HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮನಸ್ಸಿನ ಒಳತೋಟಿ, ತಲ್ಲಣಗಳಿಂದ ಕಾವ್ಯ-ರಾಧಾಕೃಷ್ಣ ಉಳಿಯತ್ತಡ್ಕ
   ಬದಿಯಡ್ಕ: ಅಂತರಂಗದಲ್ಲಿ ಹುಟ್ಟುವ ಭಾವಗಳ ಕ್ರೀಯೆ ಕವಿತೆಗಳಾಗಿವೆ. ಕವಿಯ ಒಳತೋಟಿ, ತಲ್ಲಣಗಳ ಸ್ವರೂಪ ಕಾವ್ಯದಲ್ಲಿ ಧ್ವನಿಸಿ, ಭಾವಗಳ ಸಾಂಧ್ರರೂಪ ಅಕ್ಷರಗಳಲ್ಲಿ ಜೀವಪಡೆಯುತ್ತವೆ ಎಂದು ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
    ಬೆಂಗಳೂರಿನ ಕನರ್ಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ಪೆರಡಾಲ ನವಜೀವನ ಶಾಲಾ ವಠಾರದಲ್ಲಿ ಆಯೋಜಿಸಲಾದ ಕಾಸರಗೋಡು ಜಿಲ್ಲಾ ಘಟಕದ ಉದ್ಘಾಟನೆಯ ಅಂಗವಾಗಿ  ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ವರ್ತಮಾನಕ್ಕೆ ಸ್ಪಂಧಿಸಿ, ಸಾರ್ವಕಾಲಿಕ ಮೌಲ್ಯಗಳಿಂದೊಡಗೂಡಿದ ಕವನಗಳು ಬರಬೇಕು. ಕವನವೆಂದರೆ ಕವಿಯ ಜೀವನಾನುಭವ, ಪ್ರಪಂಚವನ್ನು ತಾನು ಅಂತಚಕ್ಷುಗಳಲ್ಲಿ ನೋಡಿದ ಅಕ್ಷರ ರೂಪದ ಭಾವಗಳು ಎಂದು ಅವರು ಈ ಸಂದರ್ಭ ತಿಳಿಸಿದರು. ಸಾಹಿತ್ಯಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದು ಬರಬೇಕು. ಇದರಿಂದ ಭಾಷೆಯ ಬಳಕೆ, ವರ್ತಮಾನದಲ್ಲಿ ನೆಲೆಗೊಳ್ಳುವಿಕೆಗೆ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
   ಹಿರಿಯ ಶಿಕ್ಷಣ ತಜ್ಞ, ಸಾಹಿತಿ ವಿ.ಬಿ. ಕುಳಮರ್ವ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸಮಗ್ರ ಭಾಷಾ ಚೌಕಟ್ಟನ್ನು ಬೆಳೆಸುತ್ತಾ ಬಂದಿರುವ ಸಾಹಿತ್ಯ ಪ್ರಪಂಚ ಇಂದು ಬಹು ಆಯಾಮಗಳಲ್ಲಿ ವಿಸ್ತರಿಸಲ್ಪಟ್ಟಿದೆ. ಮೂಲ ಪರಿಕಲ್ಪನೆಗಳಿಗೆ ಧಕ್ಕೆಯಾಗದಂತೆ ಮನಸ್ಸುಗಳನ್ನು ಅರಳಿಸುವ ಬರಹಗಳು ಯುವ ಸಮೂಹದಲ್ಲಿ ಹುಟ್ಟಿ ಗಟ್ಟಿಗೊಳ್ಳಲಿ ಎಂದು ಕರೆನೀಡಿದರು.
   ಬಳಿಕ ನಡೆದ ಕವಿಗೋಷ್ಠಿಯಲ್ಲಿ ಶ್ರೀಕೃಷ್ಣಯ್ಯ ಅನಂತಪುರ, ಆನಂದ ಕೋಲಾರ, ದೇವರಾಜ್ ಆಚಾರ್ಯ, ಜುನೈದ್ ಕೂಡಿಗೆ ಮಡಿಕೇರಿ, ದಯಾನಂದ ರೈ ಕಳ್ವಾಜೆ, ಹರೀಶ್ ಪೆರ್ಲ, ಜ್ಯೋಸ್ನ್ಸಾ ಕಡಂದೇಲು, ಶ್ವೇತಾ ಕಜೆ, ಮಧು ಕೋಲಾರ, ನರಸಿಂಹ ಭಟ್ ಏತಡ್ಕ, ಶಂಕರ ನಾಯಕ್ ಕುಕ್ಕಿಲ, ಮಣಿರಾಜ್ ವಾಂತಿಚಾಲ್, ಸುಶೀಲಾ ಪದ್ಯಾಣ, ಜಂಶೀರ್ ಮಂಗಳೂರು, ಪರಿಣಿತ ರವಿ, ಸುಂದರ ಬಾರಡ್ಕ, ಶಶಿಕಲಾ ಕುಂಬಳೆ, ಲತಾ ಆಚಾರ್ಯ ಬನಾರಿ, ಸುಭಾಷ್ ಪೆರ್ಲ ಮೊದಲಾದವರು ಸ್ವರಚಿತ ಕವಿತೆಗಳನ್ನು ವಾಚಿಸಿದರು.
   ರಾಜ್ಯ ಯುವ ಬರಹಗಾರರ ಒಕ್ಕೂಟದ ಕನರ್ಾಟಕ ರಾಜ್ಯಾಧ್ಯಕ್ಷ ಹೂಹಳ್ಳಿ ನಾಗರಾಜ್,ಜಿಲ್ಲಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಉಪಸ್ಥಿತರಿದ್ದು ಮಾತನಾಡಿದರು.
   ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries