ಕನ್ನಡ ಸಾಹಿತ್ಯ ಸಿರಿ 5 ಇಂದು ಬದಿಯಡ್ಕದಲ್ಲಿ
ಬದಿಯಡ್ಕ: ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಸಿರಿ ತಿಂಗಳ ಕಾರ್ಯಕ್ರಮದ ಐದನೇ ಸರಣಿ ಸೋಮವಾರ(ಇಂದು) ಅಪರಾಹ್ನ 3.30 ರಿಂದ ಬದಿಯಡ್ಕದ ನವಜೀವನ ಹೈಸ್ಕೂಲು ರಸ್ತೆಯಲ್ಲಿರುವ ಶ್ರೀರಾಮ ಯೋಗಕೇಂದ್ರದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷ ಮಹಮ್ಮದಾಲಿ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಗೋಪಾಲ ಮಾಸ್ತರ್ ಬದಿಯಡ್ಕ ಉದ್ಘಾಟಿಸುವರು. ಈ ಸಂದರ್ಭ ಹಿರಿಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ನಿವೃತ್ತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಕೃತಿ ಪರಿಚಯ ನೀಡುವರು. ಪ್ರೊ.ಎ.ಶ್ರೀನಾಥ್ ಸನ್ಮಾನಿತರ ಪರಿಚಯ ನೀಡಿ ಮಾತನಾಡುವರು. ಮುದ್ದಣನ ಶ್ರೀರಾಮಾಶ್ವಮೇಧಂ ಕೃತಿಯ ಬಗ್ಗೆ ಯಕ್ಷಗಾನ ಅರ್ಥಧಾರಿ ಬಾಲಕೃಷ್ಣ ಆಚಾರ್ಯ ವಿಶೇಷೋಪನ್ಯಾಸ ನೀಡುವರು. ಕನ್ನಡ ಜಾಗೃತಿ ಸಮಿತಿ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಉಪಸ್ಥಿತರಿದ್ದು ಶುಭಾಶಂಸನೆಗೈಯ್ಯುವರು. ಕೇಳು ಮಾಸ್ತರ್ ಅಗಲ್ಪಾಡಿ, ಕರಿಂಬಿಲ ಲಕ್ಷ್ಮಣ ಪ್ರಭು, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿರುವರು.