ಮತ್ತೆ ನಡುಗಿದ ಇಂಡೋನೇಷ್ಯಾ: 7.5ರ ತೀವ್ರತೆಯ ಭಾರೀ ಭೂಕಂಪ
ಜಕಾತರ್ಾ: ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಇಂದು 7.5ರ ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ.
ಡೊಂಗಲದ ಸೆಂಟ್ರಲ್ ಸುಲಾವೆಸಿ ಪಟ್ಟಣದ ಈಶಾನ್ಯಕ್ಕೆ ಸುಮಾರು 56 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಸ್ಥಾನವಿತ್ತು ಎಂದು ಅಮೆರಿಕದ ಭೌಗೋಳಿಕ ಸವರ್ೇ ಇಲಾಖೆ ತಿಳಿಸಿದೆ. ಭೂಕಂಪದ ತೀವ್ರತೆಗೆ ಹಲವಾರು ಮನೆಗಳು ಕುಸಿದಿವೆ ಎಂದು ಸ್ಥಳೀಯ ವಿಕೋಪ ಪರಿಹಾರ ಏಜೆನ್ಸಿ ಆಕ್ರಿಸ್ನ ಅಧಿಕಾರಿಯೊಬ್ಬರು ತಿಳಿಸಿದರು.
ಶುಕ್ರವಾರ ಇದೇ ಪ್ರದೇಶದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು, ಮೊದಲ ಭೂಕಂಪದಿಂದ 9 ಹಳ್ಳಿಗಳು ಹಾನಿಗೀಡಾಗಿವೆ. ಮೊದಲ ಕಂಪನ 6.1ರ ತೀವ್ರತೆ ಹೊಂದಿತ್ತು.
ಇಂಡೋನೇಷ್ಯಾ ಭೂಗರ್ಭದ ಅಡಿಯಲ್ಲಿ ಹಲವಾರು ಜ್ವಾಲಾಮುಖಿಗಳು ಮತ್ತು ಬಿರುಕುಗಳು ಇರುವುದರಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ.