HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಭಾಗವತ ಪ್ರವಚನ-ಪಂಚಭೂತಗಳ ಅನುಸರಣೆಯಿಂದ ಸಂರಕ್ಷಣೆ-ವಿದ್ವಾನ್.ಹಿರಣ್ಯ
   ಬದಿಯಡ್ಕ: ಸನಾತನ ಆಚರಣೆ ಇರುವಲ್ಲೆಲ್ಲ ಶಂಖದ ಬಳಕೆ ಸರ್ವಮಾನ್ಯವಾಗಿದೆ. ಆದರೆ ಅದನ್ನು ಎಲ್ಲೆಲ್ಲಿ ಹೇಗೆ ಬಳಸಬೇಕು ಎಂಬ ಬಗ್ಗೆ ಸಾಕಷ್ಟು ವಿವರಣೆಗಳು ಗ್ರಂಥಗಳಲ್ಲಿ ಉಲ್ಲೇಖವಿದ್ದು, ಸಭೆ-ವೈದಿಕವಲ್ಲದ ಸಮಾರಂಭಗಳಲ್ಲಿ ಬಳಸುವಂತಿಲ್ಲ ಎಂದು ಹಿರಿಯ ಪ್ರವಚನಕಾರ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ತಿಳಿಸಿದರು.
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಭಾಗವಾಗಿ ಶ್ರೀಮಠದಲ್ಲಿ ಆಯೋಜಿಸಿರುವ ಶ್ರೀಮದ್ ಭಾಗವತ ಪ್ರವಚನದ 6ನೇ ದಿನವಾದ ಶುಕ್ರವಾರ ನಡೆದ ಪ್ರವಚನದಲ್ಲಿ ಶ್ರೀಕೃಷ್ಣನ ಜನನ ವೃತ್ತಾಂತದ ಸನ್ನಿವೇಶವನ್ನು ವಿವರಿಸುತ್ತ ಅವರು ಮಾತನಾಡಿದರು.
   ಜಗತ್ತಿನ ಮೌಢ್ಯ ಆವರಿಸಿದಾಗ, ಅಧರ್ಮದ ತಾಂಡವ ವ್ಯಾಪಿಸಿದಾಗ ಭಗವಂತ ಅವತರಿಸಿ ಧರ್ಮ ಸಂರಕ್ಷಣೆಗೈಯ್ಯುತ್ತಾನೆ. ಸಾತ್ವಿಕವಾದ ದೈವಿಕತೆಯ ಮೂಲಕ ಮಾತ್ರ ಜಗತ್ತಿನ ಶ್ರೇಯ ನೆಲೆನಿಲ್ಲಲು  ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಶ್ರೀಮನ್ನಾರಾಯಣನ ಶಂಖ, ಚಕ್ರ, ಗಧಾ, ಪದ್ಮಗಳು ಶಕ್ತಿ ಸ್ವರೂಪವಾಗಿದ್ದು, ಧರ್ಮ ಸಂರಕ್ಷಣೆ, ಶಿಷ್ಟ ರಕ್ಷಣೆಯ ಪ್ರತೀಕಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಪಂಚಭೂತಗಳಲ್ಲಿ ವಾಯು, ಅಗ್ನಿ ಹಾಗೂ ಜಲಗಳು ಪ್ರಳಯಕಾರಕವಾಗಿದ್ದು, ಅನೀತಿಗೆದುರಾಗಿ ಸಿಡಿದೇಳುತ್ತದೆ ಎಂದು ಅವರು ತಿಳಿಸಿದರು. ಜೀವ ಸೃಷ್ಟಿಗೂ ಪೂರ್ವದವುಗಳಾದ ಪಂಚಭೂತಗಳ ಆರಾಧನೆ, ಅನುಸರಣೆ ಜಗತ್ತಿನ ಅಗತ್ಯವಾಗಿದ್ದು, ಶ್ರೀಕೃಷ್ಣನ ತತ್ವ-ಸಿದ್ದಾಂತಗಳು ಜೀವಕೋಟಿಗಳ ರಕ್ಷಣೆಯೇ ಆಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
  ಶ್ರೀಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದರು. ಬಳಿಕ ವಿದ್ವಾನ್ ಟಿ.ಜಿ.ಗೋಪಾಲಕೃಷ್ಣನ್ ಮತ್ತು ತಂಡದವರಿಂದ ವಯಲಿನ್ ಭಕ್ತಿಗಾನ ರಸಮಂಜರಿ ಪ್ರಸ್ತುತಗೊಂಡಿತು. ವಯಲಿನ್ನಲ್ಲಿ ಬಾಲರಾಜ್, ಅವನೀಶ್ ಶಮರ್ಾ, ಸ್ವಾತಿ ಕುಮಾರ್, ಮೇಂಡೋಲಿನ್ನಲ್ಲಿ ದೇವರಾಜ್ ಮಂಗಳೂರು, ಕೀಬೋಡರ್್ನಲ್ಲಿ ಶಶಾಂಕ್ ಭಟ್, ಮೃದಂಗದಲ್ಲಿ ಅನೂರು ಆರ್.ದತ್ತಾತ್ರೇಯ, ತಬಲಾದಲ್ಲಿ ಅಭಿಜಿತ್ ಶೆಣೈ ಮುಲ್ಕಿ, ವಿದ್ವಾನ್ ವೆಂಕಟರಾಮ್ ಮೊದಲಾದವರು ಸಹಕರಿಸಿದರು.
  ಶನಿವಾರ ಸಂಜೆ ಶ್ರೀಮದ್ ಭಾಗವತ ಸಪ್ತಾಹದ ಮಂಗಲಾಚರಣೆ ನಡೆಯಿತು. ಬಳಿಕ ಬೆಂಗಳೂರಿನ ಇಂದಿರಾ ಶಮರ್ಾ ಬಳಗದವರಿಂದ ಸಂಗೀತ ಸಂಜೆ ಪ್ರಸ್ತುತಗೊಂಡಿತು.
   ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಕರ್ಯಕ್ರಮಗಳು, ಅಘ್ರ್ಯ ಪ್ರಧಾನ ಕಾರ್ಯಕ್ರಮ, ವಿಶೇಷ ಸೇವೆಗಳು ನಡೆಯಲಿವೆ. ಸಂಜೆ 6.30 ರಿಂದ ಮೇಘಾ ಭಟ್ ಅವರಿಂದ ಭಕ್ತಿಸಂಗೀತ, ಬಳಿಕ ಮಂಗಳೂರು ಉರ್ವದ ನಾಟ್ಯಾರಾಧನ ಕಲಾಕೇಂದ್ರದ ವಿದುಷಿಃ ಸುಮಂಗಲಾ ರತ್ನಾಕರ ರಾವ್ ಮತ್ತು ತಂಡದವರಿಂದ ನೃತ್ಯ ವೈಭವ ನಡೆಯಲಿದೆ.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries