ಪ್ರೇಕ್ಷಕರ ಮನಗೆದ್ದ ಬಡಗು ಯಕ್ಷಗಾನ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ದಿನನಿತ್ಯ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶನಿವಾರ ಸಂಜೆ ಬಡಗು ತಿಟ್ಟು ಯಕ್ಷಗಾನ ಬಯಲಾಟ ಅಂಬಾ ಶಪಥ ವಿಶಿಷ್ಟವಾಗಿ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಶಿವಾನಂದ ಕೋಟ, ಸುನಿಲ್ ಭಂಡಾರಿ ಕಡತೋಕ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ(ಭೀಷ್ಮ), ಅಗರ್ೋಡು ಮೋಹನದಾಸ ಶೆಣೈ(ಪರಶುರಾಮ) ವಿಶ್ವನಾಥ ಆಚಾರಿ(ಸಾಲ್ವ), ಡಾ.ಪ್ರದೀಪ ಸಾಮಗ(ಅಂಬೆ) ಕು.ಆದಿತ್ಯ(ಪ್ರತಾಪಸೇನ), ಕು.ಅಭಿಷೇಕ(ಕಾಶಿರಾಜ), ಮೂರೂರು ನಾಗೇಂದ್ರ ಭಟ್(ಹಾಸ್ಯ) ಕಿರಣ್ ಕುದ್ರೆಕ್ಕೋಡ್ಳು(ಅಂಬಿಕೆ), ಗುರುತೇಜ ಒಡಿಯೂರು(ಅಂಬಾಲಿಕೆ) ಪಾತ್ರಗಳಲ್ಲಿ ಭಾಗವಹಿಸಿದರು. ಡಾ.ಪ್ರದೀಪ ಸಾಮಗ ಅವರ ಮನೋಜ್ಞ ಅಭಿನಯದ ಅಂಬೆಯ ಪಾತ್ರ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ವ್ಯಾಪಕ ಪ್ರಶಂಸೆಗೆ ಕಾರಣವಾಯಿತು.
ಭಾನುವಾರ ಸಂಜೆ ವೆಳ್ಳಿನ್ನೇರಿ ಸುಬ್ರಹ್ಮಣ್ಯಂ ಮತ್ತು ಭರದ್ವಾಜ್ ಸುಬ್ರಹ್ಮಣ್ಯ ಅವರಿಂದ ಸಂಗೀತ ಕಚೇರಿ ನಡೆಯಿತು. ಸೋಮವಾರ ಮಾಗಧ ವಧೆ, ಸುಂದೋಪಸುಂದ ಪ್ರಸಂಗಗಳ ಯಕ್ಷಗಾನ ಬಯಲಾಟ ನಡೆಯಲಿದೆ.