HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಚಚರ್ೆಗೆ ತೆರೆ=ಆಲಪ್ಪುಳದಲ್ಲಿ ಕೇರಳ ರಾಜ್ಯ ಶಾಲಾ ಕಲೋತ್ಸವ 
    ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವವನ್ನು  ಡಿಸೆಂಬರ್ 7ರಿಂದ 9ರ ವರೆಗೆ ನಡೆಸಲು ನಿರ್ಧರಿಸಲಾಗಿದೆ. ಪೂರ್ವನಿಗದಿಯಂತೆ ಆಲಪ್ಪುಳದಲ್ಲಿ  ಕಲೋತ್ಸವವು ಜರಗಲಿದೆ. ಮಹಾಪ್ರವಾಹದ ಹಿನ್ನೆಲೆಯಲ್ಲಿ  ಕಲೋತ್ಸವವನ್ನು  ಮೂರು ದಿನಗಳಿಗೆ ಸೀಮಿತಗೊಳಿಸಿ ನಡೆಸಲು ತೀಮರ್ಾನಿಸಲಾಗಿದೆ.
   ಶಾಲಾ ಕಲೋತ್ಸವದಲ್ಲಿ  ಸಮಗ್ರ ಪಟ್ಟ  ಲಭಿಸುವ ಜಿಲ್ಲೆಗೆ ಈ ವರ್ಷ ಚಿನ್ನದ ಕಪ್ ದೊರಕದು. ವಿದ್ಯಾಥರ್ಿಗಳಿಗೆ ಸಟರ್ಿಫಿಕೇಟ್ ಮತ್ತು  ಗ್ರೇಸ್ ಮಾಕರ್್ ಮಾತ್ರವೇ ಲಭಿಸಲಿದೆ. ರಾಜ್ಯ ಮಟ್ಟದ ಕಲೋತ್ಸವದಲ್ಲಿ  ವೇದಿಕೆ ಸ್ಪಧರ್ೆಗಳು ಮಾತ್ರವೇ ನಡೆಯಲಿವೆ. ವೇದಿಕೆಯೇತರ ಸ್ಪಧರ್ೆಗಳು ಜಿಲ್ಲಾ  ಮಟ್ಟಗಳಲ್ಲಿ  ಒಂದು ದಿನ ನಡೆಸಿ ಅದರಲ್ಲಿ  ಪ್ರಥಮ ಸ್ಥಾನ ಪಡೆಯುವ ಸ್ಪಧರ್ಾಳುಗಳನ್ನು  ರಾಜ್ಯ ಮಟ್ಟದಲ್ಲಿ  ಪರಿಶೀಲಿಸಿ ಅದರಲ್ಲಿ  ಆಯ್ದ  ರಚನೆಗಳಿಗೆ ರಾಜ್ಯ ಮಟ್ಟದಲ್ಲಿ  ಗ್ರೇಡ್ ನೀಡಲಾಗುವುದು.
   ಶಾಲಾ ಮಟ್ಟದ ಕಲೋತ್ಸವವನ್ನು  ಅಕ್ಟೋಬರ್ 1ರಿಂದ 13ರ ಮಧ್ಯೆ ಮತ್ತು ಶಿಕ್ಷಣ ಉಪಜಿಲ್ಲಾ  ಮಟ್ಟದ ಶಾಲಾ ಕಲೋತ್ಸವವನ್ನು  ಅಕ್ಟೋಬರ್ 20ರಿಂದ ನವೆಂಬರ್ 3ರ ಮಧ್ಯೆ ಹಾಗೂ ಜಿಲ್ಲಾ ಮಟ್ಟದ ಕಲೋತ್ಸವವನ್ನು  ನವೆಂಬರ್ 12ರಿಂದ 24ರ ಮಧ್ಯೆ ಪೂತರ್ಿಗೊಳಿಸಲು ನಿರ್ಧರಿಸಲಾಗಿದೆ. ಶಿಕ್ಷಣ ಉಪಜಿಲ್ಲಾ  ಮಟ್ಟದ ಕಲೋತ್ಸವವನ್ನು  ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.
   ಎಲ್ಪಿ ಮತ್ತು  ಯುಪಿ ಶಾಲಾ ಮಟ್ಟಗಳ ಕಲೋತ್ಸವ ವ್ಯವಸ್ಥೆಯನ್ನು  ಕೊನೆಗೊಳಿಸಲಾಗುವುದು. ಕಲೋತ್ಸವದ ಉದ್ಘಾಟನಾ ಶೋಭಾಯಾತ್ರೆಯನ್ನು  ರದ್ದುಪಡಿಸಲಾಗುವುದು. ಕಲೋತ್ಸವದಲ್ಲಿ  ಗ್ರೇಡ್ ಪಡೆಯುವ ವಿದ್ಯಾಥರ್ಿಗಳಿಗೆ ಗ್ರೇಡ್ ಒಳಗೊಂಡ ಸಟರ್ಿಫಿಕೇಟ್ ಮಾತ್ರವೇ ನೀಡಲಾಗುವುದು. ಪ್ರವಾಹ ದುರಂತದ ಹಿನ್ನೆಲೆಯಲ್ಲಿ  ನಗದು ಬಹುಮಾನ ಮತ್ತು  ಟ್ರೋಫಿಯನ್ನು  ಈ ವರ್ಷ ನೀಡಲಾಗುವುದಿಲ್ಲ. 
ಸ್ಪೆಷಲ್ ಸ್ಕೂಲ್ ರಾಜ್ಯ ಕಲೋತ್ಸವವು ಅಕ್ಟೋಬರ್ 26ರಿಂದ 28ರ ತನಕ ಕೊಲ್ಲಂನಲ್ಲಿ  ಹಾಗೂ ರಾಜ್ಯ ಮಟ್ಟದ ವಿಜ್ಞಾನೋತ್ಸವವನ್ನು  ನವೆಂಬರ್ 24 ಮತ್ತು  25ರಂದು ಕಣ್ಣೂರಿನಲ್ಲಿ  ನಡೆಸಲು ತೀಮರ್ಾನಿಸಲಾಗಿದೆ. ಅದೇ ರೀತಿ ರಾಜ್ಯ ಮಟ್ಟದ ಕ್ರೀಡಾ ಸ್ಪಧರ್ೆಗಳು ಅಕ್ಟೋಬರ್ 26ರಿಂದ 28ರ ವರೆಗೆ ತಿರುವನಂತಪುರದಲ್ಲಿ  ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries