ಬದಿಯಡ್ಕದಲ್ಲಿ 47ನೇ ವರ್ಷದ ಗಣೇಶೋತ್ಸವ
ಬದಿಯಡ್ಕ: 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.13 ಹಾಗೂ ಸೆ.14ರಂದು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನಡೆಯಲಿರುವುದು. ಸೆ.13ರಂದು ಬೆಳಗ್ಗೆ 6.30ಕ್ಕೆ ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ರಾಷ್ಟ್ರಗೀತೆ, ಸುಪ್ರಭಾತ, ಗಣಪತಿ ಹವನ ನಡೆಯಲಿದೆ. ನಂತ ವಿವಿಧ ಭಜನಾ ಸಂಘಗಳಿಂದ ಭಜನೆ, 10 ಗಂಟೆಗೆ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಧಾಮರ್ಿಕ ಸಭೆ ನಡೆಯಲಿದೆ. ಸಾಮಾಜಿಕ ಕಾರ್ಯಕರ್ತ, ಮಂಡ್ಯ ವಿವೇಕ ಶಿಕ್ಷಣ ವಾಹಿನಿ ಸ್ಥಾಪಕ ನಿತ್ಯಾನಂದ ವಿವೇಕವಂಶಿ ಧಾಮರ್ಿಕ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಅನ್ನದಾನ. ಅಪರಾಹ್ನ 2.30ರಿಂದ ಯಕ್ಷ-ಗಾನ-ವೈಭವ. ಭಾಗವತರಾಗಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ,ಪ್ರಸಾದ ಬಲಿಪ, ಗಿರೀಶ್ ರೈ ಕಕ್ಕೆಪದವು ಮತ್ತು ಹಿಮ್ಮೇಳದಲ್ಲಿ ಗಣೇಶ್ ಭಟ್ ನೆಕ್ಕರೆಮೂಲೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಕರಿಂಬಿಲ ಲಕ್ಷ್ಮಣ ಪ್ರಭು ನಿರೂಪಣೆಗೈಯಲಿದ್ದಾರೆ. ಸಂಜೆ ದೀಪಾರಾಧನೆ, ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ನಿದರ್ೇಶಕಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಬದಿಯಡ್ಕ ಶಾಖೆಯ ವಿದ್ಯಾಥರ್ಿಗಳಿಂದ ನೃತ್ಯ ಸೌರಭ, ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ.
ಸೆ.14ರಂದು 6.30ಕ್ಕೆ ಉಷಃಪೂಜೆ, ಭಜನಾ ಕಾರ್ಯಕ್ರಮ, 10 ಗಂಟೆಗೆ ಪವನ್ ನಾಯ್ಕ ಮತ್ತು ಬಳಗದವರಿಂದ ದಾಸ ಸಂಕೀರ್ತನೆ, 11 ಗಂಟೆಯಿಂದ ಗಂಗಾಧರ ಮತ್ತು ಬಳಗದವರಿಂದ ಸೆಕ್ಸೋಫೋನ್ ವಾದನ, ಮಧ್ಯಾಹ್ನ ಅನ್ನದಾನ, 2.30ರಿಂದ ಶ್ರೀ ದೇವರ ಭವ್ಯ ಶೋಭಾಯಾತ್ರೆ, ಧ್ವಜಾವರೋಹಣದೊಂದಿಗೆ ಸಂಪನ್ನವಾಗಲಿದೆ. ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಎದುರುಭಾಗದಲ್ಲಿ ಹರಿಯುವ ವರದಾ ನದಿಯಲ್ಲಿ ಶ್ರೀ ದೇವರ ವಿಗ್ರಹ ವಿಸರ್ಜನೆಯಾಗಲಿದೆ. ಶೋಭಾಯಾತ್ರೆಯಲ್ಲಿ ಸಿಂಗಾರಿಮೇಳ, ವಾದ್ಯಮೇಳ, ಮನೋರಂಜನಾ ಕಾರ್ಯಕ್ರಮ ಮತ್ತು ಸಂಚಾರಿ ಭಜನೆ ಇರುವುದು.