದ ಅಂತಿಮ ದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿತು. ಪ್ರಮುಖವಾಗಿ ಭಾರತದ ಸಗಟು ಹಣದುಬ್ಬರ ಪ್ರಮಾಣ ಚೇತರಿಕೆ ಕಂಡಿರುವ ಕುರಿತು ವರದಿಗಳು ಬಂದಿರುವ ಹಿನ್ನಲೆಯಲ್ಲಿ ಷೇರುಮಾರುಕಟ್ಟೆಯಲ್ಲಿ ಆಶಾದಾಯಕ ವಹಿವಾಟು ನಡೆಯುತ್ತಿದೆ. ಅಲ್ಲದೆ ಕೈಗಾರಿಕಾ ಉತ್ಪಾದನೆ ಪ್ರಮಾಣದಲ್ಲಿಯೂ ಕೂಡ ಶೇ.6.6ರಷ್ಟು ಏರಿಕೆ ಕಂಡುಬಂದಿದ್ದು, ಚಿಲ್ಲರೆ ಹಣದುಬ್ಬರ 10 ತಿಂಗಳ ಹಿಂದಿನ ಪ್ರಮಾಣಕ್ಕೆ ಹಿಂತಿರುಗುವ ಮೂಲಕ ಗ್ರಾಹಕರಲ್ಲಿ ನಿರಾಳತೆ ಮೂಡಿಸಿದೆ.
ಈ ಎಲ್ಲ ಅಂಶಗಳು ಭಾರತೀಯ ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ ಇಂದು 304.86?3 ಅಂಕಗಳ ಏರಿಕೆಯೊಂದಿಗೆ ಮತ್ತೆ 38 ಸಾವಿರ ಗಡಿ ದಾಟಿದೆ. ಅಂತೆಯೇ ನಿಫ್ಟಿ ಕೂಡ 84.90 ಅಂಕಗಳ ಏರಿಕೆಯೊಂದಿಗೆ 11, 400ರ ಗಡಿ ದಾಟಿದೆ.
ಡಾಲರ್ ಎದುರು ಚೇತರಿಕೆ ಕಂಡ ರುಪಾಯಿ ಮೌಲ್ಯ:
ರುಪಾಯಿ ಮೌಲ್ಯದಲ್ಲಿಯೂ ಕೂಡ ಚೇತರಿಕೆ ಕಂಡು ಬಂದಿದ್ದು, ರೂಪಾಯಿ ಮೌಲ್ಯದಲ್ಲಿ 50 ಪೈಸೆಯಷ್ಚು ಏರಿಕೆ ಕಂಡುಬಂದಿದೆ, ಆ ಮೂಲಕ ಪ್ರತೀ ಡಾಲರ್ ಎದುರು ರುಪಾಯಿ ಮೌಲ್ಯ 71.68ಕ್ಕೆ ಏರಿಕೆಯಾಗಿದೆ. ಈ ಹಿಂದೆ ಕುಸಿತ ಕಂಡಿದ್ದ ರುಪಾಯಿ ಮೌಲ್ಯ 72 ರೂಗೆ ಕುಸಿದಿತ್ತು. ಭಾರತೀಯ ಷೇರುಮಾರುಕಟ್ಟೆಯ ಸಕಾರಾತ್ಮಕ ವಹಿವಾಟು ಮತ್ತು ಡಾಲರ್ ಗೆ ಉಂಟಾಗಿದ್ದ ಅಲ್ಪ ಪ್ರಮಾಣದ ಬೇಡಿಕೆ ಕುಸಿದ ಹಿನ್ನಲೆಯಲ್ಲಿ ರುಪಾಯಿ ಮೌಲ್ಯ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.