HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕಾಸರಗೋಡು ಚಿನ್ನಾ - 60
           ಬೆಂಗಳೂರಿನಲ್ಲಿ ಅದ್ದೂರಿ ಸಮಾರಂಭ ಚಿನ್ನ-ಚಿತ್ತಾರ 
   ಕಾಸರಗೊಡು: ಗಡಿನಾಡಿನ ಪ್ರತಿ`ೆ, ಕೇರಳ ಹಾಗೂ ಕನರ್ಾಟಕ ರಾಜ್ಯದ ಸಾಂಸ್ಕೃತಿಕ ಕೊಂಡಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ ಅರುವತ್ತು ತುಂಬಿದ ಸಂದರ್ಭದಲ್ಲಿ ಬೆಂಗಳೂರಿನ ಭಾಗವತರು(ರಿ) ಹಾಗೂ ಚಿನ್ನಾ ಗೆಳೆಯರು ನೇತೃತ್ವದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲಾಯಿತು.
    `ಚಿನ್ನ ಚಿತ್ತಾರ' ಕಾರ್ಯಕ್ರಮದಲ್ಲಿ ಏರ್ಪಡಿಸಿದ ಕಾಸರಗೋಡು ಚಿನ್ನಾ ಅವರ ಕುರಿತಾದ ವಿಚಾರಗೋಷ್ಠಿಯನ್ನು ಖ್ಯಾತ ರಂಗಕಮರ್ಿ ಕೆ.ವಿ.ನಾಗರಾಜಮೂತರ್ಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಏಕ ಕಾಲಕ್ಕೆ ಕನರ್ಾಟಕ ಹಾಗೂ ಕೇರಳ ಎರಡೂ ರಾಜ್ಯಗಳಲ್ಲಿ ಅಕಾಡೆಮಿ ಸದಸ್ಯನಾಗಿ ದುಡಿದ ಚಿನ್ನಾ ಅವರು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಗೆ ಎಂದೂ ಬಜೆಟ್ಟಿನ ಪರಿಮಿತಿ ಹಾಕಿಕೊಂಡವರಲ್ಲ. ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸುವುದರಲ್ಲಿ ಎತ್ತಿದ ಕೈ ಎಂದರು.
   `ಚಿನ್ನಾ ಮತ್ತು ಸಂಘಟನೆ' ಕುರಿತಂತೆ ಖ್ಯಾತ ರಂಗಕಮರ್ಿ, ಚಲನಚಿತ್ರ ನಟ ಮಂಡ್ಯ ರಮೇಶ್ ಮಾತನಾಡಿ ಇಡೀ ರಂಗಭೂಮಿಗೆ ಈಗ ಬೇಕಿರುವುದು ನಟ, ನಿದರ್ೇಶಕರಲ್ಲ. ಬದಲಾಗಿ ಅಚ್ಚುಕಟ್ಟಾಗಿ ಆಯೋಜಿಸುವ ಸಂಘಟಕರು. ಏಕೆಂದರೆ ಇಂದು ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. ಸೃಜನಶೀಲ ನಿದರ್ೇಶಕರಿದ್ದಾರೆ. ಆದರೆ ಚಪ್ಪಾಳೆ ತಟ್ಟಿದರೆ ಜನ ಸೇರಿಸಬಲ್ಲ ಸಂಘಟಕರಿಲ್ಲ. ಅದರಲ್ಲಿ ಚಿನ್ನಾ ಸಿದ್ಧಹಸ್ತರು. ಉಡುಪಿಯ ನಾಟಕ ಸ್ಪಧರ್ೆಯಲ್ಲಿ ಪ್ರಶಸ್ತಿ ಪಡೆದ ನನಗೆ ಅವರು ನೀಡಿದ `ದ್ರವ್ಯ ಕಾಣಿಕೆ' ನಾನೆಂದೂ ಮರೆಯುವುದಿಲ್ಲ ಎಂದರು.
    ಚಿನ್ನಾ ಮತ್ತು ಸಾಹಿತ್ಯ : ಚಿನ್ನಾ ಅವರು ರಂಗಭೂಮಿಯಷ್ಟೇ ಸಾಹಿತ್ಯ ಕೃಷಿಯಲ್ಲೂ ನಿಸ್ಸೀಮರು. ಅವರ ಅನುವಾದಿತ ಕಥೆಗಳು ಅವರ ಭಾಷಾ ಕೌಶಲ್ಯವನ್ನು ಪ್ರತಿಪಾದಿಸುತ್ತವೆ. `ತೀಸ್ ಕಾಣಿಯೋ' ಕೃತಿಯ ಮೂಲಕ ಕನ್ನಡದ ಶ್ರೇಷ್ಠ ಕತೆಗಳನ್ನು ಕೊಂಕಣಿ ಭಾಷೆಗೆ ಅನುವಾದಿಸಿ ಅಕಾಡೆಮಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಚಿನ್ನಾ ಅವರದ್ದು ಎಂದು ಖ್ಯಾತ ಸಾಹಿತಿ ಶಾ.ಮಂ.ಕೃಷ್ಣರಾಯರು ಹೇಳಿದರು.
    ಚಿನ್ನಾ - ರಂಗಭೂಮಿ : ನನ್ನ ಕಾಲೇಜು ದಿನದಿಂದ ಚಿನ್ನಾರ ಕೌಶಲ್ಯ ನೋಡಿಕೊಂಡು ಬಂದಿದ್ದೇನೆ. ಅವರ ಒಂದೊಂದು ಪ್ರಯೋಗಗಳೂ ವಿಶಿಷ್ಟ. ಅವರು ನಟಿಸಿದ್ದಾರೆ, ನಿದರ್ೇಶಿಸಿದ್ದಾರೆ, ಬರೆದಿದ್ದಾರೆ, ಸಂಘಟಿಸಿದ್ದಾರೆ. ಅವರಿಗೆ ಭಾಷಾ ಬೇಧವಿಲ್ಲ. ಮಾತೃ ಭಾಷೆ ಕೊಂಕಣಿಯಾದರೂ ಕನ್ನಡದ ಬಗ್ಗೆ ಅವರಿಗಿರುವ ವ್ಯಾಮೋಹ ಅತೀತವಾದುದು. ಲಾರಿ ನಾಟಕ, ಗೀತ ಸಂಗೀತ ರಥ, ಯಕ್ಷತೇರು, `ರಂಗ ಸಂಸ್ಕೃತಿ' ರಂಗಗೀತೆಗಳು ಎಲ್ಲದರಲ್ಲೂ ಚಿನ್ನಾ ಭಿನ್ನವಾಗಿ ಗುರುತಿಸಲ್ಪಡುತ್ತಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ನಾ.ದಾಮೋದರ ಶೆಟ್ಟಿ ಹೇಳಿದರು.
   ಚಿನ್ನಾ - ಸಿನೇಮಾ : ಚಿನ್ನಾ ಅವರು ನಾನು ಚಿತ್ರೋದ್ಯಮಕ್ಕೆ ಬರುವ ಮೊದಲು ದೊಡ್ಡನಟರಾಗಿದ್ದವರು. ಅವರ ಆಸ್ಪೋಟ, ಫಣಿಯಮ್ಮ, ರಾವಣರಾಜ್ಯ ಚಿತ್ರ ನೋಡಿದ್ದೆ. ಅವರು `ಉಜ್ವಾಡು' ಕೊಂಕಣಿ ಚಿತ್ರ ನಿದರ್ೇಶಿಸುವಾಗ ನನಗೆ ಸಂಗೀತ ನಿದರ್ೇಶನಕ್ಕೆ ಅವಕಾಶ ನೀಡಿದ್ದರು. ಅವರ ಸಂಗೀತ ಜ್ಞಾನ ಅಪಾರ. ಅದರಲ್ಲಿ ಬರುವ ಕೀರ್ತನೆಗಾರನಾಗಿ ಅಭಿನಯಿಸುವ ಅವಕಾಶವೂ ಲಭಿಸಿತ್ತು. ಇಂದಿಗೂ ಕೊಂಕಣಿ ಭಾಷಿಗರ ಮನೆಯಲ್ಲಿ ಆ ಹಾಡು ಮೊಳಗುತ್ತವೆ. ಅದರ ಸಾರ್ಥಕ್ಯ ಚಿನ್ನಾ ಅವರದ್ದು. ತುಳು ಭಾಷೆಯ `ಬಂಗಾರ ಪಟ್ಲೇರ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ಚಿನ್ನಾ ಅವರು ಎಲ್ಲ ಚಿತ್ರಗಳಲ್ಲೂ ಭಿನ್ನ ಪಾತ್ರಗಳಿಗೆ ಜೀವ ತುಂಬಿ ಮಿಂಚಿದ್ದಾರೆ. ದೂರದರ್ಶನದಲ್ಲಿ ನಿರೂಪಕನಾಗಿಯೂ ನಟಿಸಿದ್ದಾರೆ.
   ಅಭಿನಂದನಾ ಸಮಾರಂಭ : ಸಂಜೆ ನಡೆದ ಅದ್ದೂರಿ ಸಮ್ಮಾನ ಸಮಾರಂಭವನ್ನು ಖ್ಯಾತ ಸಾಹಿತಿ ಡಾ.ಡಿ.ಕೆ.ಚೌಟ ಅವರು ಉದ್ಘಾಟಿಸಿದರು. ಚಿನ್ನಾ ಅವರ ಎಲ್ಲಾ ಹುಚ್ಚಾಟಗಳಿಗೆ ಸಾಕ್ಷಿ ನಾನು. ಏಕೆಂದರೆ ಅವನೆಲ್ಲಾ ಅಭಿಯಾನಗಳು ಪ್ರಾರಂಭಗೊಳ್ಳುವುದು ನನ್ನೂರಿದಿಂದ. `ಲಾರಿ ನಾಟಕ' ಕ್ಕೆ ಚಾಗಟೆ ಬಾರಿಸಿ ಚಾಲನೆಯನ್ನು ನಾನು ನೀಡಿದ್ದೆ. ಆದರೆ ಎಂದೂ ನನ್ನ ಬಳಿ ಆಥರ್ಿಕ ಸಹಾಯಕ್ಕಾಗಿ ಕೈ ಒಡ್ಡಿದವರಲ್ಲ. ಮಹಾನ್ ಸ್ವಾಭಿಮಾನಿ ಎಂದರು.
  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನರ್ಾಟಕ ಸರಕಾರದ ಮಾಜಿ ಸಂಸ್ಕೃತಿ ಸಚಿವೆ ಉಮಾಶ್ರೀ ಚಿನ್ನಾ ನಾನು ಕಂಡಂತೆ ಅತ್ಯಂತ ಅಂತ:ಕರಣದ ಸ್ನೇಹಿತ. ಹಿಡಿದ ಕೆಲಸವನ್ನು ಚಾಚು ತಪ್ಪದೆ ನಿರ್ವಹಿಸುವ ಛಲಗಾರ. ಸಿನೇಮಾ-ನಾಟಕ-ಕಮ್ಮಟ-ನಟನೆ ಚಿನ್ನಾ ಮಾಡಿದ್ದೆಲ್ಲಲೂ ವಿಶಿಷ್ಟವೇ.! ಅವರು ಕಾಸರಗೋಡು ತೊರೆದು ಬೆಂಗಳೂರಿನಲ್ಲಿರುತ್ತಿದ್ದನೆ ಅದರ ಕತೆಯೇ ಬೇರೆ ಇರುತ್ತಿತ್ತು. ಆದರೆ ಅವರು ಕಾಸರಗೋಡಿನಲ್ಲಿದ್ದುದರಿಂದ ಕನ್ನಡದ ಕೆಲಸ ಅಚ್ಚುಕಟ್ಟಾಗಿ ಆಗುತ್ತಿದೆ. ಚಿನ್ನಾ ನನ್ನ ಪ್ರೀತಿಯ ಗೆಳೆಯ. ಅವರಿಗೆ ಅರುವತ್ತರ ಅಭಿನಂದನೆ ಎಂದರು.
  ಶುಭಾಶಂಸನೆಗೈದ ಇನ್ನೊಬ್ಬ ಹಿರಿಯ ಚಲನಚಿತ್ರ ನಟ ರಾಮಕೃಷ್ಣ ಅವರು ಮಾತನಾಡಿ ಚಿನ್ನಾ ಅವರ ಜೊತೆ ನಾನು ಯೌವನದ ದಿನಗಳಲ್ಲಿ ನಟಿಸಿದೆ. ಪ್ರಾಯ ಪ್ರಾಯ ಚಿತ್ರದ ಕಾಲೇಜು ದೃಶ್ಯಗಳಲ್ಲಿ ಚಿನ್ನಾನ ಸುತ್ತ ಜನ ಸೇರೋದು. ಅದರೊಳಗಿನಿಂದ ನಗುವಿನ ಅಲೆ. ನನಗೆ ವಿಲಕ್ಷಣ ಕ್ಷಣ ವ್ಯಕ್ತಿಯ ಸ್ನೇಹ ಮಾಡಬೇಕೆನ್ನಿಸಿದೇ ಆಗ. ಇಂಥ ನಟ ಇನ್ನೊಬ್ಬರಿಲ್ಲ ಎಂದರು.
   ಕಾಸರಗೋಡು ಚಿನ್ನಾ ಜೊತೆ ಆಸ್ಪೋಟದಲ್ಲಿ ಅಭಿನಯಿಸಿದ್ದೆ. ಅವು ಮರೆಯಲಾಗದ ದಿನಗಳು. ಅಂದು ಪ್ರಾರಂಭಗೊಂಡ ನಮ್ಮ ಬಾಂಧವ್ಯ ಇಂದಿಗೂ ಮುಂದುವರಿದಿದೆ. ಅಂಥ ಸ್ನೇಹ ಜೀವಿ ಚಿನ್ನಾ. ಅವರು ಕೇರಳದಲ್ಲಿ ಅಕಾಡೆಮಿ ಸದಸ್ಯರಾಗಿದ್ದ ಕಾಲದಲ್ಲಿ ನನಗೆ ಕೇರಳದಲ್ಲಿ ಭರತನಾಟ್ಯವನ್ನು ಪ್ರದಶರ್ಿಸಲು ಅವಕಾಶ ಮಾಡಿಕೊಟ್ಟರು. ಅಂದರೆ ಕನ್ನಡ ನಟರ ಬಗ್ಗೆ ಅಂಥಹ ವ್ಯಾಮೋಹ- `ಆಸ್ಪೋಟ'ದಲ್ಲಿ ನಾನು ನಾಯಕ ನಟನಾದರೂ ನಿಜವಾದ ನಾಯಕ ಚಿನ್ನಾ ಎಂದು ಖ್ಯಾತ ಚಲನಚಿತ್ರ ನಟ, ಭರತನಾಟ್ಯ ಕಲಾವಿದ ಶ್ರೀಧರ್ ಹೇಳಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರಿನ ಖ್ಯಾತ ಅಂಕಣಕಾರ, ಪತ್ರಕರ್ತ ರವೀಂದ್ರ ಜೋಷಿ ಚಿನ್ನಾ ಅವರ ಬಹುಮುಖ ವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿ ಕನರ್ಾಟಕದ ರಾಜಧಾನಿಯಲ್ಲಿ ಅವರನ್ನು ಗೌರವಿಸುವ ಮುಖಾಂತರ ನಮಗೆ ನಾವೇ ಸಮ್ಮಾನಿಸಿಕೊಳ್ಳುತ್ತಿದ್ದೇವೆ ಎಂದರು.
   ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಣ್ಣ ಅವರು `ದುಡ್ಡು ದೊಡ್ಡದ್ದಲ್ಲ, ದುಡಿಮೆ ದೊಡ್ಡದು. ಜೀವ ದೊಡ್ಡದ್ದಲ್ಲ ಜೀವ ದೊಡ್ಡದು'. ಅದಕ್ಕೆ ತಕ್ಕಂತೆ ಚಿನ್ನಾ ಜೀವನ ಮಾಡಿದ್ದಾರೆ ಎಂದರು.
   ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಕಾಸರಗೋಡು ಚಿನ್ನಾ ಅವರು ತನ್ನ ಮೂಲ ಹೆಸರನ್ನೇ ಮರೆತು ಈಗ ನಿಜಾರ್ಥದಲ್ಲಿ ಚಿನ್ನಾ ಆಗಿದ್ದಾರೆ. `ಚಿನ್ನ' ಎಂಬ ಲೋಹಕ್ಕೆ ಬೇರು ಲೋಹಗಳನ್ನು ಸಹಿಸಿಕೊಳ್ಳುವ ಶಕ್ತಿ ಇದೆ. ಹಾಗೇನೇ ನಮ್ಮ ಚಿನ್ನಾ ಅವರಿಗೆ ಬೇರೆಯವರ ವಿಚಾರಗಳನ್ನು ಸಹಿಸಿಕೊಳ್ಳುವ ಮಾತ್ರವಲ್ಲ ಅವರಲ್ಲಿ ಸಹಿಷ್ಣುತೆಯ ಗುಣವಿದೆ. ಅವರ ಪ್ರತಿ`ೆಯನ್ನು ಕನರ್ಾಟಕ ಸರಕಾರ ಗುರುತಿಸಬೇಕಾಗಿದೆ ಎಂದರು.
ಕಾಸರಗೋಡು ಚಿನ್ನಾ ಹಾಗೂ ಅವರ `ರ್ಮಪತ್ನಿ ಅನಿತಾ ಅವರಿಗೆ ಸಮಸ್ತ ಬೆಂಗಳೂರಿನ ಕಲಾವಿದರ ಪರವಾಗಿ `ರಂಗ ಗೌರವ' ವನ್ನು ನೀಡಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಚಿನ್ನಾ ಸಾರ್ಥಕ ಜೀವನ ನಡೆಸಿಕೊಂಡು ಬಂದಿದ್ದೇನೆ. ಸಮ್ಮಾನದ ಹಿಂದೆ ಓಡಿ ಹೋಗಿಲ್ಲ. ನಾನು ಸಂಘ ಜೀವಿ. ಹಾಗೇ ಭಾವಜೀವಿ ಕೂಡಾ. ಆದರೆ `ಬುದ್ಧಿ ಜೀವಿ' ಅಲ್ಲ ಎಂದು ಮಾಮರ್ಿಕವಾಗಿ ಹೇಳಿದರು. ಕಾವೇರಿಗಾಗಿ `್ವನಿ ಎತ್ತುವ ಕನರ್ಾಟಕದ ಜನ ಕಾಸರಗೋಡಿಗಾಗಿ `್ವನಿ ಎತ್ತಿದರೆ ಅಲ್ಲಿನ ಕನ್ನಡಿಗರಲ್ಲಿ `ಾಷಾ ಅಲ್ಪಸಂಖ್ಯಾಕರು ಎಂಬ ಅನಾಥ ಪ್ರಜ್ಞೆ  ದೂರವಾಗಲಿದೆ ಎಂದರು.
    ಕಾರ್ಯಕ್ರಮದ ಪ್ರಾರಂಭದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ಸೀಮಾ ರಾಯ್ಕರ್ ಹಾಗೂ ಬಿ.ಪಿ.ಗೋಪಾಲಕೃಷ್ಣ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಭಾಗವತರು ಸಂಸ್ಥೆಯ ರೂವಾರಿ ರೇವಣ್ಣ ಸ್ವಾಗತಿಸಿ, ಶಿವಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ರಂಗಭೂಮಿ, ಸಾಹಿತ್ಯ, ಚಲನಚಿತ್ರ ಕ್ಷೇತ್ರದ ಹಲವಾರು ಜನರು ಭಾಗವಹಿಸಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries