ರಂಜಿಸಿದ ಮಾಗಧ ವಧೆ-ನರಕಾಸುರ ವಧೆ ಬಯಲಾಟ
ಬದಿಯಡ್ಕ: ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀಮಠದಲ್ಲಿ ಪ್ರತಿನಿತ್ಯ ಸಂಜೆ ನಡೆಯುತ್ತಿರುವ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಸೋಮವಾರ ನಡೆದ ಯಕ್ಷಗಾನ ಬಯಲಾಟ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು.
ಮಾಗಧ ವಧೆ ಹಾಗೂ ನರಕಾಸುರ ವಧೆ ಪ್ರಸಂಗದ ಯಕ್ಷಗಾನ ಪ್ರಸಂಗದ ಮೊದಲ ಆಖ್ಯಾಯಿಕೆಯಲ್ಲಿ ಪ್ರದರ್ಶನಗೊಂಡ ಮಾಗಧ ವಧೆ ಕಥಾನಕದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ, ಪ್ರಸಿದ್ದ ತಾಳಮದ್ದಳೆ ಅರ್ಥಧಾರಿ ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ ಅವರ ಮಾಗಧನ ಪಾತ್ರ ಗಮನ ಸೆಳೆಯಿತು. ಬಡಗು ತಿಟ್ಟಿನಲ್ಲಿ ಹವ್ಯಾಸಿ ವೇಶಧಾರಿಯಾಗಿ ಅನುಭವಿಗಳಾದ ವಿದ್ವಾನ್ ಅವರು ತೆಂಕುತಿಟ್ಟಿನಲ್ಲಿ ಕೆಲವು ವೇಶಗಳನ್ನಷ್ಟೆ ಮಾಡಿರುವವರು. ಮಾಗಧನ ನಾಟ್ಯಾಭಿವ್ಯಕ್ತಿಯ ನಿರ್ವಹಣೆಯಲ್ಲಿ ಸಪ್ಪೆಯೆನಿಸಿದರೂ ಕೆಲವು ಹೆಜ್ಜೆಗಳ ಮೂಲಕ ಗಮನ ಸೆಳೆದರು.
ಮಿಕ್ಕುಳಿದಂತೆ ಎಂ.ಎಲ್.ಸಾಮಗ(ಕೃಷ್ಣ)ಸಚಿನ್(ಭೀಮ), ಗಣೇಶ ಪಾಲೆಚ್ಚಾರ್(ಅಜರ್ುನ), ಸುಣ್ಣಂಬಳ ವಿಶ್ವೇಶ್ವರ ಭಟ್(ವೇಷ ಮರೆಸಿದ ಬ್ರಾಹ್ಮಣ ಕೃಷ್ಣ), ಶ್ರೀಕೃಷ್ಣ ದೇವಕಾನ(ವೇಶ ಮರೆಸಿದ ಬ್ರಾಹ್ಮಣ ಭೀಮ), ಗುರುತೇಜ ಒಡಿಯೂರು(ವೇಶ ಮರೆಸಿದ ಬ್ರಾಹ್ಮಣ ಅಜರ್ುನ) ಪಾತ್ರಗಳ ಮೂಲಕ ಗಮನ ಸೆಳೆದರು. ಹಿಮ್ಮೇಳದಲ್ಲಿ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳು ಹಾಗೂ ರಮೇಶ್ ಭಟ್ ಪುತ್ತೂರು(ಭಾಗವತಿಕೆ) ಲಕ್ಷ್ಮೀಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ ಐಲ(ಚೆಂಡೆ-ಮದ್ದಳೆ) ಯಲ್ಲಿ ಪ್ರಸಂಗ ಮುನ್ನಡೆಸಿದರು.
ಎರಡನೇ ಆಖ್ಯಾಯಿಕೆಯಲ್ಲಿ ನರಕಾಸುರ ವಧೆ ಪ್ರಸಂಗ ಪ್ರದಶರ್ಿಸಲ್ಪಟ್ಟಿತು. ಸುಣ್ಣಂಬಳ ವಿಶ್ವೇಶ್ವರ ಭಟ್, ಮಾಧವ ನೀಚರ್ಾಲು(ನರಕಾಸುರ), ದಿವಾಣ ಶಿವಶಂಕರ ಭಟ್(ದೇವೇಂದ್ರ), ಲಕ್ಷ್ಮಣಕುಮಾರ್ ಮರಕಡ(ಕೃಷ್ಣ), ಗಣೇಶ್ ಮೂಡುಶೆಡ್ಡೆ(ಸತ್ಯಭಾಮೆ), ಗೋಪಾಲ ಭಟ್ ಗುಂಡಿಮಜಲು(ಮುರಾಸುರ), ಶೇಖರ ಜಯನಗರ, ಶ್ರೀಕೃಷ್ಣ ದೇವಕಾನ, ಪ್ರಣವ, ಕಿಶನ್, ದತ್ತೇಶ(ದೇವ-ರಾಕ್ಷಸ ಬಲಗಳು), ಗಣೇಶ್ ಪಾಲೆಚ್ಚಾರ್(ದೂತ) ಪಾತ್ರಗಳಲ್ಲಿ ಸಹಕರಿಸಿದರು. ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ(ಭಾಗವತರು)ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಲವಕುಮಾರ ಐಲ ಸಹಕರಿಸಿದರು.
ಭಾನುವಾರ ವೆಳ್ಳಿನ್ನೇರಿ ಸುಬ್ರಹ್ಮಣ್ಯ ಮತ್ತು ಭರದ್ವಾಜ್ ಸುಬ್ರಹ್ಮಣ್ಯ ಅವರಿಂದ ಸಂಗೀತ ಕಚೇರಿ ನಡೆಯಿತು. ಗಣರಾಜ ಕಾಲರ್ೆ(ವಯಲಿನ್), ನಿಶ್ವಿತ್ ಪುತ್ತೂರು(ಮೃದಂಗ), ಟ್ರಿಚ್ಚಿ ಕೆ.ಆರ್.ಕುಮಾರ್ (ಘಟಂ)ನಲ್ಲಿ ಸಹಕರಿಸಿದರು.
ಮಂಗಳವಾರ ಸಂಜೆ ಎಡನೀರು ಶ್ರೀಗಳಿಂದ ಭಜನ್ ಸಂಧ್ಯಾ ಪ್ರಸ್ತುತಗೊಂಡಿತು. ಬುಧವಾರ ವಾಲಿವಧೆ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಎಡನೀರು ಶ್ರೀಗಳ ಭಾಗವತಿಕೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ ಉಳಿತ್ತಾಯ ಭಾಗವಹಿಸುವರು. ಡಾ.ರಮಾನಂದ ಬನಾರಿ, ಅಂಬಾತನಯ ಮುದ್ರಾಡಿ, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆಮರ್ುದೆ, ರಾಜೇಂದ್ರ ಕಲ್ಲೂರಾಯ ಎಡನೀರು ಅರ್ಥಧಾರಿಗಳಾಗಿ ಪಾಲ್ಗೊಳ್ಳುವರು.