HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ೆ                 ಸೆಕ್ಷನ್ 377 ಕುರಿತು ಇಂದು ಸುಪ್ರೀಂ ಕೋಟರ್್ ನಿಂದ ತೀಪರ್ು ಪ್ರಕಟ ಸಾಧ್ಯತೆ
    ನವದೆಹಲಿ: ಬಹು ನಿರೀಕ್ಷಿತ, ಭಾರತದಲ್ಲಿ ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ರ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋಟರ್್ ಇಂದು  ತೀಪರ್ು ಪ್ರಕಟಿಸುವ ಸಾಧ್ಯತೆ ಇದೆ.
   ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅಜರ್ಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂತರ್ಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ, ಕಳೆದ ಜುಲೈ 17 ರಂದು ತೀಪರ್ು ಕಾಯ್ದಿರಿಸಿದೆ.
   ಕೇಂದ್ರ ಸಕರ್ಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿದೆ. ಆದರೆ, ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ಸಕರ್ಾರ ವ್ಯಕ್ತಪಡಿಸಿತ್ತು.
   ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋಟರ್್ ಸಲಿಂಗಕಾಮವು ಅಪರಾಧವಲ್ಲ ಎಂದು ತೀಪರ್ು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋಟರ್್ ದೆಹಲ್ಲಿ ಹೈಕೋಟರ್್ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧ ವೆಂದು ಘೋಷಿಸಿತ್ತು. ನಂತರ, ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋಟರ್್ಗೆ ಐವರು ಅಜರ್ಿ ಸಲ್ಲಿಸಿದ್ದು, ಇಂದು ತೀಪರ್ು ಪ್ರಕಟವಾಗುವ ಸಾಧ್ಯತೆ ಇದೆ.
   ಏನಿದು ಸೆಕ್ಷನ್:
   ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಯಾರಾದರೂ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿದ್ದು, ಅಂಥ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಹಾಗೂ ದಂಡ ವಿಧಿಸ ಬಹುದು ಎಂದು ಈ ಸೆಕ್ಷನ್ ಹೇಳುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries