HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕುಂಟಾರಿನಲ್ಲಿ ಗಣೇಶೋತ್ಸವ ಸಮಾರೋಪ
    ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣೆಯು ಶುಕ್ರವಾರ ಮುಕ್ತಾಯಗೊಂಡಿತು.
   ಕಾರ್ಯಕ್ರಮದ ಅಂಗವಾಗಿ ಗುರುವಾರ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಶ್ರೀಧರ ತಂತ್ರಿಯವರಿಂದ ಗಣಪತಿಹೋಮ, ಪ್ರತಿಷ್ಠೆ ನಡೆಯಿತು. ಬ್ರಹ್ಮಶ್ರೀ ವಾಸುದೇವ ತಂತ್ರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ಭಜನಾ ಸಂಘದವರಿಂದ ಭಜನೆ, ವಿವಿಧ ಸ್ಪಧರ್ೆಗಳು ನಡೆಯಿತು. ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ.ಯಂ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಅವರಿಂದ ಧಾಮರ್ಿಕ ಭಾಷಣ, ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ ಅವರಿಗೆ ದಿ.ಮಾಟೆಡ್ಕ ಪುರುಷೋತ್ತಮ ರಾವ್ ಸ್ಮರಣಾರ್ಥ ಅಭಿನಂದನೆ, ಹತ್ತು, ಪ್ಲಸ್ಟು ಮತ್ತು ಪದವಿಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ, ಕೇರಳೋತ್ಸವದಲ್ಲಿ ರಾಜ್ಯ ಮಟ್ಟದ ಸ್ಪಧರ್ೆಗಳಲ್ಲಿ ಭಾಗವಹಿಸಿದವರಿಗೆ ಅಭಿನಂದನೆ, ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ನಡೆಯಿತು. ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘದವರ ವತಿಯಿಂದ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ ಯಕ್ಷಗಾನ ಬಯಲಾಟ ಶಕಟ ಧೇನುಕ ಭಂಜನ-ಕಾಳಿಂಗ ಮರ್ಧನ-ಶ್ರೀಹರಿ ದರ್ಶನ ನಡೆಯಿತು.
  ಗುರುವಾರ ಗನೇಶ ಕುಂಟಾರು ಇವರಿಂದ ಭಜನಾಮೃತ, ಶ್ರೀ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯು ಚೆಂಡೆ ಮೇಳ, ನಾಸಿಕ್ ಬ್ಯಾಂಡ್, ಸುಡುಮದ್ದು ಪ್ರದರ್ಶನದೊಂದಿಗೆ ಪಡಿಯತ್ತಡ್ಕ, ಅತ್ತನಾಡಿ, ಉಯಿತ್ತಡ್ಕ, ನಡುಬಯಲು, ಕುಂಟಾರು, ಗಾಳಿಮುಖ ಶಕ್ತಿನಗರ ಭಜನಾ ಮಂದಿರ ಮೂಲಕ ಸಾಗಿ ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ಕ್ಷೇತ್ರದ ಸಮೀಪ ಪಯಸ್ವಿನಿ ನದಿಯಲ್ಲಿ ವಿಗ್ರಹ ವಿಸರ್ಜನೆಯೊಂದಿಗೆ ಮುಕ್ತಾಯಗೊಂಡಿತು.
    ಧಾಮರ್ಿಕ ಸೌಹಾರ್ದತೆ:
  ಕುಂಟಾರಿನ ಗಣೇಶೋತ್ಸವವು ಸೌಹಾರ್ದತೆಗೆ ಸಾಕ್ಷಿಯಾಗಿತ್ತು. ಕಾರ್ಯಕ್ರಮಗಳಲ್ಲಿ ಮುಸ್ಲಿಂ ಬಂಧುಗಳು ಭಾಗವಹಿಸಿದುದಲ್ಲದೆ ಶೋಭಾಯಾತ್ರೆಗಳಿಗೂ ಸಹಕಾರ ನೀಡಿದರು. ಶ್ರೀ ಗಣಪತಿಗೆ ಹಣ್ಣುಕಾಯಿಯನ್ನು ಸಮಪರ್ಿಸಿದರು. ಬಿರು ಬಿಸಿಲಲ್ಲಿ ಮೆರವಣಿಗೆಯಲ್ಲಿ ಸಾಗುವ ಭಕ್ತರಿಗೆ ಕುಡಿಯಲು ಪಾನೀಯವನ್ನು ನೀಡಿ ಗಮನ ಸೆಳೆದರು.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries