ಪ್ರೇಕ್ಷಕರ ಮನಗೆದ್ದ ಸಂಗೀತ ಕಚೇರಿ ಹಾಗೂ ನೃತ್ಯಾಭಿಷೇಕಂ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾಚರಣೆಯ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ವೇದಿಕೆಯಲ್ಲಿ ಸೋಮವಾರ ಸಂಜೆ ಪ್ರಥಮ ಭಾಗದಲ್ಲಿ ಮಧೂರು ಸೋದರಿಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಮಧೂರು ಸೋದರಿಯರೆಂದೇ ಪ್ರಸಿದ್ದರಾದ ಎಂ.ಎಸ್. ಕಾಮಾಕ್ಷಿ ಸುಬ್ರಾಯ ಹಾಗೂ ಎಂ.ಎಸ್. ಸುಶೀಲಾ ಅನಂತರಾಮನ್ ಸುಶ್ರಾವ್ಯವಾಗಿ ಹಾಡುಗಾರಿಕೆ ನಡೆಸಿದರು. ಹಿಮ್ಮೇಳದಲ್ಲಿ ಮಧೂರು ಬಾಲಸುಬ್ರಹ್ಮಣ್ಯ ಸರಳಾಯ(ವಯೋಲಿನ್), ಪುಂಡೂರು ಪುರುಷೋತ್ತಮ ಪುಣಿಚಿತ್ತಾಯ(ಮೃದಂಗ)ದಲ್ಲಿ ಸಹಕರಿಸಿದರು.
ದ್ವಿತೀಯ ಭಾಗದಲ್ಲಿ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಪುತ್ರಿ ಸಾತ್ವಿಕಾಕೃಷ್ಣ ರಿಂದ ನೃತ್ಯಾಭಿಷೇಕಂ ವಿಶೇಷ ಭರತನಾಟ್ಯ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಉಣ್ಣಿಕೃಷ್ಣನ್ ಕುತ್ತಿಕೋಲ್ ಹಾಗೂ ಉಣ್ಣಿಕೃಷ್ಣನ್ ವೀಣಾಲಯ(ಹಾಡುಗಾರಿಕೆ), ಕಣ್ಣನ್ ಕಾಂಞಿಂಗಾಡ್(ಮೃದಂಗ), ಜಯಪ್ರಕಾಶ್ ಕಣ್ಣೂರು(ಕೊಳಲು), ತಂಬಾನ್ ಮಾಣಿಯಾಟ್(ತಬಲಾ), ರಾಜೇಶ್ ಕಾಸರಗೋಡು(ರಿದಂಪ್ಯಾಡ್)ನಲ್ಲಿ ಸಹಕರಿಸಿದರು. ನೃತ್ಯ ನಿದರ್ೇಶಕ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ನಟುವಾಂಗದಲ್ಲಿ ನೃತ್ಯ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ನಾಟ್ಯನಿಲಯಂನ ಪುಟಾಣಿಗಳಿಂದ ರಂಗಪ್ರವೇಶ ನಡೆಯಿತು. ಜೊತೆಗೆ ಬಾಲಪ್ರತಿಭೆ ಪೂವರ್ಿ ಕಿರಣ್ ಮಂಜೇಶ್ವರ ವಿಶೇಷ ಭರತನಾಟ್ಯ ಪ್ರದರ್ಶನ ನೀಡಿದರು.
ಮಂಗಳವಾರ ಪುತ್ತೂರು ಬೊಳುವಾರಿನ ಶ್ರೀಆಂಜನೇಯ ಮಹಿಳಾ ಯಕ್ಷಗಾನ ತಂಡದವರಿಂದ ಭಾಸ್ಕರ ಭಾರ್ಯ ಪುತ್ತೂರು ಅವರ ನಿದರ್ೇಶನದಲ್ಲಿ ಭೀಷ್ಮಾಜರ್ುನ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.
ಬುಧವಾರ ಉಡುಪಿಯ ಕು.ಗಾಗರ್ಿ ಶಬರಾಯ ಮತ್ತು ಬಳಗದವರಿಂದ ಸಂಗೀತ ಕಚೇರಿ ನಡೆಯಲಿದೆ.