HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಪ್ರವಚನ-ಯಕ್ಷಗಾನ ತಾಳಮದ್ದಳೆ   
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ 29ನೇ ದಿನವಾದ ಗುರುವಾರ ವಿವಿಧ ಕಾರ್ಯಕ್ರಮಗಳು ಶ್ರೀಮಠದಲ್ಲಿ ನೆರವೇರಿದವು. ಬೆಳಿಗ್ಗೆ ವಿವಿಧ ವೈಧಿಕ ವಿಧಿವಿಧಾನಗಳು, ಭಜನೆ ನಡೆಯಿತು. ಸಂಜೆ ಶ್ರೀಗಳಿಂದ ನಾಮ ಸಂಕೀರ್ತನೆ, ಬಳಿಕ ಸಾಂಸ್ಕೃತಿಕ ಸಂಜೆಯ ಭಾಗವಾಗಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಭಾಗವತ ಸಪ್ತಾಹದ 5ನೇ ದಿನದ ವಾಚನ-ಪ್ರವಚನ ನಡೆಯಿತು.
  ಬಳಿಕ ಮಧೂರು ವೆಂಕಟಕೃಷ್ಣ ಮತ್ತು ಬಳಗದವರಿಂದ ಗರುಡ ಗರ್ವಭಂಗ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು(ಭಾಗವತರು), ಗೋಪಾಲಕೃಷ್ಣ ನಾವಡ, ವಾಸುದೇವ ಕಲ್ಲೂರಾಯ(ಚೆಮಡೆ-ಮದ್ದಳೆ)ನಾರಾಯಣ ತುಂಗ(ಶ್ರುತಿ) ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್(ಹನುಮಂತ), ವಾದೀರಾಜ ಕಲ್ಲೂರಾಯ ಕಿನ್ನಿಕಂಬಳ(ಗರುಡ), ಮುರಳೀಮಾಧವ ಮಧೂರು(ಬಲರಾಮ), ಧನಂಜಯ ಕೇಕುಣ್ಣಾಯ(ಶ್ರೀರಾಮ), ಸಂಧ್ಯಾ ಮುರಲಿ(ನಾರದ)ಪಾತ್ರಗಳನ್ನು ನಿರ್ವಹಿಸಿದರು.
  ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಸಂಜೆ ಭಾಗವತ ಸಪ್ತಾಹದ ಆರನೇ ದಿನದ ವಾಚನ-ಪ್ರವಚನ ನಡೆಯಿತು. ಬಳಿಕ ವಿದ್ವಾನ್ ಟಿ.ಜಿ. ಗೋಪಾಲಕೃಷ್ಣನ್ ಮತ್ತು ತಂಡದವರಿಂದ ಭಕ್ತಗಾನ ರಸಮಂಜರಿ ನಡೆಯಿತು.
  ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜಾ ಸೇವೆಗಳು ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಶ್ರೀಮಠದ ಕಾಯರ್ಾಲಯವನ್ನು ಸಂಪಕರ್ಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries