HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಕಣಿಪುರ ಶ್ರೀಕ್ಷೇತ್ರದಲ್ಲಿ ಒಂದು ಮಂಡಲ ಭಜನಾ ಸಂಕೀರ್ತನಾ ಸೇವೆ
   ಕುಂಬಳೆ: ಇತಿಹಾಸ ಪ್ರಸಿದ್ದ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ಪುನರ್ ನವೀಕರಣ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ 48 ದಿನಗಳ ಭಜನಾ ಸಂಕೀರ್ತನೆಯನ್ನು ಆಯೋಜಿಸಲಾಗಿದೆ ಎಂದು ಕ್ಷೇತ್ರದ ಸಂಬಂಧಪಟ್ಟವರು ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಶ್ರೀಕ್ಷೇತ್ರದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ನಿದರ್ೇಶಾನುಸಾರ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಸೆ.23 ರಿಂದ ನ.9ರ ವರೆಗೆ ಒಂದು ಮಂಡಲ ಭಜನಾ ಸಂಕೀರ್ತನಾ ಸೇವೆ ಆಯೋಜಿಸಲಾಗಿದೆ. ಸೆ.23 ರಂದು ಸಂಜೆ 5ಕ್ಕೆ ಮಾಣಿಲ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಶ್ರೀಗಳಿಂದ ಆಶೀರ್ವಚನ, ಭಜನಾರಂಭ ನಡೆಯಲಿದೆ. 7.45ಕ್ಕೆ ನಾಮ ಸಂಕೀರ್ತನಾ ಪ್ರದಕ್ಷಿಣೆ ಮತ್ತು ಭಜನಾ ಮಂಗಲಾಚರಣೆ, 8ಕ್ಕೆ ಮಹಾಪೂಜೆ ನಡೆಯಲಿದೆ. ಅ. 25 ರಂದು ಸಂಜೆ 6ರಿಂದ ಐಕ್ಯಮತ್ಯಸೂಕ್ತ ಪುಷ್ಪಾಂಜಲಿ ಹಾಗೂ ಭಾಗ್ಯಸೂಕ್ತ ಪುಷ್ಪಾಂಜಲಿ ವಿಶೇಷ ಸೇವೆಗಳು ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
   ಭಜನಾ ಸಂಕೀರ್ತನಾ ಸೇವೆಯ ಸಮಾರೋಪವು ನ. 9 ರಂದು ನಡೆಯಲಿದ್ದು, ಅಂದು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವಿಶೇಷ ಭಜನಾ ಸಂಕೀರ್ತನೆಗಳು ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ನಾಮ ಸಂಕೀರ್ತನಾ ಪ್ರದಕ್ಷಿಣೆ ಹಾಗೂ ಮಂಗಲಾಚರಣೆ ನಡೆಯಲಿದೆ.6.30 ರಿಂದ ನಡೆಯುವ ಸಮಾರೋಪ ಧಾಮರ್ಿಕ ಸಭೆಯಲ್ಲಿ ಮಾಣಿಲ ಶ್ರೀಗಳು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಉಪಸ್ಥಿತರಿರುವರು.
   ಕಣಿಪುರ ಶ್ರೀಕ್ಷೇತ್ರದಲ್ಲಿ ಕಳೆದ 29 ವರ್ಷಗಳ ಹಿಂದೆ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವಗಳು ನೆರವೇರಿತ್ತು. ಬಳಿಕ ಪುನರ್ ನವೀಕರಣಗೊಳ್ಳುವಲ್ಲಿ ಅಡಚಣೆಗಳು ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮಾಣಿಲ ಶ್ರೀಗಳ ನಿದರ್ೇಶಾನುಸಾರ ವಿಶೇಷವಾಗಿ 48 ದಿನಗಳ ಭಜನಾ ಸಂಕೀರ್ತನೆಯನ್ನು ಆಯೋಜಿಸಲಾಗುತ್ತಿದೆ. ಪ್ರತಿನಿತ್ಯ ಸಂಜೆ 6 ರಿಂದ ರಾತ್ರಿ 8ರ ವರೆಗೆ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಕುಂಬಳೆ ಸೀಮೆಯಲ್ಲೇ ಒಂದು ಮಂಡಲದ ಭಜನಾ ಸಂಕೀರ್ತನೆ ಇದೆಂಬ ವಿನೂತನ ದಾಖಲೆಗೆ ಕಾರಣವಾಗಲಿದೆ.
   ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಆಡಳಿತಾಧಿಕಾರಿ ಎಂ.ಟಿ.ರಾಮನಾಥ ಶೆಟ್ಟಿ, ಕ್ಷೇತ್ರಾಡಳಿತ ಮತ್ತು ಸೇವಾ ಸಮಿತಿಯ ವಿಕ್ರಂ ಪೈ ಕುಂಬಳೆ, ಕೆ.ಸಿ.ಮೋಹನ್, ಕೆ.ಜಯಕುಮಾರ್, ವಿವೇಕಾನಂದ ಭಕ್ತ, ರಾಮಚಂದ್ರ ಗಟ್ಟಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
           
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries