HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಎಡನೀರಿನಲ್ಲಿ 31ನೇ ವರ್ಷದ  ಗಣೇಶೋತ್ಸವ
   ಬದಿಯಡ್ಕ: ಎಡನೀರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.13 ರಂದು ಎಡನೀರು ಮಠದ ಶ್ರೀಕೃಷ್ಣ ರಂಗಮಂಟಪದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  ಗಣೇಶೋತ್ಸವದ ಪೂರ್ವಭಾವಿ ಸಭೆ ಎಡನೀರು ಶ್ರೀವಿಷ್ಣುಮಂಗಲ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯಿತು. ಕೇರಳದಲ್ಲಿ ಅತಿವೃಷ್ಠಿಯಿಂದಾಗಿ ನಾಶನಷ್ಟಗಳು ಸಂಭವಿಸಿದ್ದರಿಂದ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು. ಗಣೇಶೋತ್ಸವದ ಉಳಿಕೆಯ ನಿಧಿಯನ್ನು ರಾಜ್ಯ ಸಂತ್ರಸ್ಥ ನಿಧಿಗೆ ಹಸ್ತಾಂತರಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು.
  ಸಭೆಯ ಅಧ್ಯಕ್ಷತೆಯನ್ನು ಮಧುಸೂದನ ಮಾಸ್ತರ್ ಎಡನೀರು ವಹಿಸಿದ್ದರು. ಗೌರವಾಧ್ಯಕ್ಷ ಕೆ.ಮಾಧವ ಹೇರಳ, ಕಾರ್ಯದಶರ್ಿ ಕಲ್ಲುಗದ್ದೆ ಪ್ರಶಾಂತ್, ಕೋಶಾಧಿಕಾರಿ ಭವಾನಿಶಂಕರ್ ಕಾಪುಮೂಲೆ, ಪದಾಧಿಕಾರಿಗಳು ಉಪಸ್ಥಿತರಿದ್ದರು.
  ಗಣೇಶೋತ್ಸ ಕಾರ್ಯಕ್ರಮಗಳು:
   ಸೆ.13ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹವನ, ಮಹಾಗಣಪತಿ ವಿಗ್ರಹ ಪ್ರತಿಷ್ಠೆ, 8.30ಕ್ಕೆ ಧ್ವಜಾರೋಹಣ ನಡೆಯಲಿದೆ. ಬಳಿಕ 9 ರಿಂದ ಶ್ರೀಬಾರತೀ ಬಾಲಗೋಕುಲ ಎಡನೀರು ತಂಡದವರಿಂದ ಭಜನೆ ನಡೆಯಲಿದೆ. 10 ಗಂಟೆಗೆ ನಡೆಯಲಿರುವ ಧಾಮರ್ಿಕ ಸಭೆಯನ್ನು ಶ್ರೀಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಆಶೀರ್ವಚನ ನೀಡುವರು. ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಮಾಸ್ತರ್ ಅಧ್ಯಕ್ಷತೆ ವಹಿಸುವರು. ಉತ್ತರ ಕೇರಳ ಮಲಯ ಸಮುದಾಯ ಸಂಘದ ರಾಜ್ಯ ಜೊತೆ ಕಾರ್ಯದಶರ್ಿ ರಾಜನ್ ಪಣಿಕ್ಕರ್ ಕಾನತ್ತೂರು ಧಾಮರ್ಿಕ ಭಾಷಣ ಮಾಡುವರು. ಶ್ರೀಎಡನೀರು ಮಠದ ಪ್ರಬಂಧಕ ನ್ಯಾಯವಾದಿ ಐ.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಕೆಮ್ಮಂಗಯ ಉಪಸ್ಥಿತರಿರುವರು.
  ವಿವಿಧ ಸ್ಪಧರ್ಾ  ಕಾರ್ಯಕ್ರಮಗಳ ಅಂಗವಾಗಿ 11 ರಿಂದ ಗಣಪತಿ ಚಿತ್ರ ರಚನಾ ಸ್ಪಧರ್ೆ, ಭಗವದ್ಗೀತಾ ಕಂಠಪಾಠ ಸ್ಪಧರ್ೆಗಳು ನಡೆಯಲಿದೆ. 12.50ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಅಪರಾಹ್ನ 2 ರಿಂದ ಸ್ಪಧರ್ೆಗಳು ಮುಂದುವರಿದು, ಸಂಜೆ 4ಕ್ಕೆ ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನದವರಿಂದ ನೃತ್ಯ ಸಿಂಚನ ಪ್ರದರ್ಶನಗೊಳ್ಳಲಿದೆ. ಸಂಜೆ 6ಕ್ಕೆ ಧ್ವಜಾವರೋಹಣ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಗಣಪತಿ ವಿಸರ್ಜಣಾ ಶೋಭಾಯಾತ್ರೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries