"ಸಹಜವಹುದೆಲೆ" ವಿರಳಾತಿವಿರಳ ಚೌತಾಳದ ಚಮತ್ಕಾರದಿಂದ ವಿಸ್ಮಿತಗೊಳಿಸಿದ ಗಾನ ವೈಭವ
ಕಿಕ್ಕಿರಿದ ಕಲಾಭಿಮಾನಿಗಳ ಮನಸೂರೆಗೊಂಡ ಚಾತುಮರ್ಾಸ್ಯ ಸಾಂಸ್ಕೃತಿಕ ಸಂಜೆ
ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಬುಧವಾರ ಸಂಜೆ ಶ್ರೀಮಠದಲ್ಲಿ ನಡೆದ ಯಕ್ಷಗಾನ ಗಾನ ವೈಭವ ಹೊಸ ಮೈಲುಗಲ್ಲುಗಳಿಗೆ ಸಾಕ್ಷಿಯಾಗುವುದರೊಂದಿಗೆ ಕಿಕ್ಕಿರಿದ ಕಲಾಭಿಮಾನಿ ಶೋತೃಗಳ ಮನಸೂರೆಗೊಂಡಿತು.
ಗಾನ ವೈಭವದಲ್ಲಿ ಭಾಗವತರಾಗಿ ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ, ತೆಂಕು-ಬಡಗಿನ ಸವ್ಯಸಾಚಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ ಹಾಗೂ ಯುವ ಭಾಗವತೆ ಕಾವ್ಯಶ್ರೀ ಅಜೇರು ಪಾಲ್ಗೊಂಡರು. ಇವರಲ್ಲಿ ಸತ್ಯನಾರಾಯಣ ಪುಣಿಚಿತ್ತಾಯರು ಬಡಗು ತಿಟ್ಟಿನ ಭಾಗವತಿಕೆ ಮುನ್ನಡೆಸಿದರು. ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ಲವಕುಮಾರ ಐಲ, ಸುನಿಲ್ ಭಂಡಾರಿ(ಬಡಗು ಮೃದಂಗ) ಹಾಗೂ ಶಿವಾನಂದ ಕೋಟ(ಬಡಗು ಚೆಂಡೆ) ಭಾಗವಹಿಸಿದರು. ಲವಕುಮಾರ್ ಐಲ ಅವರು ಮದ್ದಳೆಯ ಜೊತೆಗೆ ತಬಲಾವನ್ನು ನುಡಿಸುವ ಮೂಲಕ ಗಮನ ಸೆಳೆದರು.
ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಗಾನವೈಭವದಲ್ಲಿ ಶೃಂಗಾರ, ಭಕ್ತಿ, ಹಾಸ್ಯ ರಸಗಳ ಹಾಡುಗಳು, ಸೌಮ್ಯ ಪ್ರಧಾನ ಹಾಡುಗಳು, ಏರು ಪದ್ಯಗಳು, ವಿರಳಾತಿವಿರಳವಾದ ಚೌತಾಳದ ಪದ್ಯ, ಚೌಜಂಪೆ, ಗಮಕ ಕ್ರಮಗಳ ಹಾಡುಗಳನ್ನು ಭಾಗವತರುಗಳು ಪ್ರಸ್ತುತಪಡಿಸಿದರು. ರತ್ನಾವತಿ ಕಲ್ಯಾಣ ಪ್ರಸಂಗದ ಹಾಡುಗಳನ್ನು ಸತ್ಯನಾರಾಯಣ ಪುಣಿಚಿತ್ತಾಯರು ಹಾಡುವ ಮೂಲಕ ಪ್ರೇಕ್ಷಕರ ಮನಗೆದ್ದರು. ಶೃಂಗಾರ ರಸದಲ್ಲಿ ಆಡಿದೆನೇ ನಾನು(ಕಾವ್ಯಶ್ರೀ ಅಜೇರು), ಮುನಿದು ಕುಳಿತಿಹ ವನಿತೆ(ಪಟ್ಲ ಸತೀಶ ಶೆಟ್ಟಿ) ಹಾಗೂ ಪುಣಿಚಿತ್ತಾಯರು ಮಧುರಾ ಮಹೇಂದ್ರ ಪ್ರಸಂಗದ ಹಾಡುಗಳನ್ನು ಹಾಡಿದರು. ತೆಂಕುತಿಟ್ಟಿನಲ್ಲಿ ಇಂದು ವಿರಳವಾಗುತ್ತಿರುವ ಚೌತಾಳದ ಹಾಡುಗಳಲ್ಲೊಂದಾದ ಕುಮಾರ ವಿಜಯ ಪ್ರಸಂಗದಿಂದಾಯ್ತ "ಸಹಜವಹುದೆಲೆ" ಹಾಡನ್ನು ಈ ಸಂದರ್ಭ ಪಟ್ಲ ಸತೀಶ್ ಶೆಟ್ಟಿ ಪ್ರಸ್ತುತಪಡಿಸಿದರು.ಬಿಡ್ತಿಗೆ ಸಹಿತವಾಗಿ ಚೌತಾಳಕ್ಕೆ ಬಳಿಕ ಬಿಡಿತದ ನಂತರ ತಿತ್ತಿತ್ತೈ ಮತ್ತು ಮುಕ್ತಾಯವಾಗಿ ದಾಖಲಾತಿಯ ಗಮನ ಸೆಳೆಯಿತು. ಈ ಬಗ್ಗೆ ನಿರೂಪಕರಾಗಿ ಸಹಕರಿಸಿದ ಕೃಷ್ಣಪ್ರಕಾಶ ಉಳಿತ್ತಾಯ ಅವರು ಈ ತಾಳದ ಬಗ್ಗೆ ವಿವರಿಸಿ ಪ್ರಸ್ತುತ ಗುರು ಗೋಪಾಲಕೃಷ್ಣ ಕುರುಪ್,ಗಣೇಶ್ ಕೊಲೆಕಾಡಿ ಹಾಗೂ ಪುರುಷೋತ್ತಮ ಪೂಂಜರು ಈ ತಾಳದ ಬಿಡಿತವನ್ನೂ ನಿರೂಪಿಸಿದ್ದಾರೆ ಎಂದು ಮಹತ್ತರ ದಾಖಲಾತಿ ನೀಡಿದರು.
ಮೂವರು ಭಾಗವತರುಗಳೂ ಹಿಂದೋಳ-ಮಾಲ್ಕೌನ್ಸ್ ರಾಗದಲ್ಲಿ ಗದಾಯುದ್ದದ ಕಪಟ ನಾಟಕ ರಂಗ ಹಾಡನ್ನು ಪ್ರೇಕ್ಷಕರ ಕರತಾಡವದೊಂದಿಗೆ ಪ್ರಸ್ತುತಪಡಿಸಿದ್ದು ವಿಶೇಷವಾಗಿ ದಾಖಲಾಯಿತು. ಉಳಿದಂತೆ ಚೂಡಾಮಣಿ ಪ್ರಸಂಗದ ಮಂಗಳ ಮಹಿಮ ರಾಮನ ಪದದೆಡೆಯಿಂದ ಬಂದೆನಮ್ಮ (ಸೌಮ್ಯರಾಗ), ಪ್ರೇಕ್ಷಕರ ಅಪೇಕ್ಷೆಯ ಮೇರೆಗೆ ಭಕ್ತಿರಸ ಪ್ರಧಾನವಾದ "ನೋಡಿದನು ಕಲಿ ರಕ್ತಬೀಜನು" ಹಾಡುಗಳನ್ನು ಭಾಗವತರುಗಳು ಪ್ರಸ್ತುತಪಡಿಸಿದರು. ವಿಶೇಷವೆಂಬಂತೆ ರಾಷ್ಟ್ರಗೀತೆ ವಂದೇ ಮಾತರಂ ನ್ನು ಜೊತೆಯಾಗಿ ಹಾಡುವ ಮೂಲಕ ಗಮನ ಸೆಳೆದ ಭಾಗವತಿಕೆಯೊಂದಿಗೆ ಮೂರು ಗಂಟೆಗಳ ಗಾನ ವೈಭವ ಮುಕ್ತಾಯಗೊಂಡಿತು. ಮೃದಂಗ ಮಾಂತ್ರಿಕ ಕೃಷ್ಣಪ್ರಕಾಶ ಉಳಿತ್ತಾಯರು ವಿಭಿನ್ನ ಶೈಲಿಯ ನಿರೂಪಣೆಯ ಮೂಲಕ ಗಾನ ವೈಭವ ನಿರ್ವಹಿಸಿದರು.
ದಿಗ್ಗಜರು ಪ್ರೇಕ್ಷಕರಾದರು:
ವಿಶೇಷವಾಗಿ ಆಯೋಜಿಸಲಾಗಿದ್ದ ಗಾನ ವೈಭವದಲ್ಲಿ ಹಿರಿಯ ಭಾಗವತರುಗಳಾದ ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಹಿಮ್ಮೇಳ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಪ್ರೇಕ್ಷಕರಾಗಿ ಪಾಲ್ಗೊಂಡಿರುವುದು ವಿಶೆಷವಾಗಿತ್ತು. ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದರು.
ಗುರುವಾರ ಸಂಜೆ ಚಂದ್ರಹಾಸ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಶುಕ್ರವಾರ ಎಡನೀರು ಶ್ರೀಗಳಿಂದ ದೇವರ ನಾಮಗಳ ಭಜನ್ ಸಂಧ್ಯಾ ನಡೆಯಲಿದೆ. ವಯಲಿನ್ ನಲ್ಲಿ ವಿಠಲ ರಾಮಮೂತರ್ಿ ಚೆನ್ನೈ, ಮೃದಂಗದಲ್ಲಿ ಮುಷ್ಣಂ ರಾಜಾ ರಾವ್ ಚೆನ್ನೈ, ಘಟಂನಲ್ಲಿ ತ್ರಿಪುಣಿತ್ತರ ರಾಧಾಕೃಷ್ಣನ್ ಭಾಗವಹಿಸುವರು.