HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಕಾಟುಕುಕ್ಕೆಯಲ್ಲಿ ಸಂಸ್ಮರಣೆ
     ಪೆರ್ಲ: ಸಾಮಾಜಿಕ ಕಳಕಳಿಯ ಬದುಕು-ಸೇವೆಗಳಿಂದ ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುತ್ತಾನೆ. ಅಂತಹ ಮಹಾತ್ಮರ ಸ್ಮರಣೆ ಯುವ ಪೀಳಿಗೆಗೆ ಮಾರ್ಗದಶರ್ಿಯಾಗಿ ಬೆಳಕು ನೀಡುತ್ತದೆ ಎಂದು ಪ್ರಗತಿಪರ ಕೃಷಿಕ, ಧಾಮರ್ಿಕ ಮುಂದಾಳು ಕೃಷ್ಣಪ್ರಸಾದ ಭಂಡಾರಿ ಸಾಜ ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾಟುಕುಕ್ಕೆ  ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ನೇತೃತ್ವದಲ್ಲಿ ಬುಧವಾರ ಶಾಲಾ ಪರಿಸರದಲ್ಲಿ ನಡೆದ ಶಾಲೆಯ ನಿವೃತ್ತ ಪ್ರಬಂಧಕ ಡಿ. ಶಂಕರ ಮೋಹನದಾಸ ಆಳ್ವ ಅವರ ಪ್ರಥಮ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಸಮಸ್ಮರಣಾ ಭಾಷಣಗೈದು ಅವರು ಮಾತನಾಡಿದರು.
   ಅತಿ ಹಿಂದುಳಿದ ಗ್ರಾಮೀಣ ಪ್ರದೇಶವಾದ ಕಾಟುಕುಕ್ಕೆ ಇಂದು ಗುರುತಿಸುವಂತೆ ಬೆಳವಣಿಗೆ ಪಡೆದುದರ ಹಿಂದೆ ದಿ. ಆಳ್ವರ ಪರಿಶ್ರಮ ಅತ್ಯಪೂರ್ವವಾದುದು. ಜನಸಾಮಾನ್ಯರ ವಿದ್ಯಾಭ್ಯಾಸ ಸೌಕರ್ಯಗಳಿಗೆ ವಿದ್ಯಾದೇಗುಲವನ್ನು ನಿಮರ್ಿಸುವಲ್ಲಿ ಅವರು ನೀಡಿರುವ ತ್ಯಾಗದ ಪ್ರತೀಕವಾಗಿ ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾಸಂಸ್ಥೆ ರೂಪುಗೊಂಡಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
   ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿ. ಸಂಜೀವ ರೈ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಜಿಲ್ಲಾ ಪಂಚಾಯತು ಸದಸ್ಯ, ಕೇರಳ ಸರಕಾರದ ಸಂಸ್ಕೃತಿ ಇಲಾಖೆಯ ಭಾರತ್ ಭವನ್ ನ ಸದಸ್ಯ ಶಂಕರ ರೈ ಮಾಸ್ತರ್ ಮಾತನಾಡಿ, ದಿ. ಆಳ್ವರ ಬದುಕು ಎಲ್ಲರಿಗೂ ಮಾದರಿಯಾದುದು. ಜೀವನದ ಬಹುತೇಕ ಅವಧಿಯನ್ನು ಶಾಲೆಯ ಶ್ರೇಯಸ್ಸಿಗಾಗಿ ತೆತ್ತು ಎಲ್ಲರಿಗೂ ಮಾದರಿಯಾದವರು ಎಂದು ನೆನಪಿಸಿದರು. ತಮ್ಮ ಖಾಸಗೀ ಜೀವನಕ್ಕೆ ಮಹತ್ವ ನೀಡದೆ ಸಾಮಾಜಿಕವಾಗಿ ಬಡಬಗ್ಗರ ಬಗ್ಗೆ ಕಾಳಜಿ ವಹಿಸಿ, ಸಾಮಾಜಿಕ ಸೇವೆಯಲ್ಲೇ ಕೊನೆ ಉಸಿರಿರುವಲ್ಲಿವರೆಗೂ ಬದುಕಿದ ಅವರ ಯಶೋಗಾಥೆಯ ದಾಖಲೀಕರಣ ಆಗಬೇಕು ಎಂದು ತಿಳಿಸಿದರು.
  ಶಾಲಾ ವ್ಯವಸ್ಥಾಪಕ ಮಿತ್ತೂರು ಪುರುಷೋತ್ತಮ ಭಟ್, ರಾಮಕೃಷ್ಣ ಶಿವಪ್ರಸಾದ ಆಳ್ವ, ಆಡಳಿತ ಸಮಿತಿ ಸದಸ್ಯ ಶಿವರಾಮ ಭಟ್ ಪಡ್ಪು, ಚಾಕಟೆ ಗೋಪಾಲಕೃಷ್ಣ ಭಟ್, ಸಂದೇಶ್ ಕುಮಾರ್ ರೈ, ವಿನೋದ ಶೆಟ್ಟಿ, ಸುಧೀರ್ ಕುಮಾರರ್ ರೈ, ನಿವೃತ್ತ ಅಧ್ಯಾಪಕ ಕೆ.ಈಶ್ವರ ಭಟ್ ಕಾನ, ಪ್ರಾಂಶುಪಾಲ ಕೆ.ಪದ್ಮನಾಭ ಶೆಟ್ಟಿ, ನಿವೃತ್ತ ಶಾಲಾ ಸಹಾಯಕ ಭಾಸ್ಕರ ಮಣಿಯಾಣಿ  ಉಪಸ್ಥಿತರಿದ್ದು ಮಾತನಾಡಿದರು.
  ಲೋಕನಾಥ ಶೆಟ್ಟಿ ಸ್ವಾಗತಿಸಿ,  ವಾಣಿ ಟೀಚರ್ ವಂದಿಸಿದರು. ರಾಜೇಶ್ ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ರಕ್ಷಕ ಶಿಕ್ಷಕ ಸಮಿತಿ ಸದಸ್ಯರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಶಾಲಾ ಎನ್ಸಿಸಿ ವಿದ್ಯಾಥರ್ಿಗಳ ಫರೇಡ್ ಹಾಗೂ ಗೌರವಾರ್ಪಣೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries