HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಭಾರತದ ಎಸ್ 400 ಡೀಲ್ ಅಮೆರಿಕದ ನಿರ್ಬಂಧಕ್ಕೆ ಆಹ್ವಾನ: ವಾಷಿಂಗ್ಟನ್
   ವಾಷಿಂಗ್ಟನ್: ಭಾರತ, ರಷ್ಯಾದಿಂದ ಎಸ್ 400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಮುಂದಾದರೆ ಅಮೆರಿಕದ ನಿರ್ಬಂಧಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ವಾಷಿಂಗ್ಟನ್ ಎಚ್ಚರಿಕೆ ನೀಡಿದೆ.
   ರಷ್ಯಾದೊಂದಿಗಿನ ಎಸ್ 400 ಡೀಲ್ ಅನ್ನು 'ಗಮನಾರ್ಹ ವಹಿವಾಟು' ಎಂದು ಪರಿಗಣಿಸಲಾಗುವುದು ಮತ್ತು ಇದಕ್ಕಾಗಿ ಅಮೆರಿಕ ಕಠಿಣವಾದ ನಿರ್ಬಂಧಗಳನ್ನು ವಿಧಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಟ್ರಂಪ್ ಆಡಳಿತ ಶುಕ್ರವಾರ ಹೇಳಿದೆ.
  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಅಮೆರಿಕ ಎದುರಾಳಿಗಳ ನಿರ್ಬಂಧ ಕಾಯ್ದೆ(ಅಂಂಖಿಖಂ)ಉಲ್ಲಂಘಿಸುವ ರಾಷ್ಟ್ರಗಳ ಮೇಲೆ ಕಠಿಣ ನಿರ್ಬಂಧ ಹೇರುವ ಕಾರ್ಯನಿವರ್ಾಹಕ ಆದೇಶಕ್ಕೆ ಸಹಿ ಹಾಕಿದ್ದು, ಒಂದು ವೇಳೆ ಭಾರತ ಎಸ್ - 400 ಡೀಲ್ ಮಾಡಿಕೊಂಡರೆ ಅಮೆರಿಕದ ನಿರ್ಬಂಧ ಎದುರಿಸುವ ಸಾಧ್ಯತೆ ಇದೆ.
   ರಷ್ಟಾ ವಿರುದ್ಧದ ಅಮೆರಿಕದ ಪ್ರಸ್ತಕ ನೀತಿಯ ಅನುಸಾರ, ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಗಳು ರಷ್ಟಾದೊಂದಿಗೆ ಒಪ್ಪಂದ ಮಾಡಿಕೊಂಡರೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ.
   ಅಮೆರಿಕದಿಂದ ನಿರ್ಬಂಧ ಹೇರಿಕೆ ಆತಂಕದ ನಡುವೆಯೇ ಭಾರತ ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400 ಖರೀದಿ ಮಾಡುವ ಸಿದ್ಧತೆಯಲ್ಲಿದೆ.
  ಇತ್ತೀಚಿಗಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಸಮಿತಿ (ಡಿಎಸಿ) ಸಭೆಯಲ್ಲಿ ಎಸ್-400 ಖರೀದಿಗೆ ಅಡ್ಡಗಾಲಾಗಿದ್ದ ಸಣ್ಣ ಮಟ್ಟದ ವ್ಯತ್ಯಾಸಗಳನ್ನು ಪರಿಹರಿಸಿಕೊಳ್ಳಲಾಗಿದೆ. ಒಟ್ಟು 39,000 ಕೋಟಿ ರು. ಮೊತ್ತದ ಈ ಖರೀದಿ ಒಪ್ಪಂದಕ್ಕೆ ಪ್ರಸ್ತುತ ಹಣಕಾಸು ಸಚಿವಾಲಯ ಬಳಿಕ ಪ್ರಧಾನಿ ಪ್ರಧಾನಿ ನೇತೃತ್ವದ ಸಂಪುಟ ಸಮಿತಿಯಿಂದ ಹಸಿರು ನಿಶಾನೆ ಬಾಕಿಯಿದೆ.
   400 ಕಿ.ಮೀ. ದೂರದಲ್ಲಿರುವ ಮತ್ತು 30 ಕಿ.ಮೀ ಎತ್ತರದಿಂದ ದಾಳಿಗೆ ಚಿಮ್ಮಿಬರುತ್ತಿರುವ ಶತ್ರುಪಡೆಯ ಬಾಂಬರ್?ಗಳು, ಯುದ್ಧವಿಮಾನ, ಕ್ಷಿಪಣಿ, ಡ್ರೋನ್, ಗೂಢಚಯರ್ು ವಸ್ತುಗಳನ್ನು ಹೊಡೆದುರುಳಿಸಬಲ್ಲ ಶಕ್ತಿ ಎಸ್- 400ಗೆ ಇದೆ. ಜತೆಗೆ ಆಧುನಿಕ ರೆಡಾರ್?ಗಳ ಸಹಾಯದಿಂದ ತನ್ನ ರಕ್ಷಣೆಯನ್ನು ಕೂಡ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries