HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಎಡನೀರಿನಲ್ಲಿ ಗಂಧರ್ವ ಲೋಕ ಸೃಷ್ಟಿಸಿದ ತಾಳವಾದ್ಯ ಲಯಲಹರಿ
   ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾಚರಣೆಯ ಅಂಗವಾಗಿ 33ನೇ ದಿನವಾದ ಸೋಮವಾರ ಸಂಜೆ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಬೆಂಗಳೂರಿನ ಅನೂರು ಅನಂತಕೃಷ್ಣ ಶಮರ್ಾ ಮತ್ತು ತಂಡದವರಿಂದ ವೈವಿಧ್ಯಮಯ ತಾಳವಾದ್ಯ ಲಯಲಹರಿ ಕಾರ್ಯಕ್ರಮ ಪ್ರಸ್ತುತಗೊಂಡಿತು.
    ಅನೂರು ಅನಂತಕೃಷ್ಣ ಶಮರ್ಾ ರವರ ಸಮರ್ಥ ಕೊಳಲು ವಾದನದೊಂದಿಗೆ ಕಾರ್ಯಕ್ರಮದಲ್ಲಿ ವಿದ್ವಾನ್ ರಾಜಕಮಲ್(ಕೊಳಲು), ವಿದ್ವಾನ್.ಎಸ್.ಯಶಸ್ವಿ(ವಯಲಿನ್), ವಿದ್ವಾನ್.ಕಾಶೀನಾಥ್(ಖಂಜೀರ), ಎ.ಟಿ.ಶ್ರೀನಿವಾಸ(ಮೃದಂಗ), ವಿದ್ವಾನ್. ಸೋಮಶೇಖರ್(ಘಟಂ), ವಿದ್ವಾನ್ ಬಿ.ಧ್ರುವರಾಜ್, ವಿದ್ವಾನ್.ರವಿಕುಮಾರ್(ಡೋಲು), ವಿದ್ವಾನ್.ಸತ್ಯಕುಮಾರ್(ಡೋಲಕ್), ವಿದ್ವಾನ್.ಮಂಜುನಾಥ್(ಮೃದಂಗ), ವಿದ್ವಾನ್.ಜಗದೀಶ್ ಕುರ್ತಕೋಟಿ(ತಬಲಾ)ದಲ್ಲಿ ಸಹಕರಿಸಿದರು. ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದರು.
  ಅನುರಣಿಸಿದ ಮುರಳಿ ಲೋಕ:
 ಅನೂರು ವೆಂಕಟಕೃಷ್ಣ ಶಮರ್ಾರ  ಸುಶ್ರಾವ್ಯ ಮುರಳಿ ನುಡಿಸುವಿಕೆ ಗಾಂಧರ್ವ ಲೋಕದ ಸೃಷ್ಟಿಗೆ ಕಾರಣವಾಯಿತು. ಇಳಿ ಮತ್ತು ಏರು ಸ್ಥಾಯಿಯ ಮಧ್ಯೆ ನವುರಾದ ಸ್ವರಗಳ ಝೇಂಕಾರ ನಂದಗೋಕುಲ ನಿಮರ್ಿಸಿತು. ಜೊತೆಗೆ ಸಾಥ್ ನೀಡಿದ ಪಕ್ಕವಾದ್ಯಗಳ ಆವರ್ತನ ಸ್ವರ ಸಂಚಾರಗಳು ಸಂಗೀತ ಸರಸ್ವತಿಯ ನಲಿಯುವಿಕೆಯನ್ನು ಸಾಕಾರಗೊಳಿಸಿತು. ವಿದ್ವಾನ್ ಗಡಣಗಳ ಪಕ್ಕವಾದ್ಯಗಳ ತಂಡದಲ್ಲಿ ವಿವಿಧ ಸ್ವರರಮೆಯ ಮೃದಂಗಗಳು ಬೆರಗಾಗಿಸಿದವು.ಡೋಲು-ಡೋಲಕ್ ಗಳು ಪ್ರೇಕ್ಷಕರನ್ನು ಮೋಹಗೊಳಿಸಿ ಇರವನ್ನು ಮರೆಸಿತು.   
   ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಮಠದಲ್ಲಿ ವಿಶೇಷ ಸೇವೆಗಳು, ಅಘ್ರ್ಯಪ್ರಧಾನಗಳು ನೆರವೇರಿದವು. ಸಂಜೆ ಉರ್ವ ನಾಟ್ಯಾರಾಧನಾ ಕಲಾಕೇಂದ್ರದ ವಿದುಷಿಃ ಸುಮಂಗಲಾ ರತ್ನಾಕರ ರಾವ್ ಮತ್ತು ಶಿಷ್ಯವೃಂದದವರಿಂದ ನೃತ್ಯ ವೈಭವ ಪ್ರಸ್ತುತಗೊಂಡಿತು. 
   ಮಂಗಳವಾರ ಪ್ರಸಿದ್ದ ಅರ್ಥಧಾರಿಗಳ ಕೂಡುವಿಕೆಯೊಂದಿಗೆ ವೀರಮಣಿ ಕಾಳಗದ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು. ಬುಧವಾರ(ಇಂದು) ಪ್ರಸಿದ್ದ ಕಲಾವಿದರಾದ ಪಟ್ಲ ಸತೀಶ ಶೆಟ್ಟಿ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶಿವಾನಂದ ಕೋಟ, ಸುನಿಲ್ ಭಂಡಾರಿ, ಕೃಷ್ಣಪ್ರಕಾಶ ಉಳಿತ್ತಾಯ, ಲವಕುಮಾರ ಐಲ ಅವರ ಹಿಮ್ಮೇಳನದೊಂದಿಗೆ ಗಾನ ವೈಭವ ಪ್ರಸ್ತುಗೊಳ್ಳಲಿದೆ.




    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries