HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಬದಿಯಡ್ಕದಲ್ಲಿ 47ನೇ ವರ್ಷದ ಗಣೇಶೋತ್ಸವ
    ಬದಿಯಡ್ಕ : ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್  ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ರಾಷ್ಟ್ರಗೀತೆ, ಸುಪ್ರಭಾತ, ಗಣಪತಿ ಹವನ ಗುರುವಾರ ನಡೆಯಿತು. ಬಳಿಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. 
  ಸಮಾರಂಭದ ಅಂಗವಾಗಿ ನಡೆದ ಧಾಮರ್ಿಕ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ, ಮಂಡ್ಯ ವಿವೇಕ ಶಿಕ್ಷಣ ವಾಹಿನಿ ಸ್ಥಾಪಕ ನಿತ್ಯಾನಂದ ವಿವೇಕವಂಶಿ ಧಾಮರ್ಿಕ ಉಪನ್ಯಾಸ ನೀಡಿದರು. ಅವರು ಈ ಸಂದರ್ಭ ಮಾತನಾಡಿ, ಅಂತರಂಗದಲ್ಲಿ  ಕರ್ತವ್ಯ ಪ್ರಜ್ಞೆ  ಜಾಗೃತವಾದಾಗ ಮಾತ್ರ ಧರ್ಮದ ಸಂರಕ್ಷಣೆ ಸಾಧ್ಯ. ಉತ್ತಮ ಸಂಸ್ಕೃತಿಯನ್ನು ನೀಡಿ ಮುಂದಿನ ಜನಾಂಗವನ್ನು  ಮುನ್ನಡೆಸಿದಾಗ ರಾಷ್ಟ್ರದ ವೈಶಿಷ್ಟ್ಯಪೂರ್ಣ ಸಂಸ್ಕೃತಿಯನ್ನು  ಕಾಪಾಡಲು ಸಾಧ್ಯ. ವೇಗದ ಯುಗದಲ್ಲಿ  ವೈಜ್ಞಾನಿಕ ಬದುಕು ಹಾಗೂ ಫ್ಯಾಶನ್ ಸಂಸ್ಕೃತಿಗೆ ಮೊರೆ ಹೋಗುವ ನಮ್ಮ ಮಕ್ಕಳನ್ನು ಭಾರತೀಯತೆಯ, ದೇಶ ಪ್ರೇಮದ ಸಂಕೋಲೆಯಲ್ಲಿ ಬಂಧಿಸುವ ಜಾಣತನವನ್ನು  ಅನುಸರಿಸಬೇಕು. ಆದುದರಿಂದ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು  ನೀಡಿ ಭಾರತ ರತ್ನಗಳನ್ನಾಗಿ  ಮುನ್ನಡೆಸಲು ಸಾಧ್ಯ ಎಂದು ಹೇಳಿದರು.
  ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಧಾಮರ್ಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಶೆಣೈ ಉಪಸ್ಥಿತರಿದ್ದರು. ಉತ್ಸವ ಸಮಿತಿಯ ಗುರುಪ್ರಸಾದ್ ರೈ , ರಾಜೇಶ್, ನ್ಯಾಯವಾದಿ ಗಣೇಶ್ ಮುಂತಾದವರು ಉಪಸ್ಥಿತರಿದ್ದರು. ಉತ್ಸವ ಸಮಿತಿಯ ಲೆಕ್ಕ ಪರಿಶೋಧಕ ನರೇಂದ್ರ ಬಿ ಸ್ವಾಗತಿಸಿ, ಲಕ್ಷ್ಮಣ  ಪ್ರಭು ವರದಿ ಮಂಡಿಸಿ ವಂದಿಸಿದರು.
  ಮಧ್ಯಾಹ್ನ ಮಹಾಪೂಜೆ, ಅನ್ನದಾನ. ಅಪರಾಹ್ನ  ಯಕ್ಷ-ಗಾನ-ವೈಭವ ಜರಗಿತು. ಭಾಗವತರಾಗಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಪ್ರಸಾದ ಬಲಿಪ, ಗಿರೀಶ್ ರೈ ಕಕ್ಕೆಪದವು ಮತ್ತು ಹಿಮ್ಮೇಳದಲ್ಲಿ ಗಣೇಶ್ ಭಟ್ ನೆಕ್ಕರೆಮೂಲೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಸಹಕರಿಸಿದರು. ಕರಿಂಬಿಲ ಲಕ್ಷ್ಮಣ ಪ್ರಭು ನಿರೂಪಣೆಗೈದರು. ಸಂಜೆ ದೀಪಾರಾಧನೆ, ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ನಿದರ್ೇಶಕಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಬದಿಯಡ್ಕ ಶಾಖೆಯ ವಿದ್ಯಾಥರ್ಿಗಳಿಂದ ನೃತ್ಯ ಸೌರಭ ಪ್ರೇಕ್ಷಕರ ಮನ ರಂಜಿಸಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆಯಿತು.

 
     .
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries