HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಐಲದಲ್ಲಿ ಕೂಟ ಮಹಾಜಗತ್ತು 65ನೇ ವಾಷರ್ಿಕ ಮಹಾಸಭೆ ಸೆ.30 ರಂದು
      ಮಂಜೇಶ್ವರ: ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಕೇಂದ್ರಿಯ ಮಹಾಧಿವೇಶನ ಮತ್ತು 65 ನೇ ವಾಷರ್ಿಕ ಮಹಾಸಭೆ ಕೂಟ ಮಹಾಜಗತ್ತು ಸಾಲಿಗ್ರಾಮ ಮಂಗಲ್ಪಾಡಿ ಅಂಗಸಂಸ್ಥೆಯ ಅತಿಥ್ಯದೊಂದಿಗೆ ಸೆ. 30 ರಂದು ಭಾನುವಾರ ಐಲದ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಶ್ರೀ ದುಗರ್ಾಪರಮೇಶ್ವರೀ ಕಲಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಣಗವಾಗಿ ಬೆಳಿಗ್ಗೆ 6ಕ್ಕೆ ಗಣಪತಿ ಹವನ ಹಾಗೂ ನರಸಿಂಹ ಹವನ, 8ಕ್ಕೆ ನೊಂದಾವಣೆ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಮಂಗಳೂರು ಕನರ್ಾಟಕ ಬ್ಯಾಂಕ್ ನ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಮ್ ಎಸ್ ಉದ್ಘಾಟಿಸಲಿರುವರು. ಕೂಟ ಮಹಾಜಗತ್ತು ಕೇಂದ್ರ ಸಾಲಿಗ್ರಾಮ ಸಂಸ್ಥೆಯ ಅಧ್ಯಕ್ಷ ಪಿ. ವೆಂಕಟರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಲಿರುವರು. ಕನರ್ಾಟಕ ಲೋಕ ಸೇವಾ ಆಯೋಗದ  ಅಧ್ಯಕ್ಷ ಟಿ ಶ್ಯಾಮ್ ಭಟ್ ಮುಖ್ಯ ಅತಿಥಿಗಳಾಗಿರವರು. ಶ್ರೀ ಗುರುಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ ಅನಂತ ಪದ್ಮನಾಭ ಐತಾಳ ಗುರು ಸಂದೇಶ ನೀಡಲಿರುವರು. ಡಾ. ಬಿ. ಎಸ್ ಕಾಸರಗೋಡು, ಬೆಂಗಳೂರು ವಾಹನ ಮಾಲಕರ ಸಂಘದ ಅಧ್ಯಕ್ಷ  ಎಲ್. ಕೆ ರಾಧಕೃಷ್ಣ ಹೊಳ್ಳ ಬೆಂಗಳೂರು ಅತಿಥಿಗಳಾಗಿರುವರು. ಈ ವೇಳೆ ಶ್ರೀ ವೇದಮೂತರ್ಿ ಸುಬ್ರಹ್ಮಣ್ಯ ಭಟ್ ಮಾವಿನ ಕುಡಿಗೆಯವರಿಗೆ ಗೌರವ ಸನ್ಮಾನ ನಡೆಯಲಿದೆ ಹಾಗೂ ಕೂಟ ಯುವ ಬಳಗ ನಿನಾದ ಕ್ರಿಯೇಷನ್ಸ್ ಅಪರ್ಿಸುವ ಬಂಡೆಕಲ್ಲು ಎಂಬ ಕಿರು ಚಿತ್ರವನ್ನು ಮಾಜಿ ಧರ್ಮದಶರ್ಿ, ಕೈಗಾರಿಕೋದ್ಯಮಿ ಕೆ. ಯಜ್ಞ ನಾರಾಯಣ ಹೇರಳ ಕಮ್ಮಾಜೆ ಬಿಡುಗಡೆಗೊಳಿಸುವರು. ಮಂಗಲ್ಪಾಡಿ  ಅಂಗ ಸಂಸ್ಥೆಯ ಸದಸ್ಯರಿಗೆ ಶ್ರೀ ಗುರುನರಸಿಂಹ ದೇವಸ್ಥಾನದ ಅಡಳಿತ ಮಂಡಳಿ ಉಪಾಧ್ಯಕ್ಷ ರಘನಾಥ ಸೋಮಯಾಜಿಯವರು ಬಿಲಿಯನ್ ಪೌಂಡೇಶನ್ ಸಹಾಯಧನ ಹಸ್ತಾಂತರಿಸಲಿರುವರು. ಈ ವೇಳೆ ಗತ ವರ್ಷದಲ್ಲಿ ಅಗಲಿದ ಸಮಾಜ ಭಾಂದವರಿಗೆ ಶ್ರಧ್ದಾಂಜಲಿ ಕಾರ್ಯಕ್ರಮ ನಡೆಯಲಿದೆ.
  ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಮಾಜಿ ಧರ್ಮದಶರ್ಿ ಡಾ. ಕೆ ಪ್ರಭಾಕರ ಹೊಳ್ಳ ಉಪ್ಪಳ ಕಾಸರಗೋಡು ಜಿಲ್ಲಾ ಉಪಜಿಲ್ಲಾಧಿಕಾರಿ ಜಯಲಕ್ಮ್ಮಿ ನಾವಡ ಕಾಸರಗೋಡು, ಸಾಲಿಗ್ರಾಮ  ಶ್ರೀ ಗುರುನರಸಿಂಹ ದೇವಸ್ಥಾನದ  ಧರ್ಮದಶರ್ಿ ಎಮ್.ಕೆ. ಅಶೋಕ್ ಕುಮಾರ್ ಹೊಳ್ಳ ಕುಬಣೂರು, ಬ್ರಹ್ಮ ಶ್ರೀ ವೇದಮೂತರ್ಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು, ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಕೆ. ಶ್ರೀಧರ ಮಯ್ಯ. ಪಿ, ಶೇಷಗಿರಿ ರಾವ್, ಪ್ರಧಾನ ಕಾರ್ಯದಶರ್ಿ ಜಿ. ರಾಮಕéೃಷ್ಣ ಐತಾಳ, ಕೋಶಾಧಿಕಾರಿ ಪಿ. ಮಂಜುನಾಥ ಉಪಾಧ್ಯ, ಜೊತೆ ಕಾರ್ಯದಶರ್ಿಗಳಾದ ಎ. ರಮೇಶ ಮಯ್ಯ, ಕೆ. ಸುಬ್ರಹ್ಮಣ್ಯ ಕಾರಂತ, ಕೇಂದ್ರ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ.ಕೆ. ಎಸ್ ಕಾರಂತ, ಶ್ರೀ ಗುರು ನರಸಿಂಹ ಒಲಿಯಾಸ್ ಪೌಂಡೇಶನ್ ಅಧ್ಯಕ್ಷ ಎಚ್ ಪರಮೇಶ್ವರ ಬಾಸ್ರಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕಾರ್ಯದಶರ್ಿ ಜಿ ಮಂಜುನಾಥ ಮಯ್ಯ ಬೆಂಗಳೂರು, ಕೋಶಾಧಿಕಾರಿ ಎ. ಪ್ರಸನ್ನ ತುಂಗ, ಧರ್ಮದಶರ್ಿ ವೈ ಸದಾರಾಮ ಹೇಳರ್ೆ, ವೇದಮೂತರ್ಿ ಚಂದ್ರಶೇಖರ ಉಪಾಧ್ಯಾಯ, ಬಿಜೂರು ಬಲರಾಮ ಮಯ್ಯ ಮೈಸೂರು, ಸುಬ್ರಹ್ಮಣ್ಯ ಹೇಳರ್ೆ ಕೇಂದ್ರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ಎಮ್. ಎಸ್  ಗಿರಿಧರ ರಾವ್ ಗೌರವ ಉಪಸ್ಥತರಿವರು.
  ನಮ್ಮ ಬ್ರಾಹ್ಮಣ್ಯ ಎಂಬ ವಿಷಯದಲ್ಲಿ ವೇದಮೂತರ್ಿ ಎಮ್ ಅಶೋಕ ನಾವಡ ಮುಳಿಂಜ ಇವರಿಂದ ಧಾಮರ್ಿಕ ಪ್ರವಚನ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಾಜ  ಭಾಂದವರ ಗುರುತಿಸುವಿಕೆ ನಡೆಯಲಿದ್ದು,ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.
    ಅಪರಾಹ್ನ 2.ರಿಂದ ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ 65 ನೇ ವಾಷರ್ಿಕ ಮಹಾಸಭೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries