HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಾಮ ನಾಯ್ಕರಿಗೆ ನೆರವು ನೀಡುವಿರಾ?
    ಬದಿಯಡ್ಕ: ನೀಚರ್ಾಲು ಸಮೀಪದ ಬೇಳ ಗ್ರಾಮದ ಪುದುಕೋಳಿ ರಾಮನಾಯ್ಕ (60) ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಯ ವೆಚ್ಚಕ್ಕಾಗಿ ಪರದಾಡುವಂತಾಗಿದೆ.
ಕೇವಲ 10 ಸೆಂಟ್ಸ್ ಸ್ಥಳ ಹೊಂದಿರುವ ರಾಮನಾಯ್ಕ ಹಾಗೂ ಅವರ ಪತ್ನಿ ಸೀತಾ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇಬ್ಬರ ದಿನನಿತ್ಯದ ಆದಾಯದಲ್ಲಿ ದೈನಂದಿನ ಜೀವನ ಸಾಗುತ್ತಿತ್ತು. ಆಗಾಗ ಅಸೌಖ್ಯ ಕಾಣಿಸುತ್ತಿದ್ದುದನ್ನು ವೈದ್ಯರಲ್ಲಿ ಪರೀಕ್ಷಿಸಿ ಔಷಧಿಯನ್ನು ಪಡೆದುಕೊಂಡು ಬರುತ್ತಿದ್ದ ಅವರು ಕಳೆದ ಒಂದು ವರ್ಷದ ಹಿಂದೆ ಕಿಡ್ನಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂಲಿ ಕೆಲಸ ಮಾಡಲು ಇದೀಗ ಅವರಿಗೆ ಅಸಾಧ್ಯವಾಗಿದೆ. ಸಂತಾನ ಭಾಗ್ಯ ವಂಚಿತರಾದ ಸೀತಾಳಿಗೂ ಇವರೊಬ್ಬರನ್ನೇ ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
ಗ್ರಾಮ ಪಂಚಾಯತ್ ಭವನ ನಿಮರ್ಾಣ ಯೋಜನೆಯಲ್ಲಿ ಲಭಿಸಿದ 3,50,000 ರೂಪಾಯಿಯಲ್ಲಿ ಮನೆ ನಿಮರ್ಾಣ ಕಾಮಗಾರಿ ಆರಂಭವಾಗಿ ಅರ್ಧದಲ್ಲಿದೆ. ಮನೆಯ ಮಾಡಿನ ಕೆಲಸವಾಗಿದ್ದರೂ ಸಾರಣೆ, ಬಾಗಿಲುಗಳ ಕೆಲಸಗಳಿಗಾಗಿ ಸಮೀಪದ ಸಹಕಾರಿ ಬ್ಯಾಂಕ್ನಿಂದ 1,50,000 ರೂಪಾಯಿ ಸಾಲವನ್ನೂ ಪಡೆದಿರುತ್ತಾರೆ. ಆ ಹಣವೆಲ್ಲಾ ಔಷಧಿಗಾಗಿ ಖಚರ್ಾಗಿದ್ದು, ಮುಂದೆ ಏನು? ಹೇಗೆ? ಎಂಬ ಚಿಂತೆ ಗಂಡ ಹೆಂಡಿರದ್ದಾಗಿದೆ. ಒಂದೆಡೆ ಔಷಧಿಯ ಖಚರ್ಿನ ಚಿಂತೆ, ಇನ್ನೊಂದೆಡೆ ಮನೆಯ ಅಂತಿಮ ಕೆಲಸಕಾರ್ಯಗಳ ಚಿಂತೆ, ಮತ್ತೊಂದೆಡೆ ಬ್ಯಾಂಕ್ನಿಂದ ಪಡೆದ ಸಾಲದ ಚಿಂತೆ ಈ ಕುಟುಂಬವನ್ನು ಕಾಡುತ್ತಿದೆ. ಈಗಾಗಲೇ ತಿಂಗಳಿನ ಔಷಧೀಯ ವೆಚ್ಚವಾಗಿ 5000-8000 ರೂಪಾಯಿ ತನಕ ಖಚರ್ಾಗುತ್ತಿದೆ ಎಂದು ರಾಮನಾಯ್ಕರು ಹೇಳುತ್ತಿದ್ದಾರೆ. ಈಗಾಗಲೇ ಸ್ಥಳೀಯ ತತ್ವಮಸಿ ಕ್ಲಬ್ ಹಾಗೂ ಊರ ಮಹನೀಯರು ಸಹಾಯಹಸ್ತವನ್ನು ಚಾಚಿದ್ದಾರೆ. ಉನ್ನತ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಹಣದ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ನೀಚರ್ಾಲು ಕೇಂದ್ರವಾಗಿ ಕಾರ್ಯವೆಸಗುತ್ತಿರುವ ನಿವೇದಿತಾ ಸೇವಾ ಮಿಶನ್ನ ಕಾರ್ಯಕರ್ತರನ್ನು ಕುಟುಂಬವು ಸಂಪಕರ್ಿಸಿದಾಗ ಅವರ ಸಂಕಷ್ಟವನ್ನರಿತು ಸಹಾಯಹಸ್ತವನ್ನು ನೀಡುವ ಭರವಸೆಯನ್ನು ನೀಡಿದರು. ನಿವೇದಿತಾ ಸೇವಾಮಿಶನ್ನ ವತಿಯಿಂದ ಧನಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಕುಟುಂಬದ ಸಂಕಷ್ಟಕ್ಕೆ ನೆರವಾಗಲು ಉದಾರ ದಾನಿಗಳು ಮುಂದೆ ಬರಬೇಕಿರುವುದು ಅನಿವಾರ್ಯವಾಗಿದೆ. ಆಥರ್ಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿರುವ ಕುಟುಂಬಕ್ಕೆ ಧನಸಹಾಯವನ್ನು ನೀಡಲು ಮುಂದೆ ಬರುವ ದಾನಿಗಳು  `ನಿವೇದಿತಾ ಸೇವಾ ಮಿಷನ್' ಕನರ್ಾಟಕ ಬ್ಯಾಂಕ್ ಖಾತೆ ಸಂಖ್ಯೆ 5322500101475301, ಐಎಫ್ಎಸ್ಸಿ ಕೋಡ್ : ಕೆಎಆರ್ಬಿ0000532ಕ್ಕೆ ವಗರ್ಾಯಿಸಬೇಕಾಗಿ ಸಂಬಂಧಪಟ್ಟವರು ವಿನಂತಿಸಿಕೊಂಡಿದ್ದಾರೆ.
    ನೆರವಿಗೆ ಆಗ್ರಹ:
 ಜನತೆ ಎದುರಿಸುತ್ತಿರುವ ಕಷ್ಟಗಳಿಗೆ ತುತರ್ು ಸಹಾಯಕ್ಕಾಗಿ ನಿವೇದಿತಾ ಸೇವಾ ಮಿಷನ್ ಎಂಬ ಸಂಘಟನೆಯ ಮೂಲಕ ಪ್ರಯತ್ನಿಸುತ್ತಿದ್ದೇವೆ. ಆದುದರಿಂದ ಆಥರ್ಿಕವಾಗಿ ಸಂಕಷ್ಟವನ್ನನುಭವಿಸುತ್ತಿರುವ ಈ ಕುಟುಂಬಕ್ಕೆ ನೆರವಾಗಲು ನಿವೇದಿತಾ ಸೇವಾಮಿಷನ್ ಹಮ್ಮಿಕೊಂಡ ಧನಸಂಗ್ರಹಕ್ಕೆ ಉದಾರ ದಾನಿಗಳು ಧನಸಹಾಯವನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
- ಶ್ರೀಕೃಷ್ಣ ಭಟ್ ಪುದುಕೋಳಿ, ಕೋಶಾಧಿಕಾರಿ, ಮೊ: 9400685034
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries